Urfi Javed : ಉರ್ಫಿ ಜಾವೇದ್ ಇಂದು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದಾರೆ. ತನ್ನ ಡ್ರೆಸ್ಸಿಂಗ್ ಸೆನ್ಸ್‌ನಿಂದಾಗಿ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಉರ್ಫಿ ಎಲ್ಲಿಗೆ ಹೋದರೂ ಆಕೆಯ ಉಡುಗೆ ಚರ್ಚೆಗೆ ಬರುತ್ತದೆ. ಉರ್ಫಿ ಜಾವೇದ್ ಬಿನ್ನ ವಿಭಿನ್ನ ಬಟ್ಟೆ ತೊಟ್ಟು, ತಮ್ಮ ಬೋಲ್ಡ್ ಲುಕ್‌ನಿಂದಾಗಿ ಟ್ರೋಲ್ ಆಗುತ್ತಾರೆ. ಆದರೆ ಈ ರೀತಿ ಬೋಲ್ಡ್ ಲುಕ್‌ನಲ್ಲಿ ಮಿಂಚುವ ಉರ್ಫಿಯ ಜೀವನ ಅಷ್ಟೊಂದು ಸುಲಭದ್ದಾಗಿರಲಿಲ್ಲ.
ಈ ಕಾರಣಕ್ಕಾಗಿಯೇ ಉರ್ಫಿ ಅನೇಕ ಬಾರಿ ಇದರಿಂದ ತೊಂದರೆ ಎದುರಿಸಿದ್ದಾರೆ ಮತ್ತು ಸಾರ್ವಜನಿಕವಾಗಿ ಬೋಲ್ಡ್ ಬಟ್ಟೆ ಧರಿಸುವ ಕಾರಣ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ. ಡ್ರೆಸ್ಸಿಂಗ್ ಸೆನ್ಸ್‌ನಿಂದಾಗಿ ಉರ್ಫಿ ಚರ್ಚೆಗೆ ಗ್ರಾಸವಾಗುವ ವಿಷಯ ತುಂಬಾ ಹಳೆಯದಲ್ಲ. ಬಿಗ್ ಬಾಸ್ OTT ಗಿಂತ ಮೊದಲು ಯಾರೂ ಅವರನ್ನು ಹೆಚ್ಚು ತಿಳಿದಿರಲಿಲ್ಲ. ಈ ಶೋನಲ್ಲಿ ಕಾಣಿಸಿಕೊಂಡ ನಂತರ, ಉರ್ಫಿ ಕೇವಲ ಒಂದು ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ಆದರೆ ಅದರ ನಂತರ ಅವರು ಜನಮನದಲ್ಲಿ ಉಳಿಯಲು ಹೊಸ ಮಾರ್ಗವನ್ನು ಕಂಡುಕೊಂಡರು. ತಮ್ಮ ಬೋಲ್ಡ್ ಡ್ರೆಸ್ಸಿಂಗ್ ಸೆನ್ಸ್‌ನಿಂದ ಎಲ್ಲರನ್ನೂ ಅಚ್ಚರಿಗೊಳಿಸ ತೊಡಗಿದರು. ಆದರೆ ಈ ಮೊದಲು ಉರ್ಫಿಯ ಜೀವನ ಸುಲಭವಾಗಿರಲಿಲ್ಲ.
ಇದನ್ನೂ ಓದಿ : ಮೈಲಾರ ಕಾರ್ಣಿಕ : 'ಮಳೆ ಬೆಳೆ ಜಾಸ್ತಿ ಆಗಲಿದ್ದು, ರೈತರಿಗೆ ಒಳ್ಳೆಯದಾಗಲಿದೆ'
ಸಂದರ್ಶನವೊಂದರಲ್ಲಿ, ತಾನು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿರುವುದಾಗಿ ಉರ್ಫಿ ಹೇಳಿದ್ದಾರೆ. ರೈಲಿಗೆ ತಲೆಕೊಟ್ಟು ಜೀವನವನ್ನು ಕೊನೆಗೊಳಿಸಲು ಯೋಚಿಸಿದ್ದರು ಎಂದು ಉರ್ಫಿ ಸ್ವತಃ ಬಹಿರಂಗಪಡಿಸಿದ್ದಾರೆ. ಆದರೆ ನಂತರ ಖಿನ್ನತೆಯಿಂದ ಹೊರಬಂದು ಜೀವನದ ಯುದ್ಧದಲ್ಲಿ ಗೆಲ್ಲಲು ನಿರ್ಧರಿಸಿದರಂತೆ. ಆತ್ಮಹತ್ಯೆಯ ಉದ್ದೇಶವನ್ನು ತೊರೆದರು. ತಾನು ಮನೆಯಿಂದ ಓಡಿ ಬಂದು ಮುಂಬೈನಲ್ಲಿ ನೆಲೆಸಿರುವುದಾಗಿ ಉರ್ಫಿ ಹೇಳಿಕೊಂಡಿದ್ದಾರೆ. ಅವರು ಮಾಡುವ ಕೆಲಸದಲ್ಲಿ ಅವಳ ಕುಟುಂಬವು ಅವಳ ವಿರುದ್ಧವಾಗಿತ್ತು. ಅವರ ಮನೆಯ ಮಹಿಳೆಯರು ಇನ್ನೂ ಬುರ್ಖಾ ಧರಿಸಿಯೇ ಓಡಾಡುತ್ತಿದ್ದಾರೆ, ಅಲ್ಲಿ ಮಹಿಳೆಯರಿಗೆ ದೊಡ್ಡ ಧ್ವನಿಯಲ್ಲಿ ಮಾತನಾಡಲು ಅವಕಾಶವಿಲ್ಲ ಮತ್ತು ಅವರ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲ. ಉರ್ಫಿ ಜಾವೇದ್ ಅವರ ಬೋಲ್ಡ್‌ನೆಸ್ ಹಿಂದಿರುವ ಕಣ್ಣೀರ ಕಥೆಯಿದು.
ಇದನ್ನೂ ಓದಿ : ಇದೇ ಕಾರಣಕ್ಕೆ ಟಾಟಾ ಕಂಪನಿಯ ಈ ಮೂರು ಕಾರುಗಳು ಅತಿ ಹೆಚ್ಚು ಮಾರಾಟವಾಗುತ್ತಿರುವುದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.