ಬೆಂಗಳೂರು : ಹದಿನಾಲ್ಕು ವರ್ಷಗಳ ಕಾಲ ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಜಯರಾಂ ಜಯಲಲಿತಾ ಅವರು ತಮ್ಮ ಕೊನೆಯ ಉಸಿರಿರುವವರೆಗೂ ಜನರ ಹೃದಯ ಸಿಂಹಸನದಲ್ಲಿಯೂ ಸ್ಥಾನ ಪಡೆದಿದ್ದರು. ಇಂದಿಗೂ ತಮಿಳುನಾಡಿನಲ್ಲಿ ಒಲುಮೆಯ ಅಮ್ಮನನ್ನು ನೆನೆಯದವರಿಲ್ಲ. ಜಯಲಲಿತಾ ಜನಸಾಮಾನ್ಯರ ನಾಯಕಿ ಮತ್ತು ವರ್ಚಸ್ವಿ ನಟಿ ಎನ್ನುವುದು ಇಡೀ ಜಗತ್ತಿಗೆ ತಿಳಿದಿರುವ ವಿಚಾರ. ಡಿಸೆಂಬರ್ 5, 2016ರಲ್ಲಿ ಅವರು ಇಹಲೋಕ ತ್ಯಜಿಸಿದರು.ಜಯಲಲಿತಾ ನಿಧನವು ಇಡೀ ರಾಷ್ಟ್ರವನ್ನು ತಲ್ಲಣಗೊಳಿಸಿತ್ತು. ಅವರ ಜನ್ಮ ಜಯಂತಿಯಂದು ಜಯ ಲಲಿತಾ ಬಗೆಗಿನ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ:
1. ಜಯಲಲಿತಾ 1948 ರಲ್ಲಿ ಫೆಬ್ರವರಿ 24 ರಂದು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ, ಜನಿಸಿದರು.
2. ಒಂದು ವರ್ಷವಾದಾಗ ಅವರಿಗೆ ಜಯಲಲಿತಾ ಎನ್ನುವ ಹೆಸರಿಡಲಾಯಿತು. ಮೈಸೂರಿನಲ್ಲಿ ತಂಗಿದ್ದ ಎರಡು ಮನೆಗಳಾದ 'ಜಯ ವಿಲಾಸ' ಮತ್ತು 'ಲಲಿತ ವಿಲಾಸ' ಎಂಬ ಎರಡು ಮನೆಗಳ ಹೆಸರುಗಳಿಂದಲೇ ಅವರಿಗೆ ಈ ಹೆಸರು ಇಡಲಾಗಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : "ಶರದ್ ಪವಾರ್ ಮಹಾರಾಷ್ಟ್ರ ರಾಜಕೀಯದ ಶಕುನಿ ಇದ್ದಂತೆ"
3. ಜಯಲಲಿತಾ ಅವರು ಕೇವಲ 3 ವರ್ಷದವರಾಗಿದ್ದಾಗ ಭರತನಾಟ್ಯ ಕಲಿತರು.
4.ಜಯಲಲಿತಾ ಅವರು 15 ನೇ ವಯಸ್ಸಿನಲ್ಲಿ ಅವರ ತಾಯಿ ನಟಿ ಸಂಧ್ಯಾ ತಮಿಳು ಚಲನಚಿತ್ರೋದ್ಯಮಕ್ಕೆ ಸೇರಲು ಒತ್ತಾಯಿಸಿದರು. ಆಗ ಅವರಿನ್ನೂ ವಿದ್ಯಾರ್ಥಿನಿಯಾಗಿದ್ದು, ಓದು ಬರಹದಲ್ಲಿ ಟಾಪರ್ ಆಗಿದ್ದರು.
5. ಜಯಲಲಿತಾ ವಕೀಲರಾಗಲು ಬಯಸಿದ್ದರು. ಆದರೆ ಅವರ ಚೊಚ್ಚಲ ಚಿತ್ರ ಅವರಿಗೆ ಅದ್ಬುತ ಯಶಸ್ಸು ತಂದು ಕೊಟ್ಟಿತ್ತು. ಜಯಲಲಿತಾ ಅವರ ಮೊದಲ ಸಿನಿಮಾ 'adult only’ಬಿಡುಗಡೆಯಾಯಿತು. ಆದರೆ ಜಯಲಲಿತಾ ಕೇವಲ 15 ವರ್ಷ ವಯಸ್ಸಿನವರಗಿದ್ದರಿಂದ ತನ್ನ ಮೊದಲ ಚಲನಚಿತ್ರವನ್ನು ವೀಕ್ಷಿಸುವುದು ಸಾಧ್ಯವಾಗಲಿಲ್ಲ.
