Budget 2023 For Pensioners: ಇಂದು ಲೋಕಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿಗಾಗಿ ದೇಶದ ಕೇಂದ್ರ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಬಜೆಟ್ನಲ್ಲಿ ಹಲವು ಕ್ಷೇತ್ರಗಳು ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಘೋಷಣೆಗಳು ಇರಲಿವೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ದೇಶದ ಕಣ್ಣು ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ನಲ್ಲಿ ವೃದ್ಧರ ಕಣ್ಣು ಪಿಂಚಣಿ ಮೇಲೆ ನೆಟ್ಟಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ವೃದ್ಧರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ಕೊರತೆಯಿಂದಾಗಿ, ಅವರು ಕರೋನಾದಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರಿ ಗುರಿಯಾಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಈ ಬಾರಿಯ ಬಜೆಟ್ನಲ್ಲಿ ಹಿರಿಯ ನಾಗರಿಕರ ಹಲವು ಬೇಡಿಕೆಗಳಿವೆ. ಈ ಬಾರಿಯ ಬಜೆಟ್ನಲ್ಲಿ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಮತ
ಹಿರಿಯ ನಾಗರಿಕರ ಬೇಡಿಕೆಗಳೇನು
ಹಿರಿಯ ನಾಗರಿಕರಿಗೆ ಉದ್ಯಮ ಸಂಸ್ಥೆಯಿಂದ ವಿವಿಧ ಬೇಡಿಕೆಗಳನ್ನು ಇರಿಸಲಾಗಿದೆ. ಈ ಬೇಡಿಕೆಗಳು ಆದಾಯ, ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ವೃದ್ಧಾಪ್ಯ ಆರೈಕೆಯ ಕ್ಷೇತ್ರಗಳಿಂದ ಹಿಡಿದು ವೃದ್ಧರಿಗೆ ಕೌಶಲ್ಯ ತರಬೇತಿ ಮತ್ತು ವಯಸ್ಸಾದವರಿಗೆ ಸಲಕರಣೆ ಕೇಂದ್ರಗಳ ಸ್ಥಾಪನೆ ಶಾಮೀಲಾಗಿವೆ. ಇದರ ಹೊರತಾಗಿ, ವಯಸ್ಸಾದವರಿಗೆ ಸಶಕ್ತ ವಾತಾವರಣವನ್ನು ಸೃಷ್ಟಿಸುವುದು, ವಯಸ್ಕರು ಬಳಸುವ ಉತ್ಪನ್ನಗಳಾದ ವಯಸ್ಕ ಡೈಪರ್ಗಳು, ಔಷಧಗಳು ಮತ್ತು ವೀಲ್ಚೇರ್ಗಳು, ವಾಕರ್ಗಳಂತಹ ಆರೋಗ್ಯ ಸಾಧನಗಳ ಮೇಲೆ GST ವಿನಾಯಿತಿಯನ್ನು ಒದಗಿಸುವುದು ಕೂಡ ಒಳಗೊಂಡಿವೆ
ಪಿಂಚಣಿ ಹೆಚ್ಚಿಸಬೇಕೆಂಬ ಆಗ್ರಹವೂ ಇದೆ
ಇದಲ್ಲದೇ ಬಡ ವಯೋವೃದ್ಧರಿಗೆ ಮಾಸಿಕ ಕನಿಷ್ಠ 3,000 ರೂ.ಗಳ ಸಾಮಾಜಿಕ ಪಿಂಚಣಿ ನೀಡಲು ಕೇಂದ್ರ ಮುತುವರ್ಜಿ ವಹಿಸುವ ನಿರೀಕ್ಷೆಯಿದೆ. ಇದಲ್ಲದೇ ಕೇಂದ್ರದ ಕೊಡುಗೆಯನ್ನು 200 ರೂ.ಗಳಿಂದ (14 ವರ್ಷಗಳವರೆಗೆ ಬದಲಾಗದೆ) ತಿಂಗಳಿಗೆ ಕನಿಷ್ಠ 1,000 ರೂ.ಗೆ ಹೆಚ್ಚಿಸುವ ಕೆಲಸವೂ ಆಗಬೇಕು.
