Gold Price Today : ವರ್ಷದ ಕೊನೆಯ ವ್ಯವಹಾರ ದಿನವಾದ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನದ ಬೆಲೆ ಶೇ.0.06 ರಷ್ಟು ಕುಸಿತದೊಂದಿಗೆ ವಹಿವಾಟು ನಡೆಸುತ್ತಿದೆ. ಇದಲ್ಲದೇ ಇಂದು ಬೆಳ್ಳಿ ಬೆಲೆಯಲ್ಲಿ ಶೇ.0.12ರಷ್ಟು ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಅಗ್ಗದ ಬೆಲೆಗೆ ಖರೀದಿಸಬಹುದು.
ಎಷ್ಟು ಅಗ್ಗವಾಯಿತು ಚಿನ್ನ ? :
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ 33 ರೂ.ಗಳಷ್ಟು ಇಳಿಕೆಯಾಗಿದೆ. ಈ ಇಳಿಕೆಯ ನಂತರ ಚಿನ್ನದ ಬೆಲೆ 10 ಗ್ರಾಂಗೆ 54,938 ರೂ. ಆಗಿದೆ. ಹೊಸ ವರ್ಷದಲ್ಲಿ ಚಿನ್ನ ದಾಖಲೆ ಮಟ್ಟ ತಲುಪಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಇದನ್ನೂ ಓದಿ : LIC: ಎಲ್ಐಸಿ ವಿಲೀನದ ಕುರಿತು ಮಹತ್ವದ ಅಪ್ಡೇಟ್ ಪ್ರಕಟ ಇಲ್ಲಿದೆ ಡೀಟೇಲ್ಸ್
ಬೆಳ್ಳಿಯೂ ಅಗ್ಗ :
ಇದರ ಹೊರತಾಗಿ ಬೆಳ್ಳಿ ಬೆಲೆಗಳನ್ನು ನೋಡುವುದಾದರೆ, ಬೆಳ್ಳಿಯ ಬೆಲೆಯು 87 ರೂ. ಕುಸಿತದೊಂದಿಗೆ ಕೆಜಿಗೆ 69680 ರೂಪಾಯಿ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ವಹಿವಾಟಿನಲ್ಲಿ, ಬೆಳ್ಳಿಯ ಬೆಲೆ 767 ರೂಪಾಯಿಗಳ ಏರಿಕೆಯೊಂದಿಗೆ ಪ್ರತಿ ಕೆಜಿಗೆ 69780 ರೂಪಾಯಿ ತಲುಪಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿತಿ :
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಹೆಚ್ಚಳವಾಗಿದೆ. ಚಿನ್ನದ ಬೆಲೆಗಳು ಶೇಕಡಾ 0.64 ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್ 1,817.53 ಡಾಲರ್ ತಲುಪಿದೆ. ಇದಲ್ಲದೇ ಬೆಳ್ಳಿಯ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ಬೆಳ್ಳಿ ಬೆಲೆಗಳು 1.79 ಪ್ರತಿಶತದಷ್ಟು ಜಿಗಿತ ಕಂಡಿದ್ದು, ಪ್ರತಿ ಔನ್ಸ್ 23.97 ಡಾಲರ್ ಆಗಿದೆ.
ಇದನ್ನೂ ಓದಿ : Minimum Wage: ದಿನಗೂಲಿ ನೌಕರರ ಪಾಲಿಗೆ ಇಲ್ಲಿದೆ ಭಾರಿ ಸಂತಸದ ಸುದ್ದಿ, ಜಬರ್ದಸ್ತ್ ಪ್ಲಾನ್ ನಲ್ಲಿ ಮೋದಿ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.