Trending News: ಕಾರು-ಕಂಬ ಕಂಡರೆ ನಾಯಿಗಳು ಓಡಿಬಂದು ಮೂತ್ರ ವಿಸರ್ಜನೆ ಮಾಡೋದೇಕೆ? ಇದರ ಹಿಂದಿನ ರಹಸ್ಯ ತಿಳಿದರೆ ಶಾಕ್ ಆಗ್ತೀರ!

Why Dog Pee on car Tire: ಇದೀಗ ಅಂತಹದ್ದೇ ಒಂದು ವಿಷಯವೆಂದರೆ ನಾಯಿಗಳು ಟೈರ್ ಅಥವಾ ಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದು. ನಾಯಿಗಳು ರಸ್ತೆ ಬದಿಯಲ್ಲಿ ನಿಂತಿರುವ ವಾಹನಗಳ ಟೈರ್ ಅಥವಾ ಬೀದಿಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದನ್ನು ನೀವು ಅನೇಕ ಬಾರಿ ನೋಡಿರಬೇಕು.

Written by - Bhavishya Shetty | Last Updated : Mar 10, 2023, 02:54 PM IST
    • ನಾಯಿಗಳು ಟೈರ್ ಅಥವಾ ಬೀದಿಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದನ್ನು ನೀವು ಅನೇಕ ಬಾರಿ ನೋಡಿರಬೇಕು
    • ನಾಯಿಗಳು ಮೂತ್ರ ವಿಸರ್ಜಿಸಲು ಈ ಎರಡು ವಿಷಯಗಳನ್ನು ಮಾತ್ರ ಏಕೆ ಬಳಸುತ್ತವೆ?
    • ಕಣ್ಣುಗಳು ಆ ವಿಷಯಕ್ಕೆ ಒಗ್ಗಿಕೊಂಡರೂ ಸಹ ಅವುಗಳ ಕಾರಣವನ್ನು ತಿಳಿಯಲು ನಾವು ಪ್ರಯತ್ನಿಸುವುದಿಲ್ಲ.
Trending News: ಕಾರು-ಕಂಬ ಕಂಡರೆ ನಾಯಿಗಳು ಓಡಿಬಂದು ಮೂತ್ರ ವಿಸರ್ಜನೆ ಮಾಡೋದೇಕೆ? ಇದರ ಹಿಂದಿನ ರಹಸ್ಯ ತಿಳಿದರೆ ಶಾಕ್ ಆಗ್ತೀರ! title=
dog pee on car Tire

Why Dog Pee on car Tire: ಸಾಮಾನ್ಯ ಜೀವನದಲ್ಲಿ ಕೆಲವೊಂದು ವಿಷಯಗಳು ನಡೆಯುತ್ತಲೇ ಇರುತ್ತವೆ ಎಂದು ಸುಮ್ಮನಾಗುತ್ತೇವೆ. ಆದರೆ ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ. ಈ ಸಣ್ಣ ವಿಷಯಗಳು ಮನೆಯಲ್ಲಿ ಅಥವಾ ಹೊರಗೆ ಪ್ರತಿದಿನವೂ ಕಂಡುಬರುತ್ತವೆ. ಕಣ್ಣುಗಳು ಆ ವಿಷಯಕ್ಕೆ ಒಗ್ಗಿಕೊಂಡರೂ ಸಹ ಅವುಗಳ ಕಾರಣವನ್ನು ತಿಳಿಯಲು ನಾವು ಪ್ರಯತ