LIC: ಎಲ್ಐಸಿ ವಿಲೀನದ ಕುರಿತು ಮಹತ್ವದ ಅಪ್ಡೇಟ್ ಪ್ರಕಟ ಇಲ್ಲಿದೆ ಡೀಟೇಲ್ಸ್

LIC Latest Update: ಈಗ ಖಾಸಗಿ ವಲಯದವರಿಗೆ ಎಲ್‌ಐಸಿಯಲ್ಲಿ ಅಧ್ಯಕ್ಷರಾಗುವ ಅವಕಾಶ ಸಿಗಲಿದೆ. 66 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಲ್ಐಸಿ ಖಾಸಗಿ ಅಧ್ಯಕ್ಷರ ಕೈಸೇರಲಿದೆ ಎಂಬುದು ಇಲ್ಲಿ ಗಮನಾರ್ಹ. ಬನ್ನಿ ವಿಸ್ತೃತವಾಗಿ ತಿಳಿದುಕೊಳ್ಳೋಣ.  

Written by - Nitin Tabib | Last Updated : Dec 29, 2022, 10:36 PM IST
  • ಪ್ರಸ್ತಾವಿತ ತಿದ್ದುಪಡಿಗಳು ದೇಶದಲ್ಲಿ ಜೀವ ಮತ್ತು ಜೀವೇತರ ವಿಮಾ ಪಾಲಿಸಿಗಳನ್ನು ಮಾರಾಟ ಮಾಡಲು ಒಂದೇ ಒಂದು ಮಾನ್ಯತೆ ಪಡೆದ ಕಂಪನಿ ಇರಬೇಕು ಎಂದು ಹೇಳುತ್ತದೆ,
  • ಇದು ಅಗತ್ಯವಿರುವ ಕನಿಷ್ಠ ಬಂಡವಾಳವನ್ನು ಸೂಚಿಸುವ ಮೂಲಕ ಶಾಸನಬದ್ಧ ಮಿತಿಗಳನ್ನು ತೆಗೆದುಹಾಕಲು ವಿಮಾ ನಿಯಂತ್ರಕಕ್ಕೆ ಅನುಕೂಲವಾಗುತ್ತದೆ.
LIC: ಎಲ್ಐಸಿ ವಿಲೀನದ ಕುರಿತು ಮಹತ್ವದ ಅಪ್ಡೇಟ್ ಪ್ರಕಟ ಇಲ್ಲಿದೆ ಡೀಟೇಲ್ಸ್ title=
LIC Latest News

LIC Merger News: ದೇಶದಲ್ಲಿ ನಡೆಯುತ್ತಿರುವ ಖಾಸಗೀಕರಣ ಮತ್ತು ವಿಲೀನದ ನಡುವೆ ಮತ್ತೊಂದು ಮಹತ್ವದ ಸುದ್ದಿ ಪ್ರಕಟಗೊಂಡಿದೆ. ಹೌದು, ಇದೀಗ ದೇಶದ ನಾಲ್ಕು ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಗಳನ್ನು ಎಲ್ಐಸಿಯೊಂದಿಗೆ ವಿಲೀನಗೊಳಿಸುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. ಇವುಗಳಲ್ಲಿ ರಾಷ್ಟ್ರೀಯ ವಿಮೆ, ನ್ಯೂ ಇಂಡಿಯಾ ಅಶ್ಯೂರೆನ್ಸ್, ಓರಿಯಂಟಲ್ ಇನ್ಶುರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಗಳು ಶಾಮೀಲಾಗಿವೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ಕಾಯಿದೆ 1999 ಮತ್ತು ವಿಮಾ ಕಾಯಿದೆ 1938 ರ ಅಡಿಯಲ್ಲಿ ಇದನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಪ್ರಸ್ತಾವಿತ ತಿದ್ದುಪಡಿಯಲ್ಲಿ ಏನು ಹೇಳಲಾಗಿದೆ?
ಪ್ರಸ್ತಾವಿತ ತಿದ್ದುಪಡಿಗಳು ದೇಶದಲ್ಲಿ ಜೀವ ಮತ್ತು ಜೀವೇತರ ವಿಮಾ ಪಾಲಿಸಿಗಳನ್ನು ಮಾರಾಟ ಮಾಡಲು ಒಂದೇ ಒಂದು ಮಾನ್ಯತೆ ಪಡೆದ ಕಂಪನಿ ಇರಬೇಕು ಎಂದು ಹೇಳುತ್ತದೆ, ಇದು ಅಗತ್ಯವಿರುವ ಕನಿಷ್ಠ ಬಂಡವಾಳವನ್ನು ಸೂಚಿಸುವ ಮೂಲಕ ಶಾಸನಬದ್ಧ ಮಿತಿಗಳನ್ನು ತೆಗೆದುಹಾಕಲು ವಿಮಾ ನಿಯಂತ್ರಕಕ್ಕೆ ಅನುಕೂಲವಾಗುತ್ತದೆ. ಇವುಗಳಲ್ಲದೆ ಮತ್ತೊಂದು ಕೃಷಿ ವಿಮಾ ಕಂಪನಿಯನ್ನು ಸಹ ವಿಲೀನಗೊಳಿಸಲಾಗುತ್ತಿದೆ ಎಂದೂ ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ-Minimum Wage: ದಿನಗೂಲಿ ನೌಕರರ ಪಾಲಿಗೆ ಇಲ್ಲಿದೆ ಭಾರಿ ಸಂತಸದ ಸುದ್ದಿ, ಜಬರ್ದಸ್ತ್ ಪ್ಲಾನ್ ನಲ್ಲಿ ಮೋದಿ ಸರ್ಕಾರ

