"ಗುಲ್ಟು" ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನವೀನ್ ಶಂಕರ್ ನಾಯಕನಾಗಿ ನಟಿಸಿರುವ ಚಿತ್ರ "ಮೂಲತಃ ನಮ್ಮವರೇ". ಕಿರಣ್ ಗೋವಿಂದರಾಜ್ ನಿರ್ಮಿಸಿ, ಚೇತನ್ ಭಾಸ್ಕರಯ್ಯ ನಿರ್ದೇಶಿಸಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚಿಗೆ ನಡೆಯಿತು.
ಇದನ್ನೂ ಓದಿ: Ram Charan : ರಾಮ್‌ಚರಣ್ ಜೊತೆ ಕನ್ನಡಿಗ ಡೈರೆಕ್ಟರ್ ಸಿನಿಮಾ..! ಯಾರು ಆ ನಿರ್ದೇಶಕ..?
ರಂಗಭೂಮಿ ನಂಟಿರುವ ನನಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ. ಹಿಂದೆ ಕೆಲವು ಕಿರುಚಿತ್ರಗಳ ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಕಥೆ ಸಿದ್ದವಾದ ನಂತರ, ನಾಯಕನ ಹುಡುಕಾಟದಲ್ಲಿದ್ದಾಗ ನವೀನ್ ಸಿಕ್ಕರು. ಆಗಷ್ಟೇ ಅವರ " ಗುಲ್ಟು" ಚಿತ್ರ ಬಿಡುಗಡೆಯಾಗಿತ್ತು. "ಮೂಲತ: ನಮ್ಮವರೇ" ಇದೊಂದು ಕೌಟುಂಬಿಕ ಚಿತ್ರ. ಅಪ್ಪ - ಮಗನ ಬಾಂಧವ್ಯದ ಸನ್ನಿವೇಶಗಳೇ ಚಿತ್ರದ ಹೈಲೆಟ್. ಬೆಂಗಳೂರು ಹಾಗೂ ಕರಾವಳಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ನವೀನ್ ಶಂಕರ್ ಬಿಟ್ಟರೆ ಬಹುತೇಕರಿಗೆ ಇದು ಮೊದಲ ಸಿನಿಮಾ ಎಂದ ನಿರ್ದೇಶಕ ಚೇತನ್ ಭಾಸ್ಕರಯ್ಯ, ತಾವು ಕೂಡ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದರು.
ಈ ತಂಡದವರು ಎಲ್ಲವನ್ನೂ ಸಿದ್ದಮಾಡಿಕೊಂಡು, ನಾಯಕನ ಹುಡುಕಾಟದಲ್ಲಿದ್ದರು. ಕೆಲವು ನಾಯಕರನ್ನು ಸಂಪರ್ಕ ಕೂಡ ಮಾಡಿದ್ದರು. ಆನಂತರ ಇವರಿಗೆ ನಾನು ಸಿಕ್ಕಿದೆ. ಕಥೆ ತುಂಬಾ ಚೆನ್ನಾಗಿದೆ. ನಾನು ಇಲ್ಲಿಯವರೆಗೂ ಮಾಡಿರದ ಕಥೆ ಎನ್ನಬಹುದು. ಅಪ್ಪ - ಮಗನ ಸೆಂಟಿಮೆಂಟ್ ಸನ್ನಿವೇಶಗಳು ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ. ಶೋಭ್ ರಾಜ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮುಂಬೈನ ತಾನ್ಯ ಈ ಚಿತ್ರದ ನಾಯಕಿ. ಅವಿನಾಶ್, ಮಾಳವಿಕ ಅವಿನಾಶ್, ತೆಲುಗಿನ ಸತ್ಯಪ್ರಕಾಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಈ ಹಿಂದಿನ ಚಿತ್ರಗಳಲ್ಲಿ ಆಕ್ಷನ್, ಡ್ಯಾನ್ಸ್ ಗಳಿಗೆ ಅಷ್ಟು ಅವಕಾಶವಿರಲಿಲ್ಲ. ಈ ಚಿತ್ರದಲ್ಲಿ ಎಲ್ಲವೂ ಇದೆ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ನಟ ನವೀನ್ ಶಂಕರ್ ಹೇಳಿದರು.
ನಾನು ಹಾಗೂ ನಿರ್ದೇಶಕ ಚೇತನ ಸ್ನೇಹಿತರು. ನಟನಾಗಬೇಕೆಂದು ಆಸೆಯಿತ್ತು. ಆದರೆ ನಿರ್ಮಾಪಕನಾದೆ. ನಮ್ಮ ಚಿತ್ರ ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಕಿರಣ್ ಗೋವಿಂದರಾಜ್.
ಇದನ್ನೂ ಓದಿ: Viral video : ಚಲಿಸುವ ಟ್ರೈನ್ ಬಾಗಿಲಲ್ಲಿ ಕುಳಿತ ಬಾಲಿವುಡ್ ನಟ...! ಮುಂದೆ ಆಗಿದ್ದೇನು?
ಚಿತ್ರದಲ್ಲಿ ಅಭಿನಯಿಸಿರುವ ಕಾವ್ಯ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಕೇರಳದ ಚಂತು ಛಾಯಾಗ್ರಹಣ, ಏಕ್ ಕ್ಯಾಬ್ ದಿ ಬ್ಯಾಂಡ್ ಸಂಗೀತ ನಿರ್ದೇಶನ ಹಾಗೂ ಜುವೀನ್ ಸಿಂಗ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.