Smartphone Hacks: ನಿಮ್ಮ ಫೋನ್ ನಲ್ಲಿ ಆಗಾಗ್ಗೆ ಜಾಹೀರಾತುಗಳು ಬರುತ್ತಿವೆಯೇ? ಒಂದೇ ಕ್ಲಿಕ್ ನಲ್ಲಿ ನಿಲ್ಲಿಸಿ

How to block Unnecessary ads: ಆಂಡ್ರಾಯ್ಡ್ ಫೋನ್‌ಗಳಲ್ಲಿನ ದೊಡ್ಡ ಸಮಸ್ಯೆಯೆಂದರೆ ಅನಗತ್ಯ ಜಾಹೀರಾತು ಪಾಪ್-ಅಪ್‌ಗಳು. ಏನಾದರೂ ಗೂಗಲ್ ನಲ್ಲಿ ಸರ್ಚ್ ಮಾಡುವಾಗ, ಅಥವಾ ಮೊಬೈಲ್ ನಲ್ಲಿ ಅಗತ್ಯ ಕೆಲಸ ಮಾಡುತ್ತಿದ್ದಾಗ ಈ ನೋಟಿಫಿಕೇಶನ್ ಗಳು ಬರುತ್ತವೆ. ಇದಕ್ಕೆ ಕಾರಣ ನಮಗೆ ತಿಳಿಯದಂತೆ, ಅಲ್ಲಿ ನೀಡಿರುವ ಕೆಲವೊಂದು ಬಟನ್ ಗಳನ್ನು ಆನ್ ಮಾಡುತ್ತೇವೆ. ಇದರಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜನರು ಏನನ್ನೂ ಮಾಡದೆ ಈ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ ಎಂದು ದೂರುತ್ತಾರೆ .

Written by - Bhavishya Shetty | Last Updated : Jan 30, 2023, 04:17 PM IST
    • ಈ ಅನಗತ್ಯ ಜಾಹೀರಾತುಗಳು ಜನರಿಗೆ ತುಂಬಾ ತೊಂದರೆ ಕೊಡುತ್ತವೆ.
    • ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆಯೂ ಹೆಚ್ಚುತ್ತಿದೆ.
    • ಆದರೆ ನೀವು ಈ ಸಮಸ್ಯೆಯನ್ನು ಚಿಟಿಕೆಯಲ್ಲಿ ನಿವಾರಿಸಬಹುದು
Smartphone Hacks: ನಿಮ್ಮ ಫೋನ್ ನಲ್ಲಿ ಆಗಾಗ್ಗೆ ಜಾಹೀರಾತುಗಳು ಬರುತ್ತಿವೆಯೇ? ಒಂದೇ ಕ್ಲಿಕ್ ನಲ್ಲಿ ನಿಲ್ಲಿಸಿ title=
smartphone

How to block Unnecessary ads: ಭಾರತದಲ್ಲಿ ಹೆಚ್ಚಿನ ಜನರು ಆಂಡ್ರಾಯ್ಡ್ ಫೋನ್ ಬಳಸುತ್ತಾರೆ. ಆದರೆ ಈ ಫೋನ್ ಗಳಲ್ಲಿ ಸಾಮಾನ್ಯವಾಗಿ ಜನರನ್ನು ಕಾಡುವ ಸಮಸ್ಯೆಯೆಂದರೆ ಯಾವುದೇ ಕಾರಣವಿಲ್ಲದೆ ಪಾಪ್-ಅಪ್ ಜಾಹೀರಾತುಗಳು ಬರುವುದು. ಇವುಗಳು ಅಗತ್ಯ ಕೆಲಸವನ್ನು ನಿಲ್ಲಿಸುವುದು ಮಾತ್ರವಲ್ಲದೆ, ತುಂಬಾ ಕಿರಿಕಿರಿಯುಂಟುಮಾಡುತ್ತದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಈ ಸಮಸ್ಯೆ ಕಂಡುಬರುತ್ತದೆ. ಈ ಅನಗತ್ಯ ಜಾಹೀರಾತುಗಳು ಜನರಿಗೆ ತುಂಬಾ ತೊಂದರೆ ಕೊಡುತ್ತವೆ. ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ನೀವು ಈ ಸಮಸ್ಯೆಯನ್ನು ಚಿಟಿಕೆಯಲ್ಲಿ ನಿವಾರಿಸಬಹುದು. ಹೇಗೆ ಎಂದು ತಿಳಿದುಕೊಳ್ಳಲು ಈ ವರದಿ ನೋಡಿ.

ಇದನ್ನೂ ಓದಿ: Urfi Javed Pregnant: ಅಭಿಮಾನಿಗಳಿಗೆ ಬರ್ಫಿ ತಿನ್ನಿಸಿದ ಉರ್ಫಿ: ಮದುವೆಯಾಗದೆ ಗರ್ಭಿಣಿಯಾದ ಫ್ಯಾಶನ್ ಕ್ವೀನ್!!

