ಯಮಾಹಾ 2023 ನ್ಯೂ ಬೈಕ್‌ ಸಿರೀಸ್‌ ರಿಲೀಸ್‌.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ದೇಶಾದ್ಯಂತ ಬೈಕಿಂಗ್ ಉತ್ಸಾಹಿಗಳಿಗೆ ಉತ್ಸಾಹಕರ ಮತ್ತು ರೋಮಾಂಚಕ ರೈಡ್ ಅನುಭವದ ಭರವಸೆ ನೀಡಿರುವ ಯಮಾಹಾ ಮೋಟಾರ್(ಐವೈಎಂ) ಪ್ರೈ.ಲಿ. ಇಂದು 2023ರ ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್, ಎಫ್‍ಝಡ್-ಎಕ್ಸ್, ಎಂಟಿ-15 ವಿ2 ಡಿಲಕ್ಸ್ ಮತ್ತು ಆರ್15ಎಂ ಅನ್ನು ಹೊಸ ನೋಟ ಮತ್ತು ಈ ವರ್ಗದ ಮುಂಚೂಣಿಯ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದೆ.

Written by - Krishna N K | Last Updated : Feb 18, 2023, 07:53 PM IST
ಯಮಾಹಾ 2023 ನ್ಯೂ ಬೈಕ್‌ ಸಿರೀಸ್‌ ರಿಲೀಸ್‌.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..! title=

ಬೆಂಗಳೂರು : ದೇಶಾದ್ಯಂತ ಬೈಕಿಂಗ್ ಉತ್ಸಾಹಿಗಳಿಗೆ ಉತ್ಸಾಹಕರ ಮತ್ತು ರೋಮಾಂಚಕ ರೈಡ್ ಅನುಭವದ ಭರವಸೆ ನೀಡಿರುವ ಯಮಾಹಾ ಮೋಟಾರ್(ಐವೈಎಂ) ಪ್ರೈ.ಲಿ. ಇಂದು 2023ರ ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್, ಎಫ್‍ಝಡ್-ಎಕ್ಸ್, ಎಂಟಿ-15 ವಿ2 ಡಿಲಕ್ಸ್ ಮತ್ತು ಆರ್15ಎಂ ಅನ್ನು ಹೊಸ ನೋಟ ಮತ್ತು ಈ ವರ್ಗದ ಮುಂಚೂಣಿಯ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದೆ.

150-ಸಿಸಿ ವರ್ಗವನ್ನು ಮುನ್ನಡೆಸುತ್ತಿರುವ ಯಮಾಹಾ ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್, ಎಫ್‍ಝಡ್-ಎಕ್ಸ್ ಮತ್ತು ಎಂಟಿ-15 ವಿ2 ಡಿಲಕ್ಸ್ ಮಾದರಿಗಳು ಯಮಾಹಾ ಆರ್15ಎಂ ಮತ್ತು ಆರ್15ವಿ4ಗಳೊಂದಿಗೆ ಈಗ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ(ಟಿಸಿಎಸ್) ಅನ್ನು ಸ್ಟಾಂಡರ್ಡ್ ಫೀಚರ್ ಆಗಿ ಹೊಂದಿವೆ. ಈ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಇಗ್ನಿಷನ್ ಸಮಯವನ್ನು ನಿಯಂತ್ರಿಸುತ್ತದೆ ಮತ್ತು ಹೆಚ್ಚು ಜಾರುವಿಕೆ ತಪ್ಪಿಸಲು ತಕ್ಷಣವೇ ಎಂಜಿನ್ ಶಕ್ತಿಯನ್ನು ಹೊಂದಿಸಲು ಇಂಧನದ ಸೇರ್ಪಡಿಕೆ ಪ್ರಮಾಣ ನಿಯಂತ್ರಿಸುತ್ತದೆ. ಇದರಿಂದ ಚಕ್ರಕ್ಕೆ ಶಕ್ತಿಯ ದಕ್ಷ ಪೂರೈಕೆಯಾಗುತ್ತದೆ ಮತ್ತು ಚಕ್ರ ತಿರುಗುವಿಕೆ ಕಡಿಮೆ ಮಾಡುತ್ತದೆ, ಇದರಿಂದ ಆಧುನಿಕ ಕಾಲದ ಬೈಕರ್‍ಗಳು ಬಯಸುವ ಥ್ರಿಲ್ ನೀಡುತ್ತದೆ.

No description available.

ಇದನ್ನೂ ಓದಿ: WhatsAppನಿಂದ ಬಂಬಾಟ್ ವೈಶಿಷ್ಟ್ಯ ಬಿಡುಗಡೆ, ಇನ್ಮುಂದೆ ಒಂದೇ ಕ್ಲಿಕ್ ನಲ್ಲಿ 100 ಕ್ಕೂ ಹೆಚ್ಚು ಫೋಟೋ ಹಾಗೂ ವಿಡಿಯೋ ಕಳುಹಿಸಿ

