ಪರ್ಸ್‌ನಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಲೇಬಾರದು

Vastu Tips For Purse: ವಾಸ್ತು ಶಾಸ್ತ್ರದಲ್ಲಿ, ಸುಖ-ಸಂತೋಷ ಜೀವನದಕ್ಕೆ ಬೇಕಾದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ವಾಸ್ತು ಪ್ರಕಾರ, ಪರ್ಸ್‌ನಲ್ಲಿ ಇಡುವ ಕೆಲವು ವಸ್ತುಗಳು ಕೂಡ ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ವಿಷಯಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Feb 3, 2023, 08:41 AM IST
  • ವಾಸ್ತು ಪ್ರಕಾರ, ನಾವು ಪರ್ಸ್‌ನಲ್ಲಿ ಇಡುವ ವಸ್ತುಗಳು ಕೂಡ ನಮ್ಮ ಅದೃಷ್ಟವನ್ನು ಬದಲಾಯಿಸಬಲ್ಲವು ಎಂದು ಹೇಳಲಾಗುತ್ತದೆ.
  • ವಾಸ್ತು ಶಾಸ್ತ್ರದ ಪ್ರಕಾರ, ಪರ್ಸ್‌ನಲ್ಲಿ ಇಡುವ ಕೆಲವು ವಸ್ತುಗಳು ನಮ್ಮ ಜೀವನದಲ್ಲಿ ನಕಾರಾತ್ಮಕತೆಯನ್ನು ಆಹ್ವಾನಿಸುತ್ತವೆ.
  • ಮಾತ್ರವಲ್ಲ, ನಮ್ಮನ್ನು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕುವಂತೆ ಮಾಡುತ್ತವೆ ಎನ್ನಲಾಗುತ್ತದೆ.
ಪರ್ಸ್‌ನಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಲೇಬಾರದು
Vastu Tips for Purse

Vastu Tips for Purse: ಪ್ರತಿಯೊಬ್ಬರೂ ಕೂಡ ಸುಖ-ಸಂತೋಷದ ಜೀವನವನ್ನು ಬಯಸುತ್ತಾರೆ. ಅದಕ್ಕಾಗಿ, ಕಷ್ಟಪಟ್ಟು ದುಡಿಯುತ್ತಾರೆ. ಜೀವನದಲ್ಲಿ ಸಂಪತ್ತು, ಯಶಸ್ಸು ಎಲ್ಲವೂ ನಮ್ಮ ಕಠಿಣ ಪರಿಶ್ರಮ ಮಾತ್ರವಲ್ಲ ನಮ್ಮ ಅದೃಷ್ಟವನ್ನೂ ಕೂಡ ಅವಲಂಬಿಸಿರುತ್ತದೆ. ವಾಸ್ತು ಪ್ರಕಾರ, ನಾವು ಪರ್ಸ್‌ನಲ್ಲಿ ಇಡುವ ವಸ್ತುಗಳು ಕೂಡ ನಮ್ಮ ಅದೃಷ್ಟವನ್ನು ಬದಲಾಯಿಸಬಲ್ಲವು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪರ್ಸ್‌ನಲ್ಲಿ ಇಡುವ ಕೆಲವು ವಸ್ತುಗಳು ನಮ್ಮ ಜೀವನದಲ್ಲಿ ನಕಾರಾತ್ಮಕತೆಯನ್ನು ಆಹ್ವಾನಿಸುತ್ತವೆ. ಮಾತ್ರವಲ್ಲ, ನಮ್ಮನ್ನು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕುವಂತೆ ಮಾಡುತ್ತವೆ ಎನ್ನಲಾಗುತ್ತದೆ. ಅಂತಹ ಅಶುಭ ವಸ್ತುಗಳು ಯಾವುವು, ಪರ್ಸ್‌ನಲ್ಲಿ ಯಾವ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ...

