'ಪ್ರೇಮಲೋಕ' ದಲ್ಲಿ ರವಿ-ಹಂಸ ದರ್ಬಾರ್‌ ಹೇಗಿತ್ತು ಅಂತ ಗೊತ್ತಾ ...!

Happy Birthday Hamsalekha : ಸುಮಾರು ಎರಡು ದಶಕಗಳ ಕಾಲ ರವಿಚಂದ್ರನ್-ಹಂಸಲೇಖ ಜೋಡಿ ಚಂದನವನದಲ್ಲಿ ಅತಿ ಯಶಸ್ವಿ ಜೋಡಿಯೆನಿಸಿಕೊಂಡಿತು.'

Written by - Savita M B | Last Updated : Jun 23, 2023, 01:49 PM IST
  • ಚಂದನವನಕ್ಕೆ ನಾದಬ್ರಹ್ಮನ ಮ್ಯೂಜಿಕಲ್‌ ಎಂಟ್ರಿ
  • ಪ್ರೇಮಲೋಕದ ಹಂಸಗೀತೆಗಳು
  • ಕ್ರೇಜಿಸ್ಟಾರ್‌ ಕೈ ಹಿಡಿದ ಸಿನಿಮಾಗಳು
'ಪ್ರೇಮಲೋಕ' ದಲ್ಲಿ ರವಿ-ಹಂಸ ದರ್ಬಾರ್‌ ಹೇಗಿತ್ತು ಅಂತ ಗೊತ್ತಾ ...! title=

Ravichandran Hamnsalekha : ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು.

ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಮನಸೂರೆ ಮಾಡುವ ಸಂಗೀತ, ರಂಗುರಂಗಿನ ಸೆಟ್ಟುಗಳು, ಪ್ರತಿಯೊಂದು ಫ಼್ರೇಮಿನಲ್ಲೂ ಹೊಸತನ. ಆಯಾ ಕಾಲಗಟ್ಟಕ್ಕೆ ಅಧುನಿಕ ತಂತ್ರಜ್ಞಾನವನ್ನು ಕನ್ನಡಕ್ಕೆ ತಂದ ಹಿರಿಮೆ ರವಿಚಂದ್ರನ್ ಅವರದು. ವಿದೇಶಗಳಲ್ಲಿ ಹಾಡುಗಳ ಚಿತ್ರಿಕರಣ ಕಾಲ ಪ್ರಾರಂಭವಾದ ಮೇಲೂ ರವಿಚಂದ್ರನ್ ಹಳ್ಳಿಸೊಗಡಿನ 'ರಾಮಾಚಾರಿ' ಸಿನಿಮಾದ ಮೂಲಕ ಹೆಸರಾದರು.

ಚಂದನವನಕ್ಕೆ ನಾದಬ್ರಹ್ಮನ ಮ್ಯೂಜಿಕಲ್‌ ಎಂಟ್ರಿ : 
ಕನ್ನಡ ಚಿತ್ರರಂಗದ ದೇಸಿದೊರೆ, ನಾದಬ್ರಹ್ಮ ಹಂಸಲೇಖರವರನ್ನು ತಮ್ಮ 'ಪ್ರೇಮಲೋಕ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯಿಸಿ ಕನ್ನಡ ಗೀತಪರಂಪರೆಯಲ್ಲೊಂದು ಹೊಸ ಸಂಚಲನ ಮೂಡಿಸಿದರು. ಸುಮಾರು ಎರಡು ದಶಕಗಳ ಕಾಲ ರವಿಚಂದ್ರನ್-ಹಂಸಲೇಖ ಜೋಡಿ ಚಂದನವನದಲ್ಲಿ ಅತಿ ಯಶಸ್ವಿ ಜೋಡಿಯೆನಿಸಿಕೊಂಡಿತು.

'ಪ್ರೇಮಲೋಕ', 'ರಣಧೀರ' ಸಿನಿಮಾಗಳ ಆಡಿಯೋ ಕ್ಯಾಸೆಟ್ಟುಗಳು ದಾಖಲೆಯ ಮಾರಾಟ ಕಂಡು ಇತಿಹಾಸ ಬರೆದಿವೆ. ಇಂದಿಗೂ ಎಫ಼್.ಎಮ್ ಹಾಗೂ ಟಿ.ವಿ. ವಾಹಿನಿಗಳಲ್ಲಿ ಇವರ ಹಾಡುಗಳದ್ದೆ ಸಿಂಹಪಾಲು.

ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ತಂದಿದ್ದು ವಿ.ರವಿಚಂದ್ರನ್. ಪ್ರೇಮಕಥೆಗಳ ಬಹುತೇಕ ಕೋನಗಳನ್ನು ಮುಟ್ಟಿ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಇವರದು.

ಕನ್ನಡಕ್ಕೆ ದೊಡ್ಡ ಬಜೆಟ್ ಸಿನಿಮಾಗಳ ಮೂಲಕ ದೃಶ್ಯಶ್ರೀಮಂತಿಕೆಯನ್ನು ತಂದು ಕೊಟ್ಟವರು ರವಿಚಂದ್ರನ್. ಹಂಸಲೇಖ ಮಾತ್ರವಲ್ಲದೆ ಎಲ್.ಎನ್.ಶಾಸ್ತ್ರಿ, ಸುಮಾ ಶಾಸ್ತ್ರಿ, ಹರಿಕೃಷ್ಣ, ಗೌತಮ್ ಶ್ರೀವತ್ಸ ಮುಂತಾದ ಸಂಗೀತ ನಿರ್ದೇಶಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜಿ ಎಸ್ ವಿ ಸೀತಾರಾಂ ಅವರು ಇವರ ಬಹುಕಾಲದ ಛಾಯಾಗ್ರಾಹಕರಾಗಿದ್ದಾರೆ. 