ಈ ವಿಷಯದ ಕುರಿತು ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಯಕಟ್ಟಿನ ಕ್ಷೇತ್ರಗಳ ವಿಷಯದಲ್ಲಿ ಕೇವಲ ನಾಲ್ಕು ಕಂಪನಿಗಳು ಮಾತ್ರ ಸರ್ಕಾರಿ ಕಂಪನಿಗಳಾಗಿರಲಿವೆ ಎಂದು ಈ ಹಿಂದೆ ಘೋಷಿಸಿದ್ದರು. ಅಂದರೆ, ಈ ರೀತಿಯಲ್ಲಿ ಸರ್ಕಾರವು ತನ್ನ ನಾಲ್ಕು ಜೀವೇತರ ವಿಮಾ ಕಂಪನಿಗಳನ್ನು LIC ಯೊಂದಿಗೆ ವಿಲೀನಗೊಳಿಸಬಹುದು. ಮತ್ತೊಂದೆಡೆ, ಈ ಕಂಪನಿಗಳ ಉದ್ಯೋಗಿಗಳು  ಕೂಡ ಈ ಕಂಪನಿಗಳನ್ನು ಎಲ್ಐಸಿಯೊಂದಿಗೆ ವಿಲೀನಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ-Electric Bill Saver: 333 ರೂ.ಬೆಲೆಯ ಈ ಉಪಕರಣದ ಅಳವಡಿಸಿ ವಿದ್ಯುತ್ ಉಚಿತವಾಗಿ ಬಳಸಿ!

ಖಾಸಗಿ ಕೈಯಲ್ಲಿ LIC ಅಧಿಕಾರ
ಮತ್ತೊಂದೆಡೆ ಈಗ ಖಾಸಗಿ ವಲಯದವರಿಗೆ ಎಲ್‌ಐಸಿ ಅಧ್ಯಕ್ಷರಾಗುವ ಅವಕಾಶ ಸಿಗಲಿದೆ ಎಂಬ ದೊಡ್ಡ ಸುದ್ದಿ ಹೊರಬೀಳುತ್ತಿದೆ. 66 ವರ್ಷಗಳಲ್ಲಿ ಮೊದಲ ಬಾರಿಗೆ ಎಲ್‌ಐಸಿಯ ನಿಯಂತ್ರಣವು ಖಾಸಗಿ ಅಧ್ಯಕ್ಷರ ಕೈಗೆ ಸೇರಲಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಇದುವರೆಗಿನ ನಿಯಮದ ಪ್ರಕಾರ ಕಂಪನಿಯ ಎಂಡಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News