ಧಾರವಾಡ : ಹುಬ್ಬಳ್ಳಿಯ ನವನಗರದ ನಿವಾಸಿ ರುದ್ರಗೌಡ ಪಾಟೀಲ ಅವರು ಎಚ್.ಡಿ.ಎಫ್.ಸಿ. ಜನರಲ್ ಇನ್ಸೂರೆನ್ಸ್ ಕಂಪನಿಯಿಂದ 3 ಲಕ್ಷದವರೆಗಿನ ವೈಯಕ್ತಿಕ ಅಪಘಾತ ಮತ್ತು ಆರೋಗ್ಯದ ವಿಮೆ ಪಾಲಸಿಯನ್ನು ಮಾಡಿಸಿದ್ದರು. ಪಾಲಸಿ ಚಾಲ್ತಿಯಲ್ಲಿರುವಾಗಲೇ ದೂರುದಾರರಿಗೆ ಹೃದಯ ಸಂಬಂಧಿಸಿದ ತೊಂದರೆಯಾಗಿ ಅವರು ಎಸ್.ಡಿ.ಎಮ್‍ನ ನಾರಾಯಣ ಹಾರ್ಟ್ ಸೆಂಟರ್‍ನಲ್ಲಿ ರೂ.3,85,250/- ಹಣವನ್ನು ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಪಡೆದಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ತನ್ನ ಶಾಸಕರನ್ನು ಭದ್ರಮಾಡಿಕೊಳ್ಳಲಿ : ಸಿಎಂ ಬೊಮ್ಮಾಯಿ
ಚಿಕಿತ್ಸಾ ವೆಚ್ಚದ ಹಣದ ಮರುಪಾವತಿಗಾಗಿ ದೂರುದಾರ ಎದುರುದಾರರ ಕಂಪನಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಯ ಮೇಲೆ ವಿಮಾ ಕಂಪನಿಯವರು ಯಾವುದೇ ಆದೇಶ ಮಾಡದೇ ಪೆಂಡಿಂಗ್ ಇಟ್ಟಿದ್ದರು. ಅಂತಹ ವಿಮಾ ಕಂಪನಿಯವರ ವರ್ತನೆಯಿಂದ ಬೇಸತ್ತ ದೂರುದಾರ ತನಗೆ ಅವರಿಂದ ಸೇವಾ ನ್ಯೂನ್ಯತೆ ಉಂಟಾಗಿ, ತೊಂದರೆಯಾಗಿದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: "ಪಶುಸಂಗೋಪನಾ ಸಚಿವರಿಗೆ ಮೇಕೆ, ದನಗಳು ಯಾವುದು ಎಂದು ಗೊತ್ತಿಲ್ಲ"
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ದೂರುದಾರರು ವೈಯಕ್ತಿಕ ಅಪಘಾತ ಮತ್ತು ಆರೋಗ್ಯ ವಿಮೆ ಸೌಲಭ್ಯಕ್ಕೆ ಒಳಪಟ್ಟಿದ್ದು ಅವರ ವಿಮಾ ಪಾಲಸಿ ಚಾಲ್ತಿಯಿದ್ದಾಗ, ವೈಧ್ಯಕೀಯ ವೆಚ್ಚದ ಹಣವನ್ನು ದೂರುದಾರನಿಗೆ ನೀಡದಿರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರುದಾರರು ತಮ್ಮ ಫಿರ್ಯಾದಿಯಲ್ಲಿ ಶಸ್ತ್ರಚಿಕಿತ್ಸೆಗಾಗಿ ರೂ.3,85,250/-ಗಳನ್ನು ಖರ್ಚು ಮಾಡಿದ್ದರು. ಆದರೆ ಅವರು ಮಾಡಿಸಿದಂತಹ ವಿಮಾ ಪಾಲಸಿಯಲ್ಲಿ ರೂ.3 ಲಕ್ಷದವರೆಗೆ ಕ್ಲೇಮ್ ಮೊತ್ತ ಇದ್ದುದರಿಂದ ದೂರುದಾರನಿಗೆ ರೂ.3ಲಕ್ಷ ವೈಧ್ಯಕೀಯ ವೆಚ್ಚದ ಹಣ ನೀಡುವಂತೆ ವಿಮಾ ಕಂಪನಿಯವರಿಗೆ ಆದೇಶಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.50,000/-ಗಳನ್ನು ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.