ಪ್ರೇಮಲೋಕದ ಹಂಸಗೀತೆಗಳು : 
ಪ್ರೇಮಲೋಕ ಸಿನಿಮಾದಲ್ಲಿ ಒಟ್ಟು 11 ಸಾಂಗ್‌ಗಳಿವೆ... ಎಲ್ಲ ಸಾಂಗ್‌ಗಳು ಪ್ರೀತಿಯ ಸಾರಾಂಶವನ್ನೇ ಹೇಳುತ್ತವೆ. ಇಂದಿಗೂ ಆ ಸಾಂಗ್‌ಗಳು ಸಖತ್‌ ಹಿಟ್‌ ಆಗಿವೆ ಅಂತ ಅಂದರೆ ತಪ್ಪಾಗೋದಿಲ್ಲ. ರವಿಚಂದ್ರನ್‌ ಅವರ ಕೈ ಹಿಡಿದಿರುವ ಸಿನಿಮಾ ಪ್ರೇಮಲೋಕ ಅಂತನೇ ಹೇಳಲಾಗುತ್ತೆ. 

ಇದನ್ನೂ ಓದಿ-ಅಬ್ಬರಿಸಲು ಸಜ್ಜಾದ "ಕಬ್ಜ"....

ರೀಮೇಕ್ ಅಲ್ಲ ರವಿಮೇಕ್ : 
ರೀಮೇಕ್ ಹೇಗೆ ಮಾಡಬೇಕು ಎಂಬುದಕ್ಕೆ ರವಿಚಂದ್ರನ್ ಸಿನಿಮಾಗಳು ನಿಜಕ್ಕೂ ಮಾದರಿಯಾಗಿ ನಿಲ್ಲುತ್ತವೆ. ಹಿಂದಿಯ 'ಹೀರೋ' ಸಿನಿಮಾ ರವಿಚಂದ್ರನ್ ಎಂಬ ಅಪ್ಪಟ ಕಲಾವಿದನ ಕುಂಚದಲ್ಲಿ 'ರಣಧೀರ'ನಾದಾಗ, ಮೂಲನಿರ್ದೇಶಕರಾದ ಸುಭಾಷ್ ಗಾಯ್ ಅವರೇ ರವಿಚಂದ್ರನ್ ಅವರ ನಿರ್ದೇಶನವನ್ನು ಕೊಂಡಾಡಿದ್ದರು.

ಅನ್ಯಭಾಷೆಯ ಸಿನಿಮಾಗಳನ್ನು ಯಥಾವತ್ ಭಟ್ಟಿ ಇಳಿಸದೆ ತಮ್ಮದೇ ಶೈಲಿಯಲ್ಲಿ ಕನ್ನಡೀಕರಣಗೊಳಿಸುವಲ್ಲಿ ಇವರು ನಿಸ್ಸೀಮರು. ಹಾಗಾಗಿ, ರೀಮೇಕ್ ಗಳ ನಡುವೆ ರವಿಮೇಕ್ ಗಳು ವಿಶಿಷ್ಟವಾಗಿ ಎದ್ದುನಿಲ್ಲುತ್ತವೆ. 

ಕ್ರೇಜಿಸ್ಟಾರ್‌ ಕೈ ಹಿಡಿದ ಸಿನಿಮಾಗಳು : 
ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ, ಹೂ, ಅಪೂರ್ವ, ಮುಂತಾದ ಜನಪ್ರಿಯ ಚಿತ್ರಗಳನ್ನು ಇವರು ಚಂದನವನಕ್ಕೆ ನೀಡಿದ್ದಾರೆ. 'ರಾಮಾಚಾರಿ' ಚಿತ್ರವು ಆಗಿನ ಕಾಲದಲ್ಲೇ ಕೆನಡಾದ ಓಂಟಾರಿಯೋ ಫ಼್ಹಿಲಂ ಫ಼ೆಸ್ಟಿನಲ್ಲಿ ಪ್ರದರ್ಶನಗೊಂಡಿದ್ದು ಗಮನಾರ್ಹ ಸಂಗತಿ. 

ರವಿಚಂದ್ರನ್‌ ಅವರ ಸಾಕಷ್ಟು ಸಿನಿಮಾದಲ್ಲಿ ಹಂಸಲೇಖ ಅವರ ಸಂಗೀತವೇ ಹೆಚ್ಚು. ಅವರಿಬ್ಬರೂ ಸ್ಯಾಂಡಲ್ ವುಡ್‌ ನ ಎರಡು ಕಣ್ಣುಗಳು ಅಂತಾನೇ ಸಿನಿ ಪ್ರೀಯರು ಹೇಳುತ್ತಾರೆ. 

ಇದನ್ನೂ ಓದಿ-ತುಪ್ಪದ ಬೆಡಗಿ ನಟಿ ರಾಗಿಣಿ ಮದುವೆ ಯಾವಾಗ? ಮದುವೆ ಆಗ್ತಾರ ಇಲ್ವಾ ರಾ'ಗಿಣಿ'..? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News