Ketu Transit 2023 Effect: ನವಗ್ರಹಗಳಲ್ಲಿ ಶನಿ, ರಾಹು, ಕೇತು ತುಂಬಾ ನಿಧಾನವಾಗಿ ಚಲಿಸುವ ಗ್ರಹಗಳು. ಶನಿಯು ಎರಡೂವರೆ ವರ್ಷಗಳಲ್ಲಿ ಮತ್ತು ರಾಹು-ಕೇತುಗಳನ್ನು ಒಂದೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿ ಚಕ್ರವನ್ನು ಬದಲಾಯಿಸುತ್ತವೆ. ರಾಹು-ಕೇತು ಎರಡೂ ಕೂಡ ಹಿಮ್ಮುಖವಾಗಿ ಚಲಿಸುವ ಗ್ರಹಗಳು. ಈ ಗ್ರಹಗಳನ್ನು ಪಾಪ ಗ್ರಹಗಳು, ದುಷ್ಟ ಗ್ರಹಗಳು ಎಂತಲೂ ಕರೆಯಲಾಗುತ್ತದೆ. 2023ರಲ್ಲಿ ರಾಹು-ಕೇತು ಎರಡೂ ಕೂಡ ಅಕ್ಟೋಬರ್ ತಿಂಗಳಿನಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ರಾಹು ಮೇಷ ರಾಶಿಯನ್ನು ಪ್ರವೇಶಿಸಿದರೆ, ಕೇತು ತುಲಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ದುಷ್ಟ ಗ್ರಹಗಳಲ್ಲಿ ಒಂದಾಗಿರುವ ಕೇತು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಕಷ್ಟಗಳಿಗೆ ಕೊನೆಯೇ ಇರುವುದಿಲ್ಲ. ಅಂತೆಯೇ ಜಾತಕದಲ್ಲಿ ಕೇತು ಶುಭ ಸ್ಥಾನದಲ್ಲಿದ್ದರೆ ಜೀವನದ ಪ್ರತಿ ಹಂತದಲ್ಲೂ ಯಶಸ್ಸು ನಿಮ್ಮನ್ನು ಬೆಂಬಲಿಸಲಿದೆ ಎಂದು ಹೇಳಲಾಗುತ್ತದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2023ರಲ್ಲಿ ಕೇತು ಸಂಚಾರವು ಕೆಲವು ರಾಶಿಯವರಿಗೆ ಭಾಗ್ಯೋದಯವನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತ ಸ್ಥಿತಿ ನಿರ್ಮಾಣವಾಗಲಿದ್ದು ಶೀಘ್ರದಲ್ಲೇ ಅವರು ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ....
ಕೇತು ಅನುಗ್ರಹದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ:-
ವೃಷಭ ರಾಶಿ:
ಕೇತು ರಾಶಿ ಪರಿವರ್ತನೆಯಿಂದ ವೃಷಭ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಈ ಸಮಯದಲ್ಲಿ ನಿಮ್ಮ ಇಷ್ಟು ದಿನಗಳ ಸಮಸ್ಯೆಗಳು ಅಂತ್ಯ ಕಾಣಲಿದ್ದು ನೀವು ಸಂಪತ್ತಿನ ಒಡೆಯರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಪರ್ಸ್ನಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಲೇಬಾರದು
ಸಿಂಹ ರಾಶಿ:
ಕೇತು ಸಂಚಾರದಿಂದ ಸಿಂಹ ರಾಶಿಯವರ ಜೀವನದಲ್ಲಿ ಅದೃಷ್ಟ ಬೆಳಗಲಿದೆ. ಕೇತುವಿನ ಅನುಗ್ರಹದಿಂದಾಗಿ ನೀವು ಹೂಡಿಕೆಯಿಂದ ಅಪಾರ ಲಾಭವನ್ನು ಗಳಿಸುವಿರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಧನು ರಾಶಿ:
ಕೇತು ರಾಶಿ ಬದಲಾವಣೆಯು ಧನು ರಾಶಿಯವರ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿಯ ಜೊತೆಗೆ ಆರ್ಥಿಕ ಹರಿವನ್ನು ಹೆಚ್ಚಿಸಲಿದೆ. ಇವರ ಪ್ರತಿ ಕೆಲಸದಲ್ಲೂ ಕೇತು ಯಶಸ್ಸನ್ನು ನೀಡಲಿದ್ದಾನೆ. ವ್ಯಾಪಾರ-ವ್ಯವಹಾರದಲ್ಲಿಯೂ ಅದ್ಭುತ ಲಾಭವಾಗಲಿದೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಅದ್ಭುತವಾಗಿರಲಿದೆ.
ಇದನ್ನೂ ಓದಿ- ಶುಕ್ರ ಗೋಚರದಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ಸೃಷ್ಟಿ- ತುಂಬಲಿದೆ ಈ ರಾಶಿಯವರ ಖಜಾನೆ
ಮಕರ ರಾಶಿ:
ಕೇತು ರಾಶಿ ಪರಿವರ್ತನೆಯಿಂದ ಮಕರ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು, ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯವೂ ಪ್ರಾಪ್ತಿಯಾಗಲಿದೆ. ಸ್ವಂತ ವ್ಯವಹಾರ ಮಾಡುತ್ತಿರುವವರು ಭಾರೀ ಲಾಭವನ್ನು ನಿರೀಕ್ಷಿಸಬಹುದಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.