ಮುಂಬೈ: ಮುಂಬೈ ದಾಳಿಯ ರೂವಾರಿ ಮತ್ತು ಜಮ್ಮಾತ್ ಉದ್-ದಾವಾದ ಮುಖ್ಯಸ್ಥ ಹಫೀಜ್ಸ ಯೀದ್ ವಿಶ್ವಸಂಸ್ಥೆಗೆ ಭಯೋತ್ಪಾದಕರ ಪಟ್ಟಿಯಲ್ಲಿರುವ ತನ್ನ ಹೆಸರನ್ನು ತೆಗೆದುಹಾಕಿ ಎಂದು ಮನವಿ ಸಲ್ಲಿಸಿದ್ದಾರೆ.
ಲಷ್ಕರ್ -ಇ-ತೊಯ್ಬಾದ ಸಹ ಸ್ಥಾಪಕ ಕೂಡಾ ಆಗಿರುವ ಹಫೀಜ್, ಲಾಹೋರ್ ಮೂಲದ ಲಾಯರ್ ಮೂಲಕ ಈ ಅರ್ಜಿಯನ್ನು ವಿಶ್ವಸಂಸ್ಥೆಗೆ ಸಲ್ಲಿಸಿದ್ದಾರೆ.
ಈ ಹಿಂದೆ ಡಿಸೆಂಬರ್ 2008ರಲ್ಲಿ ವಿಶ್ವಸಂಸ್ಥೆಯು ಭದ್ರತಾ ಕೌನ್ಸಿಲ್ ಮೂಲಕ 26/11ರ ಮುಂಬೈ ದಾಳಿಯ ಹಿನ್ನಲೆಯಲ್ಲಿ ಹಫೀಜ್ ನ ಹೆಸರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಕಳೆದ ವಾರ ಪಾಕಿಸ್ತಾನವು ಹಫೀಜ್ನನ್ನು 297 ದಿನಗಳ ಗೃಹ ಬಂಧನದಿಂದ ಬಿಡುಗಡೆಗೊಳಿಸಲಾಗಿತ್ತು. ಆದರೆ ಈ ಬಿಡುಗಡೆಗೆ ಭಾರತವು ತೀವ್ರವಾಗಿ ಖಂಡಿಸಿತ್ತು ಅಲ್ಲದೆ ಅಮೆರಿಕಾದ ಶ್ವೇತಭವನವು ಸಹಿತ ಇದನ್ನು ಖಂಡಿಸಿ ಮರುಬಂಧನಕ್ಕೆ ಒತ್ತಾಯಿಸಿತ್ತಲ್ಲದೆ ಇದು ಎರಡು ದೇಶಗಳ ದ್ವೀಪಕ್ಷಿಯ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು.ಆದರೆ ಇದರ ಮಧ್ಯದಲ್ಲಿಯೂ ಕೂಡಾ ಪಾಕಿಸ್ತಾನ ಈ ವಿಷಯವನ್ನು ಅಷ್ಟಾಗಿ ಪರಿಗಣಿಸಿಸದೆ ಇರುವುದು ನಿಜಕ್ಕೂ ಜಾಗತಿಕ ಸಮುದಾಯಕ್ಕೆ ತಪ್ಪು ಸಂದೇಶವನ್ನು ಪಾಕಿಸ್ತಾನ ನೀಡುತ್ತಿದೆ ಎಂದು ಅಮೇರಿಕಾ ಅಭಿಪ್ರಾಯಪಟ್ಟಿದೆ.