Budget 2023: ಇಂದು (ಫೆಬ್ರವರಿ 1, 2023) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24 ನೇ ಸಾಲಿನ ಸಾಮಾನ್ಯ ಬಜೆಟ್ ಅನ್ನು ಮಂಡಿಸಲಿದ್ದಾರೆ. ಸತತ ಐದನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜನಸಾಮಾನ್ಯರಿಗೆ ಏನೆಲ್ಲಾ ಕೊಡುಗೆ ನೀಡಲಿದ್ದಾರೆ ಎಂಬ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲವಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಕೊನೆಯ ಬಜೆಟ್ ಇದಾಗಿದ್ದು, ಜನರ ನಿರೀಕ್ಷೆಗಳು ಕೂಡ ಬೆಟ್ಟದಷ್ಟಿವೆ. ಬಜೆಟ್ ಮಂಡನೆಗೂ ಮೊದಲು ಜನರು ಯೂನಿಯನ್ ಬಜೆಟ್ಗೆ ಸಂಬಂಧಿಸಿದಂತೆ ಗೂಗಲ್ನಲ್ಲಿ ಕೆಲವು ವಿಷಯಗಳ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಿದ್ದಾರೆ. ಹಾಗಿದ್ದರೆ, ಗೂಗಲ್ನಲ್ಲಿ ಜನ ಹೆಚ್ಚು ಸರ್ಚ್ ಮಾಡುತ್ತಿರುವ ಟಾಪಿಕ್ಸ್ ಗಳು ಯಾವುವು ಎಂದು ತಿಳಿಯೋಣ...
ಕೇಂದ್ರ ಬಜೆಟ್ಗೆ ಸಂಬಂಧಿಸಿದಂತೆ ಜನ ಗೂಗಲ್ನಲ್ಲಿ ಹೆಚ್ಚು ಹುಡುಕುತ್ತಿರುವ ಟಾಪಿಕ್ಸ್ ಇವೇ...
* ಬಜೆಟ್ನ ಅರ್ಥವೇನು?
2023 ರ ಸಾಮಾನ್ಯ ಬಜೆಟ್ ಮಂಡನೆಗೂ ಮೊದಲು ಜನರು ಗೂಗಲ್ನಲ್ಲಿ ಬಜೆಟ್ನ ಅರ್ಥವೇನು ಎಂಬ ವಿಷಯದ ಬಗ್ಗೆ ಹೆಚ್ಚು ಹುಡುಕುತ್ತಿದ್ದಾರೆ.
- ಸರಳ ಭಾಷೆಯಲ್ಲಿ ಹೇಳುವುದಾದರೆ, ಬಜೆಟ್ ಎಂದರೆ ಭವಿಷ್ಯದ ಆದಾಯ-ವೆಚ್ಚಗಳನ್ನು ಯೋಜಿಸಲು ಬಳಸುವ ಹಣಕಾಸಿನ ದಾಖಲೆ ಆಗಿದೆ.
* ಬಜೆಟ್ನಲ್ಲಿ ಎಷ್ಟು ವಿಧಗಳಿವೆ?
ಗೂಗಲ್ನಲ್ಲಿ ಬಜೆಟ್ನಲ್ಲಿ ಎಷ್ಟು ವಿಧಗಳು ಎಂಬ ವಿಷಯದ ಬಗ್ಗೆಯೂ ಹೆಚ್ಚು ಹುಡುಕಲಾಗುತ್ತಿದೆ.
- ವಾಸ್ತವವಾಗಿ, ಬಜೆಟ್ನಲ್ಲಿ ಮೂರು ವಿಧಗಳು.
>> ಸಮತೋಲಿತ ಬಜೆಟ್- ಈ ಬಜೆಟ್ನಲ್ಲಿ ಸರ್ಕಾರದ ಆದಾಯ ಮತ್ತು ಖರ್ಚು ಸಮಾನವಾಗಿರುತ್ತದೆ.