ನಿಮ್ಮ ಪರ್ಸ್‌ನಲ್ಲಿಯೂ ಈ ವಸ್ತುಗಳಿದ್ದರೆ ಕೂಡಲೇ ಅವುಗಳನ್ನು ತೆಗೆದುಹಾಕಿ:
* ಶುಚಿತ್ವಕ್ಕೆ ಮಹತ್ವ ನೀಡಿ:

ವಾಸ್ತು ಶಾಸ್ತ್ರದ ಪ್ರಕಾರ, ಕೆಲವರು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಪರ್ಸ್‌ನಲ್ಲಿ ಇಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಶುಚಿತ್ವ ಇಲ್ಲದ ಕಡೆ ಲಕ್ಷ್ಮೀ ದೇವಿ ಕ್ಷಣಮಾತ್ರವೂ ನಿಲ್ಲಲು ಇಷ್ಟ ಪಡುವುದಿಲ್ಲ. ಹಾಗಾಗಿ ನಿಮ್ಮ ಪರ್ಸ್‌ನಲ್ಲಿ ಇರುವ ಬೇಡದ ವಸ್ತುಗಳನ್ನು ಹೊರಹಾಕಿ, ಪರ್ಸ್ ಶುಚಿತ್ವದ ಬಗ್ಗೆ ಗಮನಹರಿಸಿ.

ಇದನ್ನೂ ಓದಿ-  ಜಾತಕದಲ್ಲಿ ಶನಿ-ರಾಹು-ಕೇತುಗಳನ್ನು ಬಲಪಡಿಸಲು ಸುಲಭ ಪರಿಹಾರ

* ನಕಲಿ ನಾಣ್ಯ:
ಯಾವುದೇ ಕಾರಣದಿಂದಾಗಿ ನೀವು ನಕಲಿ ನಾಣ್ಯ ಅಥವಾ ನೋಟ್ ಅನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟಿದ್ದರೆ ಮೊದಲು ಅದನ್ನು ಹೊರಹಾಕಿ. ಇದು ವ್ಯಕ್ತಿಯ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

* ಹರಿದ ನೋಟು:
ಕೆಲವರು ನೋಟು ಹರಿದಿದ್ದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ತಿಳಿದಿದ್ದರೂ ಕೂಡ ಅದನ್ನು ಪರ್ಸ್‌ನಲ್ಲಿ ಇಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು. ಮಾತ್ರವಲ್ಲ, ನೀವು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸಿಲುಕಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Astro Tips: 5 ರೂ. ನಾಣ್ಯದ ಈ ಉಪಾಯ ಮಾಡಿ, ರಾತ್ರೋರಾತ್ರಿ ಅದೃಷ್ಟ ಖುಲಾಯಿಸುತ್ತದೆ!

ಈ ವಸ್ತುಗಳು ಪರ್ಸ್‌ನಲ್ಲಿದ್ದರೆ ತುಂಬಾ ಮಂಗಳಕರ:
ವಾಸ್ತು ಶಾಸ್ತ್ರದಲ್ಲಿ ಕೆಲವು ವಸ್ತುಗಳು ಪರ್ಸ್‌ನಲ್ಲಿದ್ದರೆ ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಅವುಗಳೆಂದರೆ...
>> ಶ್ರೀಯಂತ್ರವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ಪರ್ಸ್‌ನಲ್ಲಿ ಇಡುವುದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. 
>> ಪರ್ಸ್‌ನಲ್ಲಿ ತಾಯಿ ಲಕ್ಷ್ಮಿಯ ಸಣ್ಣ ಫೋಟೋ ಇಡುವುದನ್ನು ಕೂಡ ಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಪರ್ಸ್ ಯಾವಾಗಲೂ ಹಣದಿಂದ ತುಂಬಿರುತ್ತದೆ ಎಂಬ ನಂಬಿಕೆ ಇದೆ.
>> ಹಣಕಾಸಿನ ಸ್ಥಿತಿ ಸುಧಾರಿಸಲು ಪರ್ಸ್‌ನಲ್ಲಿ ತುಳಸಿ ದಳ, ಇಲ್ಲವೇ ನವಿಲು ಗರಿಯನ್ನು ಇಡುವುದನ್ನೂ ಶುಭ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News