ಹಾವೇರಿ: ಕಿರಾಣಿ ಅಂಗಡಿ ನೀಡುವ ಸೇವೆ ಮಾಲ್’ಗಳು ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕಿರಾಣಿ ವ್ಯಾಪಾರಸ್ಥರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಯುಗಾದಿ ಶಾಪಿಂಗ್ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಬೆಂಗಳೂರು ಉತ್ಸವ
ಇತ್ತೀಚಿನ ದಿನಗಳಲ್ಲಿ ಮಾಲ್’ಗಳು ಶಾಪಿಂಗ್ ಕಾಂಪ್ಲೆಕ್ಸ್’ಗಳು ಬಂದಿವೆ. ಸ್ವಲ್ಪ ದಿನ ವ್ಯಾಪಾರ ಚೆನ್ನಾಗಿ ಆದರೂ ಸ್ವಲ್ಪ ದಿನಗಳಲ್ಲಿ ಕಡಿಮೆಯಾಗುತ್ತದೆ. ಏನೇ ಬಂದರೂ ಕಿರಾಣಿ ಅಂಗಡಿ ವ್ಯಾಪಾರ ಕಡಿಮೆಯಾಗುವುದಿಲ್ಲ. ಕಾಳು ಕಡ್ಡಿ ಕೊಳ್ಳುವವರು ಹೆಚ್ಚಿದ್ದಾರೆ. ದರ ಮತ್ತು ತೂಕ ಸರಿಯಾಗಿ ನೀಡಿದರೆ ಗ್ರಾಹಕರು ಸಂತೋಷದಿಂದಿರುತ್ತಾರೆ ಎಂದರು.
ಶಿಗ್ಗಾಂವ್ ಸುತ್ತಮುತ್ತಲಲ್ಲಿ ಕಿರಾಣಿ ಅಂಗಡಿಗಳು ಸೇವೆ ಮಾಡಿಕೊಂಡು ಬಂದಿವೆ. ಹಳ್ಳಿಯ ಜನ ಮಾರುಕಟ್ಟೆಗೆ ಬಂದಾಗ ಅವರಲ್ಲಿ ಇಂಥ ಕಡೆ ತೂಕ, ಗುಣಮಟ್ಟ ಸರಿ ಇರುತ್ತದೆ ಎಂದು ವಿಶ್ವಾಸ ಗಳಿಸಿಕೊಂಡಿದ್ದೀರಿ. ಬಹಳಷ್ಟು ಅಂಗಡಿಗಳಿಗೆ ಖಾಯಂ ಗಿರಾಕಿಗಳಿದ್ದಾರೆ. ಇದಲ್ಲದೇ ಹಳ್ಳಿ ಜನ ಕುಳಿತು ಮಾತನಾಡುವ ಕೇಂದ್ರ ಸ್ಥಳವೂ ಹೌದು ಹಾಗೂ ಕೆಲವೊಮ್ಮೆ ಕಿರಾಣಿ ಅಂಗಡಿಗಳಲ್ಲಿ ರಾಜಕೀಯವೂ ಹುಟ್ಟುತ್ತದೆ ಎಂದು ನಗೆ ಚಟಾಕಿ ಹಾರಿಸಿದರು.
ಇದನ್ನೂ ಓದಿ: ಕಾರ್ಮಿಕರ ಮುಷ್ಕರ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗಳು ಸ್ಥಗಿತ
ಹಿರಿಯರು ಬಹಳ ಉತ್ತಮ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಯುವಕರು ಸೇರಿ ಹೊಸ ಸಂಘವನ್ನು ಕಟ್ಟಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಅವರಿಗೆ ಒಳ್ಳೆಯ ಪದಾರ್ಥ ದೊರೆಯಬೇಕು ಹಾಗೂ ನಿಮಗೆ ಲಾಭವಾಗಬೇಕು. ಲಾಭ ದೊಡ್ಡ ಪ್ರಮಾಣದಲ್ಲಿ ಮಾಡಲು ಹೋದರೆ ವ್ಯಾಪಾರ ಕಡಿಮೆಯಾಗುತ್ತದೆ. ಅಗತ್ಯವಿದ್ದಷ್ಟು ಮಾತ್ರ ಲಾಭ ಇಟ್ಟುಕೊಂಡರೆ ನಿಯಮಿತವಾಗಿ ವ್ಯಾಪಾರವಾಗುತ್ತದೆ. ಆ ನಿಟ್ಟಿನಲ್ಲಿ ಶಿಗ್ಗಾಂವಿಯ ಹಿರಿಯ ವರ್ತಕರು ಬಹಳ ಉತ್ತಮ ಹೆಸರು ಮಾಡಿದ್ದು, ಅದೇ ರೀತಿ ನೀವೂ ಕೂಡ ಇರಬೇಕು ಎಂದು ಸಲಹೆ ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.