>> ಹೆಚ್ಚುವರಿ ಬಜೆಟ್- ಈ ಬಜೆಟ್ನಲ್ಲಿ ಸರ್ಕಾರದ ಆದಾಯವು ಖರ್ಚಿಗಿಂತ ಹೆಚ್ಚಾಗಿರುತ್ತದೆ.
>> ಕೊರತೆಯ ಬಜೆಟ್- ಈ ಬಜೆಟ್ನಲ್ಲಿ, ಸರ್ಕಾರದ ವೆಚ್ಚವು ಅದರ ಆದಾಯದ ಮೂಲವನ್ನು ಮೀರುತ್ತದೆ.
ಇದನ್ನೂ ಓದಿ- Budget 2023: ಗರಿಷ್ಠ ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊ೦ದಿರುವ ಹಣಕಾಸು ಸಚಿವರಿವರು
* ಬಜೆಟ್ ಅಧಿವೇಶನ 2023
ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾಗುತ್ತಿರುವ ಮೂರನೇ ವಿಷಯವೆಂದರೆ ಬಜೆಟ್ ಅಧಿವೇಶನ 2023.
* ಬಜೆಟ್ 2023 ದಿನಾಂಕ:
ಇನ್ನು ಬಜೆಟ್ಗೆ ಸಂಬಂಧಿಸಿದಂತೆ ಅತಿ ಹೆಚ್ಚು ಹುಡುಕುತ್ತಿರುವ ಮತ್ತೊಂದು ಟಾಪಿಕ್ ಎಂದರೆ ಬಜೆಟ್ 2023 ದಿನಾಂಕ.
- 2023ರ ಸಂಸತ್ ಬಜೆಟ್ ಅಧಿವೇಶನವು ಜನವರಿ 31ರಿಂದ ಆರಂಭವಾಗಿದೆ. ಇಂದು (ಫೆಬ್ರವರಿ 1, 2023) ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.
ಇದನ್ನೂ ಓದಿ- Budget 2023: ಬಜೆಟ್ ನಂತರ ಯಾವುದು ಅಗ್ಗ, ಯಾವುದು ದುಬಾರಿ? 35 ಅಂಶಗಳ ಪಟ್ಟಿ ಸಿದ್ಧ
* ಬಜೆಟ್ 2023 ರ ನಿರೀಕ್ಷೆಗಳು
ಕೇಂದ್ರ ಬಜೆಟ್ಗೆ ಸಂಬಂಧಿಸಿದಂತೆ ಜನ ಗೂಗಲ್ನಲ್ಲಿ ಹೆಚ್ಚು ಹುಡುಕುತ್ತಿರುವ ಮತ್ತೊಂದು ವಿಷಯವೆಂದರೆ ಬಜೆಟ್ 2023 ರ ನಿರೀಕ್ಷೆಗಳು.
- ಹೌದು, ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಏನೆಲ್ಲಾ ಪರಿಹಾರ ನೀಡಲಿದೆ ಎಂಬ ಬಗ್ಗೆ ಜನರಲ್ಲಿ ಹೆಚ್ಚು ನಿರೀಕ್ಷೆಯಿದೆ. ಇದಲ್ಲದೆ, ತೆರಿಗೆದಾರರಿಗೆ ಬಜೆಟ್ನಲ್ಲಿ ಯಾವ ರೀತಿಯ ಲಾಭ ದೊರೆಯಲಿದೆ ಎಂಬ ಬಗ್ಗೆಯೂ ಜನರು ಹೆಚ್ಚು ಕುತೂಹಲದಿಂದ ಕಾಯುತ್ತಿದ್ದಾರೆ. ತೆರಿಗೆ ಸ್ಲ್ಯಾಬ್ನಲ್ಲಿ ಬದಲಾವಣೆಯನ್ನು ಸಂಬಳದಾರರು ನಿರೀಕ್ಷಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.