ನವದೆಹಲಿ: ಮಹಿಳಾ 20-20 ವಿಶ್ವಕಪ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಭಾರತ ತಂಡವು ಆಸ್ಟ್ರೇಲಿಯಾದ ವಿರುದ್ದ ಸುಲಭ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಸ್ಮೃತಿ ಮಂದಣ ಅವರ ಭರ್ಜರಿ(83) ಬ್ಯಾಟಿಂಗ್ ನೆರವಿಂದ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಇವರಿಗೆ ಸಾಥ್ ನೀಡಿದ ಹರ್ಮನ್ ಪ್ರೀತ್ ಕೌರ್ ಕೇವಲ 27 ಎಸೆತಗಳಲ್ಲಿ 43 ರನ್ಗಳಿಸಿದರು.ಭಾರತ ತಂಡವು ನೀಡಿದ 168 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಆಷ್ಟ್ರೇಲಿಯಾ ಮಹಿಳಾ ತಂಡವು ಕೇವಲ 9 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಲಷ್ಟೇ ಶಕ್ತವಾಯಿತು.
From Mandhana's career-best knock to Perry's three-wicket haul to a match-defining effort by the Indian spinners – revisit all the highlights from the #WT20 match between India and Australia.
WATCH 🎥
👉 https://t.co/RV5tLBkg8i pic.twitter.com/UXZsEE5DrH— ICC World Twenty20 (@WorldT20) November 18, 2018
ಆಷ್ಟ್ರೇಲಿಯಾ ತಂಡದ ಪರ ಎಲ್ಸೇ ಪೆರಿ ಅವರು ಅಜೇಯ 39 ರನ್ ಗಳಿಸಿದ್ದು ಬಿಟ್ಟರೆ ಉಳಿದವರಾರು ಕೂಡ 20 ಗಡಿ ದಾಟಲಿಲ್ಲ.ಭಾರತದ ಪರ ಭರ್ಜರಿ ಬೌಲಿಂಗ್ ಮಾಡಿದ ಅನುಜಾ ಪಾಟೀಲ್ 3 ವಿಕೆಟ್ ತಗೆದುಕೊಂಡು ಮಿಂಚಿದರು.