Kiara Advani Sidharth Malhotra: ಶಾರುಖ್ ಖಾನ್‌ಗೂ ಕಿಯಾರಾ - ಸಿದ್ಧಾರ್ಥ್ ಮದುವೆಗೂ ಇದೆ ವಿಶೇಷ ನಂಟು!

Kiara Advani Sidharth Malhotra: ಬಾಲಿವುಡ್ ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಕಿಯಾರಾ ಮತ್ತು ಸಿದ್ಧಾರ್ಥ್ ಫೆಬ್ರವರಿ 6 ರಂದು ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. 

Written by - Chetana Devarmani | Last Updated : Feb 3, 2023, 08:10 AM IST
  • ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ವಿವಾಹ
  • ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಸಪ್ತಪದಿ ತುಳಿಯಲಿರುವ ಜೋಡಿ
  • ಶಾರುಖ್ ಖಾನ್‌ಗೂ ಕಿಯಾರಾ - ಸಿದ್ಧಾರ್ಥ್ ಮದುವೆಗೂ ಇದೆ ವಿಶೇಷ ನಂಟು
Kiara Advani Sidharth Malhotra: ಶಾರುಖ್ ಖಾನ್‌ಗೂ ಕಿಯಾರಾ - ಸಿದ್ಧಾರ್ಥ್ ಮದುವೆಗೂ ಇದೆ ವಿಶೇಷ ನಂಟು!  title=
Kiara Advani Sidharth Malhotra

Kiara Advani Sidharth Malhotra: ಬಾಲಿವುಡ್ ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಕಿಯಾರಾ ಮತ್ತು ಸಿದ್ಧಾರ್ಥ್ ಫೆಬ್ರವರಿ 6 ರಂದು ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಕಿಯಾರಾ - ಸಿದ್ದಾರ್ಥ್ ಅವರ ಈ ವಿಶೇಷ ದಿನದಲ್ಲಿ ಪಾಲ್ಗೊಳ್ಳಲು ಅನೇಕ ಅತಿಥಿಗಳು ಆಗಮಿಸಲಿದ್ದಾರೆ. ಆದ್ದರಿಂದ ಭದ್ರತೆಗೆ ಸಂಬಂಧಿಸಿದಂತೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಏತನ್ಮಧ್ಯೆ, ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಯಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಮಾಜಿ ಬಾಡಿಗಾರ್ಡ್‌ಗೆ ಸೂರ್ಯಗಢ ಅರಮನೆಯ ಭದ್ರತೆಯ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:  K Viswanath Passed Away: ʻಕಲಾ ತಪಸ್ವಿʼ ಬಿರುದಾಂಕಿತ ನಿರ್ದೇಶಕ ಕೆ. ವಿಶ್ವನಾಥನ್ ಇನ್ನಿಲ್ಲ

ಶಾರುಖ್ ಮಾಜಿ ಅಂಗರಕ್ಷಕನಿಗೆ ಭದ್ರತೆಯ ಜವಾಬ್ದಾರಿ!

ಇಂಡಿಯಾ ಟುಡೇ ವರದಿಯ ಪ್ರಕಾರ, ಶಾರುಖ್ ಖಾನ್ ಅವರ ಮಾಜಿ ಅಂಗರಕ್ಷಕ ಯಾಸಿನ್ ಅವರಿಗೆ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಭದ್ರತೆಯ ಜವಾಬ್ದಾರಿಯನ್ನು ನೀಡಲಾಗಿದೆ. ವರದಿಗಳ ಪ್ರಕಾರ, ಕಿಯಾರಾ ಮತ್ತು ಸಿದ್ಧಾರ್ಥ್ ಅವರ ವಿವಾಹಕ್ಕಾಗಿ ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ 84 ಕೊಠಡಿಗಳು ಮತ್ತು 70 ಕ್ಕೂ ಹೆಚ್ಚು ಐಷಾರಾಮಿ ವಾಹನಗಳನ್ನು ಕಾಯ್ದಿರಿಸಲಾಗಿದೆ.

ವರದಿಗಳ ಪ್ರಕಾರ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅವರ ಮದುವೆಗೆ ತುಂಬಾ ಆಪ್ತರನ್ನು ಆಹ್ವಾನಿಸಲಾಗಿದೆ. ಅದೇ ಸಮಯದಲ್ಲಿ, ಅತಿಥಿಗಳು ವಿವಾಹಕ್ಕಾಗಿ ಫೆಬ್ರವರಿ 3 ರೊಳಗೆ ಜೈಸಲ್ಮೇರ್ ತಲುಪಬಹುದು. ವರದಿಗಳ ಪ್ರಕಾರ, ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ ವಿವಾಹ ಸಮಾರಂಭಗಳು ಫೆಬ್ರವರಿ 4 ಮತ್ತು 5 ರಂದು ನಡೆಯಲಿದೆ. ಅದರ ನಂತರ ದಂಪತಿಗಳು ಫೆಬ್ರವರಿ 6 ರಂದು ಸಪ್ತಪದಿ ತುಳಿಯಲಿದ್ದಾರೆ. 

ಇದನ್ನೂ ಓದಿ:  ʼಒಂದೇ ಹಾಡಿಗೆ 16 ಬಟ್ಟೆ ಬದಲಿಸಿದ ರಣಬೀರ್ ಮತ್ತು ಶ್ರದ್ಧಾ.ʼ. ಯಾಕೆ ಗೊತ್ತೇ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News