ಈ ಸಂದರ್ಭ ಕುರಿತು ಮಾತನಾಡಿದ ಯಮಾಹಾ ಮೋಟಾರ್ ಇಂಡಿಯಾ ಕಂಪನಿಗಳ ಸಮೂಹದ ಅಧ್ಯಕ್ಷ ಶ್ರೀ ಐಶಿನ್ ಚಿಹಾನಾ, “ಪ್ರಸ್ತುತದ `ಕಾಲ್ ಆಫ್ ದಿ ಬ್ಲೂ’ ಅಭಿಯಾನದ ಭಾಗವಾಗಿ ಯಮಾಹಾ ಭಾರತಕ್ಕೆ ತನ್ನ ಜಾಗತಿಕ ಉತ್ಪನ್ನ ಪೋರ್ಟ್‍ಫೋಲಿಯೊ ಮೂಲಕ ಆಕರ್ಷಕ ಫೀಚರ್‍ಗಳನ್ನು ಪರಿಚಯಸಲು ಬದ್ಧವಾಗಿದೆ ಮತ್ತು ನಮ್ಮ ಗ್ರಾಹಕರಿಗೆ ಹೊಸ ಅನುಭವಗಳನ್ನು ನೀಡುವ ಉಪಕ್ರಮಗಳನ್ನು ಪರಿಚಯಿಸುತ್ತಿದೆ. ಈ ಬದ್ಧತೆಗೆ ಅನುಗುಣವಾಗಿ ನಾವು ಇಂದು ನಮ್ಮ 149ಸಿಸಿ-155ಸಿಸಿ ಪ್ರೀಮಿಯಂ ಮೋಟಾರ್‍ಸೈಕಲ್ ಶ್ರೇಣಿಯಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಸ್ಟಾಂಡರ್ಡ್ ಫೀಚರ್ ಆಗಿ ಪ್ರಕಟಿಸಲು ಬಹಳಳ ಸಂತೋಷ ಹೊಂದಿದ್ದೇವೆ. ಜಾಗತಿಕವಾಗಿ ಯಮಾಹಾ ಮೋಟಾರ್‍ಸೈಕಲ್‍ಗಳನ್ನು ಅವುಗಳ ಅಸಾಧಾರಣ ನಿರ್ವಹಣೆ ಮತ್ತು ಕಾರ್ಯಕ್ಷಮತೆಗೆ ಅಪಾರ ಪ್ರಶಂಸೆ ಪಡೆದಿವೆ ಮತ್ತು ನಮ್ಮ ಮೋಟಾರ್‍ಸೈಕಲ್‍ಗಳ ಹೆಚ್ಚು ವಿಕಾಸಗೊಂಡ 2023ರ ಆವೃತ್ತಿಗಳು ಅತ್ಯಂತ ನಿರೀಕ್ಷಿತ ಫೀಚರ್‍ಗಳೊಂದಿಗೆ ಭಾರತದ ನಮ್ಮ ಯುವ ಗ್ರಾಹಕರನ್ನು ಆಕರ್ಷಿಸಲಿವೆ” ಎಂದರು.

No description available.

ಯಮಾಹಾ ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್ & ಎಫ್‍ಝಡ್-ಎಕ್ಸ್ ಹೃದಯದಲ್ಲಿ ಕಚ್ಚಾ ಆಗಿರುವ ಆರ್15ಎಂ ಮತ್ತು ಎಂಟಿ-15 ವಿ2 ಡಿಲಕ್ಸ್ ಯಮಾಹಾದ ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, ಎಸ್‍ಒಎಚ್‍ಸಿ, 4-ವಾಲ್ವ್, 155ಸಿಸಿ ಫ್ಯೂಯೆಲ್-ಇಂಜೆಕ್ಟೆಡ್ ಎಂಜಿನ್ ವೇರಿಯಬಲ್ ವಾಲ್ವ್ ಆಕ್ಚುಯೇಷನ್(ವಿವಿಎ) ಸಿಸ್ಟಂನೊಂದಿಗೆ ಹೊಂದಿವೆ. ಇದು 6-ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‍ನೊಂದಿಗೆ ಹಗುರ ಆಕ್ಚುಯೇಷನ್‍ಗೆ ಹೊಂದಿದ್ದು 10,000 ಆರ್‍ಪಿಎಂನಲ್ಲಿ 18.4ಪಿಎಸ್ ಉತ್ಪಾದಿಸುತ್ತಿದ್ದು ಗರಿಷ್ಠ ಔಟ್‍ಪುಟ್ 14.2ಎನ್‍ಎಂ ಅನ್ನು 7,500ಆರ್‍ಪಿಎಂ ನೀಡುತ್ತದೆ.

No description available.

ಬೆಲೆ ಮಾಹಿತಿ:

  • ಮಾದರಿಗಳು ಹೊಸ ಬಣ್ಣ ಎಕ್ಸ್-ಶೋರೂಂ(ನವದೆಹಲಿ)
  • ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್ - ಖs. 1, 27,400
  • ಎಫ್‍ಝಡ್-ಎಕ್ಸ್ ಡಾರ್ಕ್ ಮ್ಯಾಟ್ ಬ್ಲೂ ಖs. 1, 36, 900
  • ಆರ್15ಎಂ - ಖs. 1, 93, 900
  • ಆರ್15ವಿ4 ಡಾರ್ಕ್ ನೈಟ್ ಖs. 1, 81,900
  • ಎಂಟಿ15 ವಿ2 ಡಿಲಕ್ಸ್ ಮೆಟಾಲಿಕ್ ಬ್ಲಾಕ್ ಖs. 1, 68, 400

No description available.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News