/kannada/photo-gallery/gruhalakshmi-money-release-date-this-month-249277 ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? 249277

ತುಪ್ಪದ ಬೆಡಗಿ ನಟಿ ರಾಗಿಣಿ ಮದುವೆ ಯಾವಾಗ? ಮದುವೆ ಆಗ್ತಾರ ಇಲ್ವಾ ರಾ'ಗಿಣಿ'..?

Ragini Wedding : ತುಪ್ಪ ಬೇಕಾ ತುಪ್ಪ ಅನ್ನೋ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದು ಟಾಪ್ ಲಿಸ್ಟನಲ್ಲಿ ಇದ್ದ ನಟಿ ಅಂದ್ರೆ ಅದು ತುಪ್ಪದ ಬೆಡಗಿ ರಾಗಿಣಿ. ರಾಗಿಣಿ ಅಂದ್ರೆ ಸಾಕು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ.  

Written by - YASHODHA POOJARI | Last Updated : Feb 13, 2023, 10:45 AM IST
  • ತುಪ್ಪದ ಬೆಡಗಿ ನಟಿ ರಾಗಿಣಿ ಮದುವೆ ಯಾವಾಗ?
  • ಮದುವೆ ಆಗ್ತಾರ ಇಲ್ವಾ ರಾ'ಗಿಣಿ'..?
ತುಪ್ಪದ ಬೆಡಗಿ ನಟಿ ರಾಗಿಣಿ ಮದುವೆ ಯಾವಾಗ? ಮದುವೆ ಆಗ್ತಾರ ಇಲ್ವಾ ರಾ'ಗಿಣಿ'..? title=
ರಾಗಿಣಿ

Ragini Wedding : ತುಪ್ಪ ಬೇಕಾ ತುಪ್ಪ ಅನ್ನೋ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದು ಟಾಪ್ ಲಿಸ್ಟನಲ್ಲಿ ಇದ್ದ ನಟಿ ಅಂದ್ರೆ ಅದು ತುಪ್ಪದ ಬೆಡಗಿ ರಾಗಿಣಿ. ರಾಗಿಣಿ ಅಂದ್ರೆ ಸಾಕು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ. ಕಿಚ್ಚ ಸುದೀಪ್ ಮತ್ತು ರಾಗಿಣಿ  ಜೋಡಿ ತೆರೆ ಮೇಲೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಬ್ಯಾಕ್ ಟು ಬ್ಯಾಕ್ ಎಲ್ಲಾ ಸ್ಟಾರ್ ಗಳ ಜೊತೆ ರಾಗಿಣಿ ನಟಿಸಿ ಸೈ ಅನಿಸಿಕೊಂಡು ತುಂಬಾ ಬ್ಯುಸಿ ನಟಿಯಾಗಿದ್ದರು.

ಇದನ್ನೂ ಓದಿ : ಮಧ್ಯ ರಾತ್ರಿವರೆಗೂ ಕ್ರೇಜಿಸ್ಟಾರ್ ರವಿಚಂದ್ರನ್ ಎದ್ದು ಕುಳಿತು ಚಿಂತಿಸೋ ವಿಚಾರ ಏನು ಗೊತ್ತಾ...?

ಇಷ್ಟೆಲ್ಲಾ ಆದ ಬಳಿಕ ಏಕಏಕಿ ದಪ್ಪ ಆಗಿ ಸ್ವಲ್ಪ ಸಮಯ ಸಿನಿಮಾಗಳಿಂದ ದೂರ ಉಳಿದು ಸಮಾಜ ಸೇವೆ ಮಾಡಿಕೊಂಡು ಇದ್ರು.ಮತ್ತೇ ತೂಕ ಇಳಿಸಿಕೊಂಡು ಸಿನಿಮಾ ಪ್ರಾಜೆಕ್ಟ್ ಗಳಳ್ಳಿ ಬ್ಯುಸಿ ಆಗಿದ್ದಾರೆ. ಅದರ ಜೊತೆ ಸಮಾಜಮುಖಿ ಕೆಲಸ ಮಾಡೋ ಆಸೆ ರಾಗಿಣಿಗಿದೆ. ಮಂಗಳಮುಖಿಯರ ಪಾಲಿಗೂ ಕೆಲವೊಂದು ವಿಚಾರದಲ್ಲಿ ಬೆಳಕಾಗಿದ್ದಾರೆ. ಇದೀಗ ಅವರ ಅಭಿಮಾನಿಗಳು ರಾಗಿಣಿ ಮದುವೆ ಆಗ್ತಾರಾ ಇಲ್ವಾ ಅನ್ನೋ ಪ್ರಶ್ನೆಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೇಳಲು ಶುರು ಮಾಡಿದ್ದಾರೆ.

ಇತ್ತೀಚಿಗೆ ರಾಗಿಣಿ ಮಹಿಳಾ ಪ್ರಧಾನ ಸಿನಿಮಾಗಳ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯವಾಗಿಯೂ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೋ ಮದ್ವೆ ಯೋಚನೆ ಮಾಡಿರೋ ಸೂಚನೆಗಳು ಎಲ್ಲೂ ರಾಗಿಣಿ ಕಡೆಯಿಂದ ಕಾಣಿಸುತ್ತಿಲ್ಲ. ಏನೇ ಇದ್ದರೂ ಅಭಿಮಾನಿಗಳಿಗೆ ನೇರವಾಗಿ ಕನೆಕ್ಟ್ ಆಗಿರೋ ತುಪ್ಪದ ಬೆಡಗಿ ಅವರೇ ಮುಂದಿನ ಯೋಚನೆಗಳನ್ನ ಹೇಳಿಕೊಳ್ಳಬಹುದು.ಸಮಾಜಕ್ಕೆ ಬಡವರಿಗೆ ಆದಷ್ಟು ಸಹಾಯ ಮಾಡಬೇಕು ಅನ್ನೋ ಮನಸ್ಥಿತಿ ಇರೋ ರಾಗಿಣಿಗೆ ಆ ದೇವರು ಹೆಚ್ಚು ಶಕ್ತಿ ಕೊಡಲಿ ಅನ್ನೋದೇ ನಮ್ಮ ಆಶಯ

ಇದನ್ನೂ ಓದಿ : Kabzaa Audio Release : ಕಬ್ಜ ಆಡಿಯೋ ರಿಲೀಸ್‌​ಗೆ ಬೃಹತ್​ ವೇದಿಕೆ ಸಿದ್ಧ.! ಎಲ್ಲಿ, ಯಾವಾಗ? ಇಲ್ಲಿ ನೋಡಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.