ಆಂಡ್ರಾಯ್ಡ್ ಫೋನ್‌ಗಳಲ್ಲಿನ ದೊಡ್ಡ ಸಮಸ್ಯೆಯೆಂದರೆ ಅನಗತ್ಯ ಜಾಹೀರಾತು ಪಾಪ್-ಅಪ್‌ಗಳು. ಏನಾದರೂ ಗೂಗಲ್ ನಲ್ಲಿ ಸರ್ಚ್ ಮಾಡುವಾಗ, ಅಥವಾ ಮೊಬೈಲ್ ನಲ್ಲಿ ಅಗತ್ಯ ಕೆಲಸ ಮಾಡುತ್ತಿದ್ದಾಗ ಈ ನೋಟಿಫಿಕೇಶನ್ ಗಳು ಬರುತ್ತವೆ. ಇದಕ್ಕೆ ಕಾರಣ ನಮಗೆ ತಿಳಿಯದಂತೆ, ಅಲ್ಲಿ ನೀಡಿರುವ ಕೆಲವೊಂದು ಬಟನ್ ಗಳನ್ನು ಆನ್ ಮಾಡುತ್ತೇವೆ. ಇದರಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜನರು ಏನನ್ನೂ ಮಾಡದೆ ಈ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ ಎಂದು ದೂರುತ್ತಾರೆ.

ಬ್ಲಾಕ್ ಮಾಡಲು ಈ ರೀತಿ ಮಾಡಿ:

ಈ ಅನಗತ್ಯ ಜಾಹೀರಾತುಗಳನ್ನು ಸುಲಭವಾಗಿ ನಿರ್ಬಂಧಿಸಬಹುದು. ಆದರೆ ಇದಕ್ಕಾಗಿ ಜಾಹೀರಾತುಗಳು ಎಲ್ಲಿಂದ ಬರುತ್ತವೆ ಎಂಬುದನ್ನು ನೀವು ಮೊದಲು ತಿಳಿದಿರಬೇಕು. ನೀವು ಯಾವುದೇ ಹೊಸ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದಿದ್ದರೆ, ನೀವು ವೆಬ್‌ಸೈಟ್ ಅನ್ನು ತೆರೆದಿರಬಹುದು. ಅಲ್ಲಿ ಪಾಪ್-ಅಪ್ ಅನ್ನು ಆನ್ ಮಾಡಿರಬಹುದು. ಹೆಚ್ಚಿನ ಫೋನ್‌ಗಳಲ್ಲಿ ಗೂಗಲ್ ಕ್ರೋಮ್ ಡೀಫಾಲ್ಟ್ ಬ್ರೌಸರ್ ಆಗಿದೆ. ಅಲ್ಲಿಂದ ಜಾಹೀರಾತುಗಳನ್ನು ನಿರ್ಬಂಧಿಸಬಹುದು. ಜಾಹೀರಾತನ್ನು ಹೇಗೆ ನಿರ್ಬಂಧಿಸುವುದು ಎಂದು ತಿಳಿಯೋಣ.

ಇದನ್ನೂ ಓದಿ: Vastu Tips: ಮಲಗುವಾಗ ದಿಂಬಿನ ಕೆಳಗೆ ಈ ತರಕಾರಿಯನ್ನು ಇಟ್ಟರೆ ಅದೃಷ್ಟ ಒಂದೇ ರಾತ್ರಿಯಲ್ಲಿ ಬದಲಾಗುವುದು ಖಂಡಿತ!

  • ನಿಮ್ಮ ಫೋನ್‌ನಲ್ಲಿ Chrome ಬ್ರೌಸರ್ ತೆರೆಯಿರಿ.
  • ಅಲ್ಲಿ ನೀಡಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ. ಇಲ್ಲಿ ನೀವು ಸೈಟ್ ಸೆಟ್ಟಿಂಗ್‌ಗಳ ಆಯ್ಕೆಯನ್ನು ಪಡೆಯುತ್ತೀರಿ.
  • ಇಲ್ಲಿ ನೀವು ಜಾಹೀರಾತುಗಳು, ಪಾಪ್-ಅಪ್ ಮೆಸೇಜ್ ಗಳನ್ನು ರಿಸೆಟ್ಟಿಂಗ್ ಮಾಡುವ ಆಯ್ಕೆಯನ್ನು ನೋಡಬಹುದು.
  • ನೀವು ಎರಡೂ ಆಯ್ಕೆಗಳನ್ನು ಸಕ್ರಿಯಗೊಳಿಸಬೇಕು. ಆನಂತರ ಜಾಹೀರಾತುಗಳು ಬರುವುದು ನಿಲ್ಲುತ್ತವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News