ಬೆಳ್ಳಿ ಪರದೆಯ ಮೇಲೆ ಗಾಯಕ ನವೀನ ಸಜ್ಜು ಬದುಕು ತೆರೆದಿಟ್ಟ ಆರ್ಕೆಸ್ಟ್ರಾ ಮೈಸೂರು

ನಾನು ಒಂದು mainstream ಸಿನಿಮಾದಲ್ಲಿ ಕೆಲಸ ಮಾಡಿದಾಗ ನೋಡಿದ್ದೇನೆ.ಜನಗಳಿಂದ ಸ್ಕ್ರೀನ್ ತುಂಬಿಸೋದು ಎಷ್ಟು ಕಷ್ಟದ ಕೆಲಸವೆಂದು. ಚಿತ್ರರಂಗದ ಭಾಷೆಯಲ್ಲಿ ಎಲ್ಲರಿಗೂ ಗೊತ್ತಿರೊ ಹಾಗೆ ಅವರನ್ನ ಜೂನಿಯರ್ ಆರ್ಟಿಸ್ಟ್ ಎಂದು ಹೇಳುತ್ತಾರೆ

Written by - Zee Kannada News Desk | Last Updated : Jan 12, 2023, 06:18 PM IST
  • ನಾನು ಒಂದು mainstream ಸಿನಿಮಾದಲ್ಲಿ ಕೆಲಸ ಮಾಡಿದಾಗ ನೋಡಿದ್ದೇನೆ.
  • ಚಿತ್ರರಂಗದ ಭಾಷೆಯಲ್ಲಿ ಎಲ್ಲರಿಗೂ ಗೊತ್ತಿರೊ ಹಾಗೆ ಅವರನ್ನ ಜೂನಿಯರ್ ಆರ್ಟಿಸ್ಟ್ ಎಂದು ಹೇಳುತ್ತಾರೆ.
  • ಆದರೆ ಈ ಚಿತ್ರದ ತುಂಬಾ ಜನ ಸಾಗರ ಕಾಣಿಸುತ್ತದೆ, ದಸರಾ ಮತ್ತು ಆರ್ಕೆಸ್ಟ್ರಾಗಳು ವಿಜೃಂಭಿಸುತ್ತದೆ.
ಬೆಳ್ಳಿ ಪರದೆಯ ಮೇಲೆ ಗಾಯಕ ನವೀನ ಸಜ್ಜು ಬದುಕು ತೆರೆದಿಟ್ಟ ಆರ್ಕೆಸ್ಟ್ರಾ ಮೈಸೂರು title=

ಬೆಂಗಳೂರು: ರಾಷ್ಟ್ರೀಯ ಯುವಕರ ದಿನದಂದು ರಾಜ್ಯದಾದ್ಯಂತ ಬಿಡುಗಡೆಯಾಗಿರುವ ಆರ್ಕೆಸ್ಟ್ರಾ ಮೈಸೂರು ಸಿನಿಮಾ ನಿಜಕ್ಕೂ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.ಸಾಮಾನ್ಯ ಹಳ್ಳಿ ಹುಡುಗನೊಬ್ಬ ಆರ್ಕೆಸ್ಟ್ರಾ ಮೂಲಕ ತನ್ನ ಜೀವನವನ್ನು ಕಟ್ಟಿಕೊಂಡು ಮುಂದೆ ಖ್ಯಾತ ಗಾಯಕನಾಗುವ ಬಗೆಯನ್ನು ಈ ಚಿತ್ರವು ಸಾರುತ್ತದೆ.ಬಿಗ್ ಬಾಸ್ ರನ್ನರ್ ಅಪ್ ಹಾಗೂ ಹಿನ್ನೆಲೆಯ ಗಾಯಕ ನವೀನ ಸಜ್ಜು ಅವರ ಜೀವನ ಕಥೆಯನ್ನು ಇಟ್ಟುಕೊಂಡು ಹೆಣೆದಿರುವ ಈ ಚಿತ್ರವು ನಿಜಕ್ಕೂ ಪ್ರೇರಣದಾಯಕವಾಗಿದೆ.

ಇದನ್ನೂ ಓದಿ: "ಮೋದಿ ಮೋದಿ ಎಂದು ಕೂಗುತ್ತಿದ್ದವರಿಗೆ ಬಿಜೆಪಿ ಪಕ್ಷ ಮಕ್ಮಲ್‌ ಟೋಪಿ ಹಾಕಿದೆ"

ಈ ಚಿತ್ರವನ್ನು ನೋಡಿರುವ ಅಭಿಮಾನಿ ಸಂಜೀತ್ ಮೈಸೂರು ಚಿತ್ರದ ಕುರಿತಾಗಿ ಬರೆದುಕೊಂಡಿದ್ದು ಹೀಗೆ ...

ಸುಮಾರು ಆರು ವರ್ಷಗಳಿಂದ ಮೈಸೂರಿನ ಒಂದು ತಂಡ ಒಟ್ಟಾಗಿ ಸೇರಿ ಮಾಡಿರುವ ಚಿತ್ರ. ಇಡಿ ಮೈಸೂರನ್ನೆ ಸೆಟ್ ತರ ಬಳಸಿ, ಮೈಸೂರಿನ ರಂಗಭೂಮಿಯ ಕಲಾವಿದರನ್ನೆ ಬಳಸಿ indie style ನಲ್ಲಿ ಈ ಚಿತ್ರವನ್ನು ಚಿತ್ರಸಲಾಗಿದೆ.

ನಾನು ಒಂದು mainstream ಸಿನಿಮಾದಲ್ಲಿ ಕೆಲಸ ಮಾಡಿದಾಗ ನೋಡಿದ್ದೇನೆ.ಜನಗಳಿಂದ ಸ್ಕ್ರೀನ್ ತುಂಬಿಸೋದು ಎಷ್ಟು ಕಷ್ಟದ ಕೆಲಸವೆಂದು. ಚಿತ್ರರಂಗದ ಭಾಷೆಯಲ್ಲಿ ಎಲ್ಲರಿಗೂ ಗೊತ್ತಿರೊ ಹಾಗೆ ಅವರನ್ನ ಜೂನಿಯರ್ ಆರ್ಟಿಸ್ಟ್ ಎಂದು ಹೇಳುತ್ತಾರೆ.ಆದರೆ ಈ ಚಿತ್ರದ ತುಂಬಾ ಜನ ಸಾಗರ ಕಾಣಿಸುತ್ತದೆ, ದಸರಾ ಮತ್ತು ಆರ್ಕೆಸ್ಟ್ರಾಗಳು ವಿಜೃಂಭಿಸುತ್ತದೆ. ಆದರೆ ಅದು ಯಾವುದು ಕೃತಕವಲ್ಲ ಅಂದರೆ ಸೆಟ್ ಅಲ್ಲ. ಎಲ್ಲ ರಿಯಲ್ ಲೋಕೇಶನ್ ನಲ್ಲಿ ಶೂಟ್  ಮಾಡಿದ್ದಾರೆ. ಕೆಲವು ಬಾರಿ ಸ್ಕ್ರೀನ್ ನಲ್ಲಿ ಜನ ತುಂಬಿಸಬೇಕೆಂದರೆ, ಚಿತ್ರ ತಂಡ ಒಂದಷ್ಟು ಗೆಳೆಯರನ್ನು ಒಟ್ಟಾಗಿ ಸೇರಿಸುತ್ತಿತು. ಒಮ್ಮೆ ನಾನು ಕೂಡ ಒಬ್ಬ ಗೆಳೆಯ ಕರೆದನೆಂದು, "ದಮ್ಮ್ ಇದ್ರೆ ಹೊಡಿ ನನ್ನ" ಹಾಡನ ಚಿತ್ರೀಕರಣದ ಒಂದು ಗುಂಪುನಲ್ಲಿ ಬಾಗಿಯಾಗಿದ್ದೆ.

ಇದನ್ನೂ ಓದಿ: National youth festival 2023 : ಹಣೆಗೆ ಹಚ್ಚಿದ ತಿಲಕ ಅಳಿಸಿಕೊಂಡ ಸಿಎಂ, ಚರ್ಚೆಗೆ ಗ್ರಾಸವಾದ ಮುಖ್ಯಮಂತ್ರಿಗಳ ನಡೆ