6. ಮುಖ್ಯಮಂತ್ರಿಯಾಗಿ ಅವರು ಕೇವಲ 1 ರೂಪಾಯಿಯನ್ನು ವೇತನವಾಗಿ ಪಡೆದರು. ಜಯಾ ಅವರು ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಸಂಬಳದ ಚೆಕ್ ಅನ್ನು ಸ್ವೀಕರಿಸಲು ನಿರಾಕರಿಸಿದರು. ಅವರು "ಆದಾಯದ ಮೂಲವನ್ನು ಹೊಂದಿದ್ದು, ಸಂಬಳದ ಅಗತ್ಯವಿಲ್ಲ" ಎಂದು ಹೇಳಿದ್ದರು. ಸಾರ್ವಜನಿಕ ಸೇವಕಿಯಾಗಿ ಸಂಬಳ ಪಡೆಯಬೇಕು ಎಂದು ಹೇಳಿದಾಗ, ಕೇವಲ ಒಂದು ರೂಪಾಯಿಯನ್ನು ವೇತನವಾಗಿ ಪಡೆದರು.
7. ಅಮ್ಮ, 1995 ರಲ್ಲಿ, ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ, ತಮ್ಮ 'ಸಾಕು ಮಗ' ಸುಧಾಕರನ್ಗೆ ಅದ್ದೂರಿ ಮದುವೆಯನ್ನು ಆಯೋಜಿಸಿದ್ದರು. ಗಿನ್ನೆಸ್ ದಾಖಲೆಯ ಪ್ರಕಾರ, ಚೆನ್ನೈನ 50 ಎಕರೆ ಮೈದಾನದಲ್ಲಿ ನಡೆದ ವಿವಾಹಕ್ಕೆ 1,50,000 ಅತಿಥಿಗಳನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ : most expensive vegetable: ಬರೋಬ್ಬರಿ 20 ವರ್ಷ ಬದುಕುವ ವಿಶ್ವದ ದುಬಾರಿ ತರಕಾರಿ ಇದು: ಈ ಬೆಲೆಗೆ ಬೈಕ್ ಖರೀದಿಸಬಹುದು ಅಂತಿದ್ದಾರೆ ಜನ!
8. ಜನಪ್ರಿಯ ತಮಿಳುನಾಡು ಸಿಎಂ ಕುಂಭಕೋಣಂನಲ್ಲಿ ನಡೆದ ಮಹಾಮಕಂ ಉತ್ಸವದಲ್ಲಿ ಭಾಗವಹಿಸಿದ್ದರು. ಅಮ್ಮನ ದರ್ಶನಕ್ಕೆ ಸೇರಿದ್ದ ಅಪಾರ ಜನಸಮೂಹದಲ್ಲಿ ಕಾಲ್ತುಳಿತ ಉಂಟಾಗಿ 50 ಮಂದಿ ಸಾವಿಗೀಡಾಗಿದ್ದರು.
9.ಜಯಲಲಿತಾ ಅವರು ಇಂಗ್ಲಿಷ್ ಬರಹಗಾರ್ತಿ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಿದ್ದರು. ಅವರು ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳನ್ನು ಕರಗತ ಮಾಡಿಕೊಂಡಿದ್ದರು.
10. ಜಯಾ 85 ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮೇಂದ್ರ ಅವರೊಂದಿಗೆ ಒಂದು ಹಿಂದಿ ಚಲನಚಿತ್ರದಲ್ಲಿ ನಟಿಸಿದ್ದರು. ಅದು ಕೂಡ ಹಿಟ್ ಆಗಿತ್ತು.
11. ಎಂಜಿಆರ್ ಒತ್ತಾಯದಿಂದ ಅವರು ರಾಜಕೀಯ ಪ್ರವೇಶಿಸಿದರು. ಆಕೆಯನ್ನು ಡಿಎಂಕೆಯ ಪ್ರಚಾರ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ನಂತರ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