Trending News: ಯೋಗವನ್ನು ಮಾಡುವ ಮುಂಚೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅನೇಕ ಜನರು ಪ್ರಕೃತಿ ಮಡಿಲಲ್ಲಿ ಯೋಗ ಮಾಡುತ್ತಾರೆ. ಆದರೆ ಆ ಸಂದರ್ಭದಲ್ಲಿ ಅದರದ್ದೇ ನಿಯಮಗಳನ್ನು ಅನುಸರಿಸುತ್ತಾರೆ. ಇವೆಲ್ಲದರ ಹೊರತಾಗಿ ಶೋಕಿ ಮಾಡಲು ಹೊರಟರೆ ಆಗುವುದು ಫಜೀತಿ. ಇದಕ್ಕೆ ಉದಾಹರಣೆ ಎಂಬಂತೆ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ: Jasmin Oil: ಈ ಹೂವಿನ 1 ಲೀಟರ್ ತೈಲದ ಬೆಲೆ ಬರೋಬ್ಬರಿ 4 ಲಕ್ಷ ರೂ.: ಆರೋಗ್ಯ-ವಾಸ್ತುದೋಷಕ್ಕೆ ಹೇಳಿಮಾಡಿಸಿದ ಪರಿಹಾರ!
ಯೋಗವನ್ನು ಮಾಡುವ ರೀತಿಯಲ್ಲಿ, ಮಾಡಬೇಕಾದ ಜಾಗದಲ್ಲಿ ಮಾಡಬೇಕು. ಆದರೆ ಇಲ್ಲೊಬ್ಬ ಯುವತಿ, ಫಾಲ್ಸ್ ಪಕ್ಕದಲ್ಲಿರುವ ಒಂದು ಹಳ್ಳದಲ್ಲಿ ಅಡ್ಡಲಾಗಿ ಬಿದ್ದಿದ್ದ ಮರದ ತುಂಡಿನ ಮೇಲೆ ನಿಂತು ಯೋಗ ಮಾಡಿದ್ದಾಳೆ. ಆದರೆ ಗ್ರಹಚಾರ ಕೆಟ್ಟಿತ್ತು ಅನಿಸುತ್ತೆ, ಆಯತಪ್ಪಿ ನದಿ ಬಿದ್ದಿದ್ದಾಳೆ.
ನದಿಯ ಮೇಲಿರುವ ಮರದ ದಿಮ್ಮಿಗಳ ಮೇಲೆ ಯುವತಿಯೊಬ್ಬಳು ಯೋಗ ಭಂಗಿಯನ್ನು ಪ್ರಯತ್ನಿಸುತ್ತಿರುವ ವೈರಲ್ ವೀಡಿಯೊದವನ್ನು ನೋಡಬಹುದು. ವಿಡಿಯೊದಲ್ಲಿ, ಚಿಸಾ ಮೇರಿ ಎಂಬವರು ತನ್ನ ಸಮತೋಲನವನ್ನು ಕಳೆದುಕೊಂಡು ನೀರಿಗೆ ಬೀಳುತ್ತಿರುವುದು ಕಾಣಬಹುದು.
ವರದಿಗಳ ಪ್ರಕಾರ, ವೀಡಿಯೊವನ್ನು 2017 ರಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಇತ್ತೀಚೆಗೆ ಮತ್ತೆ ಇಂಟರ್ನೆಟ್‌ನಲ್ಲಿ ವೈರಲ್ ಆಗಲು ಪ್ರಾರಂಭಿಸಿದೆ.
Go with the flow 😂 pic.twitter.com/BGZ120HZYL
— Wtf Scene (@wtf_scene) February 24, 2023
ಮೇರಿ ಸುಮಾರು ನಾಲ್ಕೈದು ಅಡಿಗಳಷ್ಟು ನೀರಿನಲ್ಲಿ ಬಿದ್ದಿದ್ದರೂ, ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ಮಾತನಾಡಿದ ಚಿಸಾ ಮೇರಿ, “ಒಂದು ವೇಳೆ ನಾನು ಬೀಳದಿದ್ದರೆ ಈ ವಿಡಿಯೋ ವೈರಲ್ ಆಗುತ್ತಿರಲಿಲ್ಲ. ಪ್ರವಾಹದಿಂದ ತಾನು ಸುಮಾರು 30 ಅಡಿಗಳಷ್ಟು ಕೆಳಗೆ ಮುಳುಗಿದೆ” ಎಂದು ಅವರು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ವೀಡಿಯೊ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಅನೇಕ ವೀಕ್ಷಕರು ಘಟನೆಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಆ ವ್ಯಕ್ತಿಯನ್ನು ಹೊಡೆಯಲು ಹೋಗಿದ್ರು ʼರಾಜಮೌಳಿʼ..! ಅಷ್ಟಕ್ಕೂ ಯಾರದು ಗೊತ್ತಾ..?
ಫೋಟೋಗಳಿಗಾಗಿ ಇಂತಹ ಸ್ಟಂಟ್‌ಗಳನ್ನು ಪ್ರಯತ್ನಿಸುವಾಗ ಅಥವಾ ವೀಡಿಯೊಗಳನ್ನು ವೈರಲ್ ಮಾಡಲು ಪ್ರಯತ್ನಿಸುವಾಗ ಜಾಗರೂಕರಾಗಿರುವುದರ ಪ್ರಾಮುಖ್ಯತೆಯನ್ನು ವೀಡಿಯೊ ನೆನಪಿಸುತ್ತದೆ .ಮತ್ತು ಎಲ್ಲಿಯಾದರೂ ಅನಿರೀಕ್ಷಿತ ಅಪಾಯಗಳು ಉಂಟಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