ಈ ಕುರಿತು ಮಾತನಾಡಿರುವ ಹೆಲ್ಪ್ಏಜ್ ಇಂಡಿಯಾದ ಸಿಇಒ ರೋಹಿತ್ ಪ್ರಸಾದ್, “ವಯೋವೃದ್ಧರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು (ಎನ್ಪಿಹೆಚ್ಸಿಇ) ಮೀಸಲಿಟ್ಟ ಹಣದೊಂದಿಗೆ ತ್ವರಿತವಾಗಿ ಅನುಷ್ಠಾನಗೊಳಿಸುವುದು ಸಮಗ್ರ ವಯೋಮಾನದ ಆರೈಕೆಯನ್ನು ತರಲು ಅಗತ್ಯವಿರುವ ಮತ್ತೊಂದು ಪ್ರಮುಖ ಹಂತವಾಗಿದೆ.
ಇದನ್ನೂ ಓದಿ-Budget 2023: ಬಜೆಟ್ ಮಂಡನೆಗೂ ಮುನ್ನ ಷೇರು ಮಾರುಕಟ್ಟೆಯಲ್ಲಿ ಭಾರಿ ಹಲ್ ಚಲ್!
ಪ್ರಧಾನಮಂತ್ರಿಯವರ ಸ್ವಯಂ ಉದ್ಯೋಗ ಯೋಜನೆಗೂ ಸಲಹೆ
ವೃದ್ಧಾಪ್ಯ ಪಿಂಚಣಿ ಹೆಚ್ಚಿಸುವ ಬೇಡಿಕೆಯನ್ನು ಪುನರುಚ್ಚರಿಸಿದ ಏಜ್ವೆಲ್ ಫೌಂಡೇಶನ್, ವೃದ್ಧರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಹಿರಿಯರನ್ನು ಮರು ತೊಡಗಿಸಿಕೊಳ್ಳುವ ಯೋಜನೆಯನ್ನು ಸೂಚಿಸಿದೆ. ಅನುಭವ, ಜ್ಞಾನ, ಬುದ್ಧಿವಂತಿಕೆ, ಸಂಪನ್ಮೂಲಗಳು, ಸಮಯ ಮತ್ತು ಇನ್ನೂ ಕೆಲಸ ಮಾಡುವ ಉತ್ಸಾಹವನ್ನು ಹೊಂದಿರುವವರಿಗೆ ಮುಂದುವರಿಯಲು ಅವಕಾಶ ನೀಡಬೇಕು ಎಂದು ಅದು ಹೇಳಿದೆ. ಇದು 'ನಿವೃತ್ತ ಮತ್ತು ಹಿರಿಯ ನಾಗರಿಕರಿಗಾಗಿ ಪ್ರಧಾನ ಮಂತ್ರಿ ಸ್ವ-ಉದ್ಯೋಗ ಯೋಜನೆ (PM SSRSC)' ಎಂಬ ಹೆಸರನ್ನು ಕೂಡ ಪ್ರಸ್ತಾವಿತ ಯೋಜನೆಗೆ ಸೂಚಿಸಿದೆ.
ಇದನ್ನೂ ಓದಿ-Budget 2023: ಬಜೆಟ್ ಗೂ ಮುನ್ನ ವಾಹನ ಸವಾರರಿಗೆ ಒಂದು ಭಾರಿ ಸಂತಸದ ಸುದ್ದಿ, CNG ಬೆಲೆ ಇಳಿಕೆ
ಹಿರಿಯ ನಾಗರಿಕರನ್ನು ಮುಖ್ಯವಾಹಿನಿಗೆ ತರುವ ಅಗತ್ಯ
ಈ ಕುರಿತು ಮಾತನಾಡಿರುವ ಏಜ್ವೆಲ್ ಫೌಂಡೇಶನ್ನ ಸಂಸ್ಥಾಪಕ-ಅಧ್ಯಕ್ಷ ಹಿಮಾಂಶು ರಾತ್, ಇಂದು, ವಯಸ್ಸಾದ ಜನರು ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಿರಿಯ ನಾಗರಿಕ ಸ್ನೇಹಿ ಬಜೆಟ್ ನಿಬಂಧನೆಗಳನ್ನು ಮಾಡುವುದು ಖಂಡಿತವಾಗಿಯೂ ಬೆಳೆಯುತ್ತಿರುವ ಜನಸಂಖ್ಯೆಯ ಕಲ್ಯಾಣ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ದೇಶದ ಹಿರಿಯ ನಾಗರಿಕರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಒದಗಿಸುವುದು ಮತ್ತು ಅವರನ್ನು ಮುಖ್ಯವಾಹಿನಿಗೆ ತರುವ ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.