ನವದೆಹಲಿ: ಮಾರ್ಚ್ ತಿಂಗಳ ಮೊದಲ ದಿನವೇ ವಾಣಿಜ್ಯ ಮತ್ತು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಏರಿಕೆ ಮಾಡಿದ್ದು, ಜನಸಾಮಾನ್ಯರಿಗೆ ಶಾಕ್ ನೀಡಲಾಗಿದೆ. ಆದರೆ ತೈಲ ಕಂಪನಿಗಳು ಟ್ರೋಲ್ & ಡೀಸೆಲ್ ದರದ ಮೇಲೆ ಜನರಿಗೆ ರಿಲೀಫ್ ನೀಡಿವೆ. ಕಳೆದ 9 ತಿಂಗಳಿಂದ ತೈಲ ಕಂಪನಿಗಳಿಂದ ಯಾವುದೇ ರೀತಿಯ ಬೆಲೆ ಹೆಚ್ಚಳ ಮಾಡಿಲ್ಲ. ಕಚ್ಚಾ ತೈಲದ ಬೆಲೆ ಸಹ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗಿಂತ ಕೆಳಗಿಳಿಯುತ್ತಿದೆ.
ಕಚ್ಚಾ ತೈಲ $80ರ ಸಮೀಪಕ್ಕೆ!
ಈ ಹಿಂದೆ ಪ್ರತಿ ಬ್ಯಾರೆಲ್‌ಗೆ $100ರ ಮಟ್ಟ ತಲುಪಿದ ಕಚ್ಚಾ ತೈಲವು ಇದೀಗ $80ರ ಸಮೀಪಕ್ಕೆ ಬಂದಿದೆ. ಬ್ರೆಂಟ್ ಕಚ್ಚಾ ತೈಲವು ಬುಧವಾರ ಬೆಳಗ್ಗೆ ತೀವ್ರವಾಗಿ ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ $83.89 ತಲುಪಿದೆ. ಆದರೆ ಡಬ್ಲ್ಯುಟಿಐ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ $77.30 ಇತ್ತು. ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಹಳೆಯ ದರದಂತೆಯೇ ವಹಿವಾಟು ನಡೆಸುತ್ತಿವೆ. ಬುಧವಾರ ಅಂದರೆ ಮಾರ್ಚ್ 1ರಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.72 ರೂ. ಮತ್ತು ಡೀಸೆಲ್ ದರ 89.62 ರೂ.ನಂತೆ ಮಾರಾಟವಾಗುತ್ತಿತ್ತು.
ಇದನ್ನೂ ಓದಿ: Tax Saving: ಸಾವಿರಾರು ರೂಪಾಯಿ Income Tax ಉಳಿಸಲು ಇಲ್ಲಿವೆ ಸಿಂಪಲ್ ಟಿಪ್ಸ್
ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಮೇಲೆ 50 ರೂ. ಹೆಚ್ಚಿಸಲಾಗಿದೆ. ಇದುವರೆಗೆ 1053 ರೂ.ಗೆ ಲಭ್ಯವಿದ್ದ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ 1103 ರೂ.ಗೆ ಆಗಿದೆ. ದೇಶೀಯ ತೈಲ ಕಂಪನಿಗಳು ಎಟಿಎಫ್ ಬೆಲೆಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ರಿಲೀಫ್ ನೀಡಿವೆ. ಎಟಿಎಫ್ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 4,606 ರೂ.ನಷ್ಟು ಇಳಿಕೆಯಾಗಿದೆ. ಇದಾದ ನಂತರ ವಿಮಾನ ಪ್ರಯಾಣ ದರಗಳ ಸಹ ಇಳಿಕೆಯಾಗುವ ನಿರೀಕ್ಷೆ ಇದೆ. ಫೆಬ್ರವರಿ 1ರಂದು ದೆಹಲಿಯಲ್ಲಿ ಪ್ರತಿ ಬ್ಯಾರೆಲ್ ಬೆಲೆ 1,12,356.77, ಕೋಲ್ಕತ್ತಾದಲ್ಲಿ 1,19,239.96, ಮುಂಬೈನಲ್ಲಿ 1,11,246.61 ಮತ್ತು ಚೆನ್ನೈನಲ್ಲಿ 1,16,922.56 ರೂ. ಇತ್ತು. ಇದರಲ್ಲಿ ಈಗ 4,606ರೂ ಇಳಿಕೆ ಮಾಡಲಾಗಿದೆ.
ದೇಶದ ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರ ಹೀಗಿದೆ ನೋಡಿ
ದೆಹಲಿ ಪ್ರತಿ ಲೀಟರ್ ಪೆಟ್ರೋಲ್ 96.72 ರೂ. & ಡೀಸೆಲ್ 89.62 ರೂ.
ಮುಂಬೈ ಪ್ರತಿ ಲೀಟರ್ ಪೆಟ್ರೋಲ್ 106.31 ರೂ. & ಡೀಸೆಲ್ 94.27 ರೂ.
ಕೊಲ್ಕತ್ತಾ ಪ್ರತಿ ಲೀಟರ್ ಪೆಟ್ರೋಲ್ 106.03 ರೂ. & 92.76 ರೂ.
ಬೆಂಗಳೂರು ಪ್ರತಿ ಲೀಟರ್ ಪೆಟ್ರೋಲ್ 101.94 ರೂ. & ಡೀಸೆಲ್ 87.89 ರೂ.
ಚೆನ್ನೈ ಪ್ರತಿ ಲೀಟರ್ ಪೆಟ್ರೋಲ್ 102.73 ರೂ. & ಡೀಸೆಲ್ 94.33 ರೂ.ನಂತೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಕೇವಲ 7 ದಿನಗಳಲ್ಲಿ DL ಪಡೆಯಲು ಇಲ್ಲಿದೆ ಸುಲಭ ಆನ್‌ಲೈನ್ ಪ್ರಕ್ರಿಯೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.