ನವದೆಹಲಿ: ನಾವು ದಿನನಿತ್ಯದ ಸಣ್ಣ ಅಗತ್ಯಗಳಿಗಾಗಿ ಕಿರಾಣಿ ಅಂಗಡಿಗೆ ಹೋಗಬೇಕಾಗುತ್ತದೆ. ಆಹಾರ ಸಾಮಗ್ರಿಗಳಿಂದ ಹಿಡಿದು ಹಿಟ್ಟು ಮತ್ತು ಇತರ ಹಲವಾರು ವಸ್ತುಗಳವರೆಗೆ ಬೇಕೆಂದರೆ ಜನರು ಕಿರಾಣಿ ಅಂಗಡಿಗೆ ಹೋಗುತ್ತಾರೆ. ಚಿಲ್ಲರೆ ಮಾರಾಟದಿಂದಲೂ ಈ ಕಿರಾಣಿ ಅಂಗಡಿಗಳು ಬಹಳಷ್ಟು ಗಳಿಸುತ್ತವೆ. ನೀವೂ ಸಹ ಕಿರಾಣಿ ಅಂಗಡಿ ತೆರೆಯಲು ಯೋಚಿಸುತ್ತಿದ್ದರೆ, ಇದರ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.
ಹೌದು, ಕಿರಾಣಿ ಅಂಗಡಿಯ ವ್ಯವಹಾರದಿಂದ ನೀವು ಕೈತುಂಬಾ ಹಣ ಗಳಿಸಬಹುದು. ಈ ವ್ಯವಹಾರವನ್ನು ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯಿಂದ ಮಾಡಿದರೆ ನಿಮಗೆ ಲಕ್ಷ ಲಕ್ಷ ಹಣ ಗಳಿಸಬಹುದು. ಜಗತ್ತು ಎಷ್ಟೇ ಡಿಜಿಟಲ್ ಆಗಿದ್ದರೂ ಕಿರಾಣಿ ಅಂಗಡಿಗಳ ಅವಶ್ಯಕತೆ ಯಾವಾಗಲೂ ಇರುತ್ತದೆ, ಮುಂದೆಯೂ ಇರುತ್ತದೆ.
ಇದನ್ನೂ ಓದಿ: ಪಿಎಂ ಕಿಸಾನ್ 13 ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್ ! ರೈತರಿಗೆ ಸಿಗುವುದು ಸಿಹಿ ಸುದ್ದಿ
ಕಿರಾಣಿ ಅಂಗಡಿ ಪ್ರಾರಂಭಿಸುವುದು ಹೇಗೆ?
ಕಿರಾಣಿ ಅಂಗಡಿಗೆ ಬಹಳಷ್ಟು ವಸ್ತುಗಳು ಬೇಕಾಗುತ್ತವೆ. ಇದಕ್ಕಾಗಿ ನೀವು ಸಾಕಷ್ಟು ಹೂಡಿಕೆ ಮಾಡಬೇಕು. ಈ ಪೈಕಿ ಮುಖ್ಯವಾಗಿ ನೀವು ವ್ಯಾಪಾರ ಮಾಡಲು ಅಂಗಡಿಗೆ ಉತ್ತಮ ಸ್ಥಳವನ್ನು ಹೊಂದಿರಬೇಕು. ದಿನನಿತ್ಯದ ವಸ್ತುಗಳನ್ನು ನೀವು ಕಿರಾಣಿ ಅಂಗಡಿಯಲ್ಲಿ ಇಟ್ಟಷ್ಟು ಹೆಚ್ಚು ಮಾರಾಟವಾಗುತ್ತವೆ. ಉತ್ತಮ ಸ್ಥಳದಲ್ಲಿ ನೀವು ಕಿರಾಣಿ ಅಂಗಡಿಯನ್ನು ತೆರೆಯಬೇಕು. ಸಾಕಷ್ಟು ಜನಸಂದಣಿ ಇರುವ ಅಥವಾ ಹತ್ತಿರದಲ್ಲಿ ಯಾವುದೇ ಕಿರಾಣಿ ಅಂಗಡಿ ಇರದಂತಹ ಸ್ಥಳವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಇಂತಹ ಸ್ಥಳವನ್ನು ಆಯ್ಕೆ ಮಾಡಿಕೊಂಡು ವ್ಯವಹಾರ ಶುರು ಮಾಡಿದ್ರೆ ಬೇಡಿಕೆ ಹೆಚ್ಚಿರುತ್ತದೆ, ಇದರಿಂದ ನಿಮ್ಮ ವ್ಯಾಪಾರ ಹೆಚ್ಚಾಗಿ ಉತ್ತಮ ಲಾಭವೂ ದೊರೆಯುತ್ತದೆ.
ಇದನ್ನೂ ಓದಿ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಕೆಲವೇ ದಿನಗಳಲ್ಲಿ 3,000 ರೂ.ಗಳಷ್ಟು ಅಗ್ಗವಾಗುವುದು ಚಿನ್ನ
ಕಿರಾಣಿ ಅಂಗಡಿಗೆ ದಿನಸಿ ವಸ್ತು ಎಲ್ಲಿ ಖರೀದಿಸಬೇಕು?
ಕಿರಾಣಿ ಅಂಗಡಿಗೆ ಅಂತಹ ಎಲ್ಲಾ ರೀತಿಯ ವಸ್ತುಗಳು ಬೇಕಾಗುತ್ತವೆ. ನೀವು ಸಗಟು ಮಾರಾಟದಿಂದ ಎಲ್ಲಾ ಸರಕುಗಳನ್ನು ಖರೀದಿಸಬಹುದು ಅಥವಾ ಈ ಸರಕುಗಳನ್ನು ಪೂರೈಸುವ ಪೂರೈಕೆದಾರರಿಂದಲೂ ಖರೀದಿಸಬಹುದು. ಇದರ ವೆಚ್ಚವು ನಿಮ್ಮ ಅಂಗಡಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಅಂಗಡಿ ಮತ್ತು ಅದರ ಪೀಠೋಪಕರಣಕ್ಕೆ ನಿಮಗೆ 1 ರಿಂದ 2 ಲಕ್ಷ ರೂ. ಬೇಕಾಗುತ್ತದೆ. ಇದಕ್ಕಿಂತಲೂ ಹೆಚ್ಚು ವೆಚ್ಚವಾಗಲೂಬಹುದು. ದಿನಸಿ ಅಂಗಡಿಯಲ್ಲಿ ಸಾಕಷ್ಟು ಲಾಭ ಸಿಗುತ್ತದೆ, ಕೆಲ ಕಾಲ ಲಾಭ ಕಡಿಮೆಯಾದರೂ ನಂತರ ಬೇಡಿಕೆಗೆ ತಕ್ಕಂತೆ ಹೆಚ್ಚುತ್ತದೆ. ಪ್ರಸ್ತುತ ಅನೇಕ ಕಿರಾಣಿ ಅಂಗಡಿ ಮಾಲೀಕರು ಬಂಪರ್ ಲಾಭ ಗಳಿಸುತ್ತಿದ್ದಾರೆ. ನೀವು ಸರಿಯಾದ ಯೋಜನೆ ರೂಪಿಸಿ ಕಿರಾಣಿ ಅಂಗಡಿ ಬ್ಯುಸಿನೆಸ್ ಪ್ರಾರಂಭಿಸಿದ್ರೆ ಉತ್ತಮ ಲಾಭ ಗಳಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.