ʼಮೋದಿ ಪ್ರಧಾನಿಯಾಗಿದ್ದಕ್ಕೆ ನನಗೆ ʼಪದ್ಮಭೂಷಣʼ ಬಂತುʼ

ನನ್ನ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಕಾರಣ ನನಗೆ ಪದ್ಮಭೂಷಣ ಪ್ರಶಸ್ತಿ ಬಂತು ಎಂದು ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರು ಹೇಳಿದ್ದಾರೆ.

Written by - Krishna N K | Last Updated : Jan 26, 2023, 02:27 PM IST
  • ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಕಾರಣ ನನಗೆ ಪದ್ಮಭೂಷಣ ಪ್ರಶಸ್ತಿ ಬಂತು.
  • ಪದ್ಮಭೂಷಣ ಪ್ರಶಸ್ತಿ ಕುರಿತು ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರು ಹೇಳಿದ್ದಾರೆ.
  • ಮೋದಿ ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿ ಆಗಬೇಕು ಅಂತ ಬರೆದಿದ್ದೆ ಎಂದರು.
ʼಮೋದಿ ಪ್ರಧಾನಿಯಾಗಿದ್ದಕ್ಕೆ ನನಗೆ ʼಪದ್ಮಭೂಷಣʼ ಬಂತುʼ title=

ಮೈಸೂರು : ನನ್ನ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಕಾರಣ ನನಗೆ ಪದ್ಮಭೂಷಣ ಪ್ರಶಸ್ತಿ ಬಂತು ಎಂದು ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರು ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಎಲ್ ಭೈರಪ್ಪ ಅವರು, ನನ್ನ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿ. ಈ ಸಂಸ್ಕೃತಿ ಏಕ ರೂಪದಲ್ಲಿ ಬೆಳೆದಿದೆ. ಗಣರಾಜ್ಯ ಮೊದಲಿಂದಲ್ಲೂ ಇತ್ತು, ಸಂವಿಧಾನದ ಬಹು ಭಾಗ ಜಾರಿಯಲ್ಲಿತ್ತು. ಎಷ್ಟೋ ದೇಶಗಳು ಸ್ವಾತಂತ್ರ್ಯ ಪಡೆದಿವೆ. ಆದರೆ, ಅಲ್ಲಿ ಸ್ವಾತಂತ್ರ್ಯ ಉಳಿದುಕೊಂಡಿಲ್ಲ. ನಮ್ಮಲ್ಲಿ ಸಂವಿಧಾನ ಇದೆ. ಅದು ಈ ದೇಶವನ್ನು ಕಾಪಾಡುತ್ತದೆ. ಗಣರಾಜ್ಯದ ಉತ್ಸವ ಬಹಳ ಮಹತ್ತರವಾದದ್ದು ಎಂದರು.. ಅಲ್ಲದೆ, ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ. ಇಲ್ಲದೆ ಇದ್ದರೆ ಬರುತ್ತಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಪದ್ಮವಿಭೂಷಣ- ಪದ್ಮಭೂಷಣ ಪ್ರಶಸ್ತಿ ಹಿಂದೆ ಇದೆಯಾ ಈ ರಾಜಕೀಯ ಲೆಕ್ಕಾಚಾರಗಳು!?

ಲೇಖಕ ಸತ್ತೇ ಸಾಯುತ್ತಾನೆ. ಆದರೆ ಅವನು ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತ ಇರುತ್ತದೋ ಅಲ್ಲಿಯವರೆಗೆ ಲೇಖಕ ಸದಾ ಜೀವಂತ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ ಎಂದು ಹೇಳಿದ ಅವರು, 2029ರ ನಂತರ ಪ್ರಧಾನಿ ಮೋದಿ ನಿವೃತ್ತಿ ಹೊಂದಲಿ. ಕಳೆದ 2019 ರಲ್ಲೇ ಮತ್ತೊಮ್ಮೆ ಮೋದಿ ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿ ಆಗಬೇಕು ಅಂತ ಬರೆದಿದ್ದೆ ಎಂದರು.

ಈಗಲೂ 2024 ಮತ್ತು2029 ರವರೆಗೂ ಮೋದಿ ಅವರೇ ಪ್ರಧಾನಿಯಾಗಿರಲಿ. ನಂತರ ಅವರಂತ ಸೇವಾ ಮನೋಭಾವವಿರುವ ಇನ್ನೊಬ್ಬ ವ್ಯಕ್ತಿಯನ್ನು ತಯಾರು ಮಾಡಬೇಕು. ಮೋದಿಯಂತ ಪ್ರಧಾನ ಮಂತ್ರಿಯನ್ನ ನಾವು ಹಿಂದೆಂದೂ ನೋಡಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದಲ್ಲಿಯೂ ಇಲ್ಲ. ಯಾವುದೇ ಪಕ್ಷವನ್ನು ಓಲೈಸಲು ಈ ಮಾತು ಹೇಳುತ್ತಿಲ್ಲ. ದೇಶದಲ್ಲಿ ಉತ್ತಮ ಆಡಳಿತವನ್ನ ಮೋದಿ ನೀಡುತ್ತಿದ್ದಾರೆ. ಹಾಗಾಗಿ ಅವರ ಸೇವೆ ಇನ್ನಷ್ಟು ಈ ದೇಶಕ್ಕೆ ಬೇಕಿದೆ ಎಂದು ಹೇಳಿದರು. 

ಇದನ್ನೂ ಓದಿ: Padma Awards 2023 : ಮಾಜಿ ಸಿಎಂ ಎಸ್‌ಎಂ ಕೃಷ್ಣಗೆ ಪದ್ಮ ವಿಭೂಷಣ ; ಎಸ್‌ಎಲ್ ಭೈರಪ್ಪ, ಸುಧಾಮೂರ್ತಿಗೆ ಪದ್ಮ ಭೂಷಣ!

ಸಮಾನ ನಾಗರಿಕ ಸಂಹಿತೆ ಜಾರಿಗೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಬೆಂಬಲ ನೀಡಿದ್ದಾರೆ. ಮೋದಿ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಪ್ರಯತ್ನ ಮಾಡಿರುವುದು ಒಳ್ಳೆಯ ಪ್ರಯತ್ನ ಇದು ಕಾರ್ಯಗತ ಆಗಲೇಬೇಕು ಎಂದಿದ್ದಾರೆ. ದೇಶದಲ್ಲಿ ಒಬ್ಬೊರಿಗೆ ಒಂದೊಂದು ಕಾನೂನು ಇರಬಾರದು, ಎಲ್ಲರಿಗೂ ಒಂದೇ ಕಾನೂನು ಅತ್ಯಗತ್ಯ. ಸ್ವಾತಂತ್ರ್ಯ ಬಂದ ಸಂದರ್ಭ ನಮಗೆ ಸರಿಯಾದ ಬುನಾದಿ ಸಿಗಲಿಲ್ಲ. ಹಾಗಾಗಿ ಕಾನೂನು ಒಂದೇರ ರೂಪದಲ್ಲಿ ಇರಲಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News