NET Exam 2023: ವಿಷಯ ಹಾಗೂ ದಿನಾಂಕಕ್ಕೆ ಅನುಗುಣವಾಗಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

UGC NET Exam 2023: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುಜಿಸಿ-ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು (NET) ಡಿಸೆಂಬರ್ 2022 ರಿಂದ 'ಅಸಿಸ್ಟೆಂಟ್ ಪ್ರೊಫೆಸರ್' ಮತ್ತು 'ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್'ಗಾಗಿ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಮೋಡ್‌ನಲ್ಲಿ ಆಯೋಜಿಸುತ್ತಿದೆ.  

Written by - Nitin Tabib | Last Updated : Feb 11, 2023, 05:15 PM IST
  • ಸಂಸ್ಥೆಯು ಒಟ್ಟು 57 ವಿಷಯಗಳಿಗೆ ಈ ಪರೀಕ್ಷೆಯನ್ನು ನಡೆಸುತ್ತದೆ.
  • ಪರೀಕ್ಷೆಯ ವೇಳಾಪಟ್ಟಿ ಮತ್ತು ಉಳಿದ ವಿಷಯಗಳ ಹೆಸರುಗಳನ್ನು
  • ನಿಗದಿತ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.
NET Exam 2023: ವಿಷಯ ಹಾಗೂ ದಿನಾಂಕಕ್ಕೆ ಅನುಗುಣವಾಗಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ title=
ಯುಜಿಸಿ ನೆಟ್ ಪರೀಕ್ಷೆ 2023

UGC NET Exam 2023: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, NTA ಯುಜಿಸಿ ನೆಟ್ ಪರೀಕ್ಷೆ 2023 ವಿಷಯ ಮತ್ತು ದಿನಾಂಕವಾರು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು UGC NET ನ ಅಧಿಕೃತ ಸೈಟ್‌ ಆಗಿರುವ ugcnet.nta.nic.in ನಲ್ಲಿ  ಈ ವೇಳಾಪಟ್ಟಿಯನ್ನು ಪರಿಶೀಲಿಸಬಹುದು. 21, 22, 23 ಮತ್ತು 24 ಫೆಬ್ರವರಿ 2023 ರಂದು ನಡೆಯಲಿರುವ UGC NET ಡಿಸೆಂಬರ್ 2022 (ಹಂತ-I, 57 ವಿಷಯಗಳು) ವಿಷಯ ಮತ್ತು ದಿನಾಂಕವಾರು ವೇಳಾಪಟ್ಟಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಸಂಸ್ಥೆಯು ಒಟ್ಟು 57 ವಿಷಯಗಳಿಗೆ ಈ ಪರೀಕ್ಷೆಯನ್ನು ನಡೆಸುತ್ತದೆ. ಪರೀಕ್ಷೆಯ ವೇಳಾಪಟ್ಟಿ ಮತ್ತು ಉಳಿದ ವಿಷಯಗಳ ಹೆಸರುಗಳನ್ನು ನಿಗದಿತ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.

ಅಧಿಕೃತ ನೋಟಿಫಿಕೆಶನ್ ಪ್ರಕಾರ, ಪರೀಕ್ಷಾ ಕೇಂದ್ರದ ನಗರಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು NTA ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಈ ವಾರ ಪ್ರವೇಶ ಪತ್ರ ನೀಡುವ ನಿರೀಕ್ಷೆಯಿದೆ ಎಂದು ನೋಟಿಸ್ ಬುಲೆಟಿನ್ ನಲ್ಲಿ ಹೇಳಲಾಗಿದೆ, ಆದರೆ ಅಡ್ಮಿಟ್ ಕಾರ್ಡ್ ಜಾರಿಯಲ್ಲಿ ವಿಳಂಬವಾಗಿದೆ ಎಂಬಂತೆ ತೋರುತ್ತಿದೆ.

ಇದನ್ನೂ ಓದಿ-PF ಚಂದಾದಾರರಿಗೊಂದು ಸಂತಸದ ಸುದ್ದಿ, ಸಿಗಲಿದೆ ಈ ಲಾಭ, ಇಲ್ಲಿದೆ ಡೀಟೇಲ್ಸ್!

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುಜಿಸಿ-ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು (NET) ಡಿಸೆಂಬರ್ 2022 ರಲ್ಲಿ 'ಅಸಿಸ್ಟೆಂಟ್ ಪ್ರೊಫೆಸರ್' ಮತ್ತು 'ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್'ಗಾಗಿ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಮೋಡ್‌ನಲ್ಲಿ ನಡೆಸುತ್ತಿದೆ. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು NTA UGC NET ನ ಅಧಿಕೃತ ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ-ಪಿಪಿಎಫ್ ನಿಯಮದಲ್ಲಿ ಬದಲಾವಣೆ ತಂದ ಸರ್ಕಾರ, ಹಣ ಹೂಡುವ ಮುನ್ನ ತಿಳಿದುಕೊಳ್ಳಿ, ಇಲ್ದಿದ್ರೆ ಹಾನಿ ತಪ್ಪಿದ್ದಲ್ಲ!

ಯುಜಿಸಿ ನೆಟ್ ಪರೀಕ್ಷೆಯ ಮಾದರಿ
ಈ ಪರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪರೀಕ್ಷೆಯು ಆನ್‌ಲೈನ್ ಮೋಡ್‌ನಲ್ಲಿರುತ್ತದೆ. ಪರೀಕ್ಷೆಯಲ್ಲಿ 300 ಅಂಕಗಳ ಒಟ್ಟು 150 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ಈ ಪ್ರಶ್ನೆಗಳನ್ನು ಬಿಡಿಸಲು 3 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಪ್ರವೇಶ ಕಾರ್ಡ್‌ಗಳನ್ನು ಈ ವಾರ ನೀಡಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-Pension Update: ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್, ಸಿಗಲಿದೆ ಹೆಚ್ಚುವರಿ ಪಿಂಚಣಿ ಮಾರ್ಚ್ 3ರ ಮೊದಲು ಅಪ್ಲೈ ಮಾಡಿ!

ಯಾವಾಗ  ಪರೀಕ್ಷೆಗಳು ಆರಂಭವಾಗಲಿವೆ
ಪರೀಕ್ಷೆಯನ್ನು ಫೆಬ್ರವರಿ 21 ರಿಂದ ಮಾರ್ಚ್ 10, 2023 ರವರೆಗೆ ನಡೆಸಲಾಗುತ್ತದೆ. ಪರೀಕ್ಷೆಯ ಅವಧಿ 180 ನಿಮಿಷಗಳದ್ದಾಗಿರುತ್ತದೆ. ಯುಜಿಸಿ ನೆಟ್ ಪರೀಕ್ಷೆಯನ್ನು ಎರಡು ಶಿಫ್ಟ್ ಗಳಲ್ಲಿ ನಡೆಸಲಾಗುತ್ತದೆ. ಮೊದಲ ಶಿಫ್ಟ್ ಬೆಳೆಗ್ಗೆ 9:00 ರಿಂದ ಮಧ್ಯಾಹ್ನ 12:00 ರವರೆಗೆ ಮತ್ತು ಎರಡನೇ ಶಿಫ್ಟ್ ಮಧ್ಯಾಹ್ನ 3:00 ರಿಂದ ಸಂಜೆ 6:00 ರವರೆಗೆ ಇರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News