ಮೋದಿ ಸರ್ಕಾರದ ಮಹಾ ಯೋಜನೆ, ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ತೆರೆಯಲಿದೆ ಪಾಸ್​ಪೋರ್ಟ್ ಸೇವಾ ಕೇಂದ್ರ!

ಈ ನೂತನ ಕಾರ್ಯಕ್ರಮದಡಿ ಪಾಸ್​ಪೋರ್ಟ್ ಗೆ ಅರ್ಜಿ ಸಲ್ಲಿಕೆ ಸುಲಭವಾಗಿದ್ದು, ವಿತರಣೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿ.ಕೆ.ಸಿಂಗ್ ಹೇಳಿದರು.

Last Updated : Nov 22, 2018, 07:33 PM IST
ಮೋದಿ ಸರ್ಕಾರದ ಮಹಾ ಯೋಜನೆ, ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ತೆರೆಯಲಿದೆ ಪಾಸ್​ಪೋರ್ಟ್ ಸೇವಾ ಕೇಂದ್ರ! title=

ನ್ಯೂಯಾರ್ಕ್: ಜನರಿಗೆ ಸುಲಭವಾಗಿ ಪಾಸ್​ಪೋರ್ಟ್ ಸೇವೆ ಒದಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್​ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಹೇಳಿದರು.

ಎಲ್ಲಾ 543 ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್​ಪೋರ್ಟ್ ಸೇವಾ ಕೇಂದ್ರ
ಅಮೆರಿಕದ ಭಾರತೀಯ ರಾಯಭಾರ ಕಚೇರಿಯಲ್ಲಿ ಪಾಸ್​ಪೋರ್ಟ್ ಸೇವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಎಲ್ಲಾ 543 ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್​ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಭಾರತದಲ್ಲಷ್ಟೇ ಅಲ್ಲದೆ, ವಿದೇಶದಲ್ಲಿಯೂ ಭಾರತೀಯರಿಗೆ ಪಾಸ್​ಪೋರ್ಟ್ ಸೇವೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ಭಾರತದಲ್ಲಿ ಪಾಸ್​ಪೋರ್ಟ್ ಸೇವಾ ಕಾರ್ಯಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಪಾಸ್​ಪೋರ್ಟ್ ವಿತರಣೆ ಸರಳಗೊಳಿಸಲಾಗಿದೆ. ಈ ಯೋಜನೆಯು ವಿದೇಶದಲ್ಲಿರುವ ಭಾರತೀಯರಿಗೆ ಉತ್ತಮ ಸೇವೆಗಳನ್ನು ಒದಗಿಸಲಿದೆ. ಈ ಸೇವೆ ಭಾರತದ ನೈಜ ನಾಗರಿಕರಿಗೆ ಮಾತ್ರ ದೊರೆಯಲಿದೆ. ಈ ನೂತನ ಕಾರ್ಯಕ್ರಮದಡಿ ಪಾಸ್​ಪೋರ್ಟ್ ಗೆ ಅರ್ಜಿ ಸಲ್ಲಿಕೆ ಸುಲಭವಾಗಿದ್ದು, ವಿತರಣೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿ.ಕೆ.ಸಿಂಗ್ ಹೇಳಿದರು.

2019ರ ಮಾರ್ಚ್ ಒಳಗೆ ಪಾಸ್​ಪೋರ್ಟ್ ಸೇವಾ ಕೇಂದ್ರಗಳ ಆರಂಭ
ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ 2019ರ ಮಾರ್ಚ್ ಒಳಗೆ ಪಾಸ್​ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಿದ್ದು, ಎಲ್ಲಾ ಮುಖಿ ಅಂಚೆ ಕಚೇರಿಗಳಲ್ಲಿ ಪಾಸ್​ಪೋರ್ಟ್ ಸೇವೆ ಒದಗಿಸುವ ಯೋಜನೆಯಿದೆ. ಹೀಗಾಗಿ ಪಾಸ್​ಪೋರ್ಟ್ ಸೇವೆಗಾಗಿ ನಾಗರಿಕರು 50-60 ಕಿ.ಮೀ. ದೂರ ಹೋಗುವ ಅಗತ್ಯವಿಲ್ಲ ಎಂದರು. 

Trending News