Kissing In Car: ಕಾರಿನಲ್ಲಿ ಕಿಸ್ ಮಾಡುವುದು ಕಾನೂನುಬಾಹಿರವೇ? ಕಾರಿನಲ್ಲಿ ಕಿಸ್ ಮಾಡುವುದು ನಿಜಕ್ಕೂ ಅಪರಾಧವೇ? ಈ ಕುರಿತಂತೆ ನಿಮ್ಮ ಮನಸ್ಸಿನಲ್ಲಿಯೂ ಹಲವು ಪ್ರಶ್ನೆಗಳಿರಬಹುದು. ವಾಸ್ತವವಾಗಿ, ತಮ್ಮ ಖಾಸಗಿ ವಾಹನದಲ್ಲಿ (ಕಾರಿನಲ್ಲಿ) ಜನರು ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಕಾನೂನುಗಳೂ ಇಲ್ಲ. ಆದರೆ, ಐಪಿಸಿ ಸೆಕ್ಷನ್ 294 ಅನ್ನು ಉಲ್ಲೇಖಿಸುವ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಮಾಡುವ ಯಾವ ಕೆಲಸಗಳು ಅಪರಾಧ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 ಏನು ಹೇಳುತ್ತೆ?
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294ರ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ವ್ಯಕ್ತಿ ಅಸಭ್ಯವಾಗಿ ನಡೆದುಕೊಂಡರೆ, ಅಶ್ಲೀಲ ಕೃತ್ಯಗಳನ್ನು ಎಸಗಿದರೆ, ಅಲ್ಲಿರುವ ಜನರು ಅದನ್ನು ಅಶ್ಲೀಲ ಎಂದು ಪರಿಗಣಿಸಿದರೆ ಅಂತಹ ಕೃತ್ಯಗಳನ್ನು ಅಪರಾಧ ಎಂದು ಪರಿಗಣಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಅಂತಹ ಅಶ್ಲೀಲ ಕೃತ್ಯವನ್ನು ಮಾಡಿದ ವ್ಯಕ್ತಿ ಶಿಕ್ಷೆಗೆ ಅರ್ಹನಾಗಿರುತ್ತಾನೆ. ಐಪಿಸಿ ಸೆಕ್ಷನ್ 294ರ ನಿಬಂಧನೆಗಳ ಪ್ರಕಾರ ಆ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗುತ್ತದೆ. ಆದಾಗ್ಯೂ, ಸೆಕ್ಷನ್ 294ರ ಅಡಿಯಲ್ಲಿ ಬಂಧಿತ ಅಪರಾಧಿಯು ಜಾಮೀನು ಪಡೆಯಬಹುದಾಗಿದೆ.
ಇದನ್ನೂ ಓದಿ- Driving Licence ಮರೆತು ವಾಹನ ಚಲಾಯಿಸಿದರೆ ಟೆನ್ಶನ್ ಪಡಬೇಡಿ… ಹೀಗೆ ಮಾಡಿದರೆ ಕೆಲಸ ನಡೆಯುತ್ತೆ
ಐಪಿಸಿ ಸೆಕ್ಷನ್ 294ರ ನಿಯಮ ನಿಬಂಧನೆಗಳು:
>> ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಕೃತ್ಯಗಳ ಅಪರಾಧವನ್ನು ವ್ಯಾಖ್ಯಾನಿಸುತ್ತದೆ ಮತ್ತು ಶಿಕ್ಷೆಯನ್ನು ಸೂಚಿಸುತ್ತದೆ.
>> ಐಪಿಸಿ ಸೆಕ್ಷನ್ 294ರ ಅಡಿಯಲ್ಲಿ, ತಪ್ಪಿತಸ್ಥರಿಗೆ ಸರಳ ಜೈಲು ಶಿಕ್ಷೆಯನ್ನು ವಿಧಿಸಬಹುದು. ಈ ಶಿಕ್ಷೆಯು ಅಪರಾಧದ ಆಧಾರದ ಮೇಲೆ ಮೂರು ತಿಂಗಳವರೆಗೆ ಇರುತ್ತದೆ.
>> ಇದರಲ್ಲಿ ಅಪರಾಧಿಗೆ ದಂಡವನ್ನು ಕೂಡ ವಿಧಿಸಬಹುದು.
>> ನ್ಯಾಯಾಲಯವು ಪ್ರಕರಣದ ಗಂಭೀರತೆ ಮತ್ತು ಆರೋಪಿಯ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಪೂರ್ವಾಪರವನ್ನು ಸಮಾಲೋಚಿಸಿ ಈ ಕುರಿತಂತೆ ನಿರ್ಧರಿಸುತ್ತದೆ.
ಕಾರಿನಲ್ಲಿ ಚುಂಬಿಸುವುದು ಅಪರಾಧವೇ?
ಕಾರು ಸಾರ್ವಜನಿಕ ಸ್ಥಳದಲ್ಲಿದ್ದರೆ, ಸುತ್ತಲೂ ಜನರಿದ್ದಾಗ ಕಾರಿನಲ್ಲಿ ಚುಂಬಿಸಿದರೆ, ಅದು ಅಲ್ಲಿರುವ ಜನರಿಗೆ ಮುಜುಗರ ಉಂಟು ಮಾಡುವುದು ಅಥವಾ ಆ ಜನರು ಇದನ್ನು ಅಶ್ಲೀಲವೆಂದು ಪರಿಗಣಿಸಿದರೆ ಅದು ಐಪಿಸಿಯ ಸೆಕ್ಷನ್ 294 ರ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ. ಆದಾಗ್ಯೂ, ಇದು ಇನ್ನೂ ಹಲವು ಆಯಾಮಗಳನ್ನು ಒಳಗೊಂಡಿರುತ್ತದೆ ಎಂದು ದೆಹಲಿ ಹೈಕೋರ್ಟ್ ವಕೀಲ ಆನಂದ್ ಕಟಿಯಾರ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.