ಬೆಂಗಳೂರು : New Year Horoscope : ಜ್ಯೋತಿಷ್ಯದಲ್ಲಿ ನಕ್ಷತ್ರ ಮತ್ತು ಗ್ರಹಗಳ ಸ್ಥಾನ ಬಹಳ ಮುಖ್ಯ. ವ್ಯಕ್ತಿಯ ಜನ್ಮ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಆಧರಿಸಿ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಈ ಆಧಾರದಲ್ಲಿ ಹೊಸ ವರ್ಷದ ರಾಶಿಫಲದ ಪ್ರಕಾರ, ಕೆಲವು ರಾಶಿಯವರಿಗೆ 2023ನೇ ವರ್ಷವು ಭಾರೀ ಅದೃಷ್ಟವನ್ನು ತರಲಿದೆ. ಸ್ಥಾನಮಾನ, ಹಣ ಮತ್ತು ಪ್ರತಿಷ್ಠೆ ಈ ವಿಷಯಗಳಲ್ಲಿ ಯಾವುದಕ್ಕೂ ಕೊರತೆ ಇರುವುದೇ ಇಲ್ಲ. ಅದರಲ್ಲೂ ಐದು ರಾಶಿಯವರು ಏನೇ ಕೆಲಸ ಮಾಡಿದರೂ ಅದೃಷ್ಟ ಅವರ ಕೈ ಹಿಡಿಯಲಿದೆ. ಒಂದು ರೀತಿಯಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎಂದರೂ ತಪ್ಪಾಗುವುದಿಲ್ಲ.
ಮಿಥುನ ರಾಶಿ : ಹೊಸ ವರ್ಷವು ಮಿಥುನ ರಾಶಿಯವರ ಪಾಲಿಗೆ ಅದೃಷ್ಟವನ್ನು ಹೊತ್ತು ತರಲಿದೆ. ವರ್ಷದ ಮೊದಲ ತಿಂಗಳಿನಿಂದಲೇ ಈ ರಾಶಿಯವರಿಗೆ ಒಳ್ಳೆಯ ಸಮಯ ಆರಂಭವಾಗಲಿದೆ. ಇವರ ಪಾಲಿಗೆ ಹೆಚ್ಚು ಹೆಚ್ಚು ಅವಕಾಶಗಳು ಎದುರಾಗಲಿವೆ. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಇವರ ಯಶಸ್ಸು ತಡೆಯುವುದು ಸಾಧ್ಯವಾಗುವುದೇ ಇಲ್ಲ. ಆದಾಯ ಹೆಚ್ಚಾಗುತ್ತದೆ. ಉನ್ನತ ಸ್ಥಾನಕ್ಕೆ ಏರಲಿದ್ದಾರೆ.
ಇದನ್ನೂ ಓದಿ : ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಮೇಲೆ ಧನವೃಷ್ಟಿ ಮಾಡಲಿದ್ದಾನೆ ಸೂರ್ಯ
ಸಿಂಹ ರಾಶಿ : ಈ ರಾಶಿಯವರಿಗೆ ಜನವರಿ ತಿಂಗಳಿಂದಲೇ ಸುವರ್ಣ ದಿನಗಳು ಪ್ರಾರಂಭವಾಗುತ್ತವೆ. ಜನವರಿ 17 ರಂದು ಶನಿಗ್ರಹ ತನ್ನ ರಾಶಿಯನ್ನು ಬದಲಾಯಿಸಿ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯ ರಾಶಿ ಬದಲಾವಣೆ ಸಿಂಹ ರಾಶಿಯವರ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕೆಲಸ ಮಾಡುತ್ತಿರಲಿ ಅಥವಾ ವ್ಯವಹಾರ ಮಾಡುತ್ತಿರಲಿ ಸಿಂಹ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
ತುಲಾ ರಾಶಿ : ತುಲಾ ರಾಶಿಯವರ ಪಾಲಿಗೆ 2023 ಅತ್ಯತ್ತಮ ವರ್ಷವಾಗಿರಲಿದೆ. ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳಿಗೆ ಅಂತ್ಯ ಸಿಗಲಿದೆ. ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಈ ವರ್ಷ ಚುರುಕು ಪಡೆದು ಪೂರ್ಣಗೊಳ್ಳಲಿದೆ. ನಿರೀಕ್ಷೆಗೆ ಮೀರಿದ ಹಣ ಗಳಿಕೆ ಸಾಧ್ಯವಾಗುತ್ತದೆ.
ಇದನ್ನೂ ಓದಿ : Career Horoscope 2023 : ಹೊಸ ವರ್ಷದಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ ಈ ರಾಶಿಯವರು
ವೃಶ್ಚಿಕ ರಾಶಿ : ಹೊಸ ವರ್ಷದಲ್ಲಿ ಜೀವನದಲ್ಲಿ ನೆಮ್ಮದಿ ಹೆಚ್ಚಾಗುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆದಾಯ ಹೆಚ್ಚಾಗುತ್ತದೆ. ಆದರೆ ವೆಚ್ಚಗಳು ಸಹ ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ಖರ್ಚು ಮಾಡುವಾಗ ಯೋಚನೆ ಮಾಡಿ ಖರ್ಚು ಮಾಡಿ. ಕೈಯ್ಯಲ್ಲಿ ಹಣ ಇದೆ ಎಂದು ಮನಸ್ಸಿಗೆ ಬಂದಂತೆ ಹಣದ ಬಳಕೆ ಬೇಡ. ಒಟ್ಟಾರೆಯಾಗಿ ನೋಡುವುದಾದರೆ 2023ರ ವರ್ಷವು ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ನೀಡುತ್ತದೆ.
ಕುಂಭ ರಾಶಿ : ಗುರು ಗ್ರಹವು ಕುಂಭ ರಾಶಿಯವರ ಕೈ ಹಿಡಿಯಲಿದೆ. ಗುರು ಗ್ರಹದ ರಾಶಿ ಬದಲಾವಣೆ ಕುಂಭ ರಾಶಿಯವರಿಗೆ ಅದೃಷ್ಟ ಬೆಳಗುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುತ್ತದೆ. ಹೂಡಿಕೆ ಮಾಡುವುದಾದರೆ ಈ ವರ್ಷ ಒಳ್ಳೆಯ ಸಮಯ. ಈ ವರ್ಷ ಮಾಡಿದ ಹೂಡಿಕೆಯಲ್ಲಿ ಭಾರೀ ಲಾಭ ಪಡೆಯುವುದು ಸಾಧ್ಯವಾಗುತ್ತದೆ. ಆದಾಯ ಹೆಚ್ಚಲಿದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.