Sandeep Lamichhane: ಸ್ಟಾರ್ ಕ್ರಿಕೆಟಿಗನ ಮೇಲೆ ಅತ್ಯಾಚಾರ ಆರೋಪ: 20 ಲಕ್ಷ ಖರ್ಚು ಮಾಡಿ ಜಾಮೀನು ಪಡೆದ ಆಟಗಾರ

Sandeep Lamichhane: 2022 ರ ಸೆಪ್ಟೆಂಬರ್ 8 ರಂದು ನೇಪಾಳದ ನ್ಯಾಯಾಲಯವು ಕಠ್ಮಂಡುವಿನ ಹೋಟೆಲ್ ಕೋಣೆಯಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು 17 ವರ್ಷದ ಬಾಲಕಿ ಆರೋಪಿಸಿದ ನಂತರ ನೇಪಾಳ ನ್ಯಾಯಾಲಯವು ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ ಲಾಮಿಚಾನೆಗೆ ಬಂಧನ ವಾರಂಟ್ ಹೊರಡಿಸಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

Written by - Bhavishya Shetty | Last Updated : Jan 13, 2023, 12:49 PM IST
    • ನೇಪಾಳದ ಸ್ಟಾರ್ ಕ್ರಿಕೆಟಿಗ ಸಂದೀಪ್ ಲಮಿಚಾನೆ ವಿರುದ್ಧ ಅತ್ಯಾಚಾರ ಎಸಗಿದ ಆರೋಪ
    • 20 ಲಕ್ಷ ರೂ.ಗಳ ಶ್ಯೂರಿಟಿ ಮೇಲೆ ಲಮಿಚಾನೆಯನ್ನು ಬಿಡುಗಡೆ ಮಾಡಲು ಆದೇಶ
    • ಬಾಲಕಿ ಸೆಪ್ಟೆಂಬರ್ 5 ರಂದು ಪೊಲೀಸರಿಗೆ ದೂರು ನೀಡಿದ್ದಳು
Sandeep Lamichhane: ಸ್ಟಾರ್ ಕ್ರಿಕೆಟಿಗನ ಮೇಲೆ ಅತ್ಯಾಚಾರ ಆರೋಪ: 20 ಲಕ್ಷ ಖರ್ಚು ಮಾಡಿ ಜಾಮೀನು ಪಡೆದ ಆಟಗಾರ title=
Sandeep Lamichane

Sandeep Lamichhane Rape Case​: ನೇಪಾಳದ ಸ್ಟಾರ್ ಕ್ರಿಕೆಟಿಗ ಹಾಗೂ ಮಾಜಿ ನಾಯಕ ಸಂದೀಪ್ ಲಮಿಚಾನೆ ವಿರುದ್ಧ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿತ್ತು. ಕೆರಿಬಿಯನ್ ಪ್ರೀಮಿಯರ್ ಲೀಗ್ 2022 (ಸಿಪಿಎಲ್) ಸಮಯದಲ್ಲಿ ಸಂದೀಪ್ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಇದೀಗ ನೇಪಾಳದ ನ್ಯಾಯಾಲಯವು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಕ್ರಿಕೆಟಿಗ ಸಂದೀಪ್ ಲಮಿಚಾನೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: IND vs SL: ಟೀಂ ಇಂಡಿಯಾದ ಅನುಭವಿಯ ಆರೋಗ್ಯದಲ್ಲಿ ದಿಢೀರ್ ಏರುಪೇರು: ತಡರಾತ್ರಿ ಮನೆಗೆ ಹಿಂತಿರುಗಿದ ಆಟಗಾರ

2022 ರ ಸೆಪ್ಟೆಂಬರ್ 8 ರಂದು ನೇಪಾಳದ ನ್ಯಾಯಾಲಯವು ಕಠ್ಮಂಡುವಿನ ಹೋಟೆಲ್ ಕೋಣೆಯಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು 17 ವರ್ಷದ ಬಾಲಕಿ ಆರೋಪಿಸಿದ ನಂತರ ನೇಪಾಳ ನ್ಯಾಯಾಲಯವು ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ ಲಾಮಿಚಾನೆಗೆ ಬಂಧನ ವಾರಂಟ್ ಹೊರಡಿಸಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದ ಮೂಲಗಳ ಪ್ರಕಾರ, ಪಟಾನ್ ಹೈಕೋರ್ಟ್ 20 ಲಕ್ಷ ರೂ.ಗಳ ಶ್ಯೂರಿಟಿ ಮೇಲೆ ಲಮಿಚಾನೆಯನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಅಕ್ಟೋಬರ್‌ನಲ್ಲಿ ಲಾಮಿಚಾನೆಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಕಠ್ಮಂಡು ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಧ್ರುವರಾಜ್ ನಂದಾ ಮತ್ತು ರಮೇಶ್ ಧಾಕಲ್ ಅವರ ಜಂಟಿ ಪೀಠವು ಮಾಜಿ ಐಪಿಎಲ್ ಆಟಗಾರ ಲಾಮಿಚಾನೆಯನ್ನು 20 ಲಕ್ಷ ರೂಪಾಯಿಗಳ ಶ್ಯೂರಿಟಿ ಮೇಲೆ ಬಿಡುಗಡೆ ಮಾಡಿದೆ. ಈ ಕ್ರಿಕೆಟ್ ತಾರೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಪ್ರಾಪ್ತ ಬಾಲಕಿ ಸೆಪ್ಟೆಂಬರ್ 5 ರಂದು ಪೊಲೀಸರಿಗೆ ದೂರು ನೀಡಿದ್ದಳು. ಇದಾದ ಬಳಿಕ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಸಂದೀಪ್ ಲಮಿಚಾನೆ ಅವರನ್ನು ತನಿಖೆಗಾಗಿ ಕಸ್ಟಡಿಗೆ ಒಪ್ಪಿಸಲಾಗಿದೆ.

ಅಕ್ಟೋಬರ್‌ನಲ್ಲಿ, ಸಂದೀಪ್ ಲಾಮಿಚಾನೆ ಅವರು ತನಿಖೆಯ ಪ್ರತಿಯೊಂದು ಹಂತದಲ್ಲೂ ಸಂಪೂರ್ಣವಾಗಿ ಸಹಕರಿಸುವುದಾಗಿ ಮತ್ತು ತನ್ನನ್ನು ತೆರವುಗೊಳಿಸಲು ಕಾನೂನು ಹೋರಾಟ ನಡೆಸುವುದಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಇದಾದ ಬಳಿಕ ಆತನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ ಆದೇಶದವರೆಗೆ ಲಮಿಚಾನೆ ದೇಶ ತೊರೆಯದಂತೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ: ಈ ದಿನಾಂಕದಂದು Athiya Shetty-KL Rahul ಮದುವೆ: ಈ ಮಂಟಪದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಸ್ಟಾರ್ ಜೋಡಿ

ಲೆಗ್ ಸ್ಪಿನ್ನರ್ ಲಮಿಚಾನೆ ನೇಪಾಳದ ಅತ್ಯಂತ ಉನ್ನತ ಮಟ್ಟದ ಕ್ರಿಕೆಟಿಗ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ನೇಪಾಳದ ಮೊದಲ ಕ್ರಿಕೆಟಿಗ ಅವರು. ಅವರು 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಪಾದಾರ್ಪಣೆ ಮಾಡಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News