ಸಾಮಾನ್ಯವಾಗಿ ಯಾರಿಗೂ ಗೊತ್ತಿರದ ಜಗತ್ತನ್ನು ನಾವು ಇಲ್ಲಿ ಪ್ರವೇಶಿಸಬಹುದು. ಆ ಜಗತ್ತೇ ಆರ್ಕೆಸ್ಟ್ರಾ ಇಂಡಸ್ಟ್ರಿ. ಸಿನಿಮಾಗೆ ಹೇಗೆ ಗಾಂಧಿನಗರ, ಆರ್ಕೆಸ್ಟ್ರಾಗೆ ಮೈಸೂರಿನ ಗಾಂಧಿನಗರ, ಆ ಗಾಂದಿನಗರವೇ ಈ ಚಿತ್ರದ ಮೇನ್ character. ಸಾಮಾನ್ಯ ಹುಡುಗ ಒಂದು ಆರ್ಕೆಸ್ಟ್ರಾ ದಲ್ಲಿ ಹಾಡಬೇಕು ಎಂಬ ಕನಸೊನೊಟ್ಟಿದೆ ಸಾಗುವ ಕಥೆ. ಆ ಕನಸು ಬಹಳಷ್ಟು ಜನಕ್ಕೆ ಸಿಲ್ಲಿ ಎನ್ನಿಸಿದರೂ, ಅಂತ ಕನಸುಗಳು ಕೂಡ ಕೆಲುವು ಪ್ರತಿಭೆಗಳಿಗೆ ದೊಡ್ಡ ಸಾಗರದಂತ ಕನಸಾರಿಗುತ್ತೆ ಎಂದು ತಿಳಿಯಲು ನೀವು ಈ ಸಿನಿಮಾ ನೋಡಬೇಕು. ಉತ್ತಮ ಚಿತ್ರಕಥೆಯೆ ಈ ಚಿತ್ರದ ಜೀವ. ಅದರೊಟ್ಟಿಗೆ ರಘು ದೀಕ್ಷಿತ್  ಅವರ ಹಿನ್ನಲೆ ಸಂಗೀತ ಸಿನೆಮಾಗೆ ಮುಖ್ಯ ಶಕ್ತಿ. ಇಂತ ಒಂದು ದೊಡ್ಡ ಸಿನಿಮಾವನ್ನು indie style ನಲ್ಲಿ ಮಾಡಲು ಹೋರಾಟ ನಿರ್ದೇಶಕ ಸುನಿಲ್ ಮೈಸೂರು ಅವರಿಗೆ ಹ್ಯಾಟ್ಸಪ್

ಈ ಸಿನಿಮಾದ ಇನ್ನೊಂದು ವಿಶೇಷತೆ ಏನೆಂದರೆ ಇದು, ಇವತ್ತಿನ ಜನಪ್ರಿಯ ಗಾಯಕರಾದ ನವೀನ ಸಜ್ಜು ಅವರ ಸೆಮಿ ಬಯೋಗ್ರಾಪಿ. ಅಂದರೆ ಅವರ ಜೀವನದ ಬಹಳಷ್ಟು ಗಟ್ಟನೆಗಳನ್ನು ಇಟ್ಟುಕೊಂಡು, ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಇವತ್ತು ನಮ್ಮ ಕನ್ನಡ ನೆಲದಿಂದ ಹಿಡಿದು, ದೇಶವಿದೇಶಗಳ ವೇದಿಕೆಗಳಲ್ಲಿ ಹಾಡುತ್ತಿರುವ ನವೀನ್ ಸಜ್ಜು ಅವರ ಆರ್ಕೆಸ್ಟ್ರಾ ದಿನಗಳ ಬಗ್ಗೆ ಕೇಳಿದ್ದೇನೆ. ಅಂದರೆ ಅವರು ಆರ್ಕೆಸ್ಟ್ರಾದಲ್ಲಿ ಒಂದು ಹಾಡನ್ನು ಹಾಡಲು ಅವಕಾಶಕ್ಕಾಗಿ ಪಟ್ಟ ಪಾಡು.ಅವರು ತಮ್ಮ ಕನಸುಗಳನ್ನು ಈಡೇರಿಸಲು ಜೀವನಕೊಸ್ಕರ ಮಾಡಬೇಕಿದ್ದ ವೃತ್ತಿ, ಇವೆಲ್ಲ ನಮ್ಮ ಮೈಸೂರನಲ್ಲಿ ಅವರನ್ನು ಪ್ರತ್ಯಕ್ಷವಾಗಿ ಕಂಡವರು ನನಗೆ ಹೇಳಿದ್ದನ್ನು ಕೇಳಿದ್ದೇನೆ.ಇವೆಲ್ಲವನ್ನು ಸಿನಿಮಾದಲ್ಲಿ ನೈಜವೆಂಬಂತೆ ಕಟ್ಟಿಕೊಟ್ಟಿದ್ದಾರೆ. ನವೀನ್ ಅವರಂತ ಎಲ್ಲ ಸಂಗೀತದ ಪ್ರತಿಭೆಗಳಿಗೆ ಈ ಸಿನಿಮಾ ಸ್ಫೂರ್ತಿ ಆಗಲಿ.

ಈ ಸಂಕ್ರಾಂತಿಯಲ್ಲಿ ಯಾರು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಅವಕಾಶ ಕಳೆದುಕೊಳ್ಳಬೇಡಿ ಎಂಬುವುದು ನನ್ನ ಸಲಹೆ ಎನ್ನುತ್ತಾರೆ ಸಂಜೀತ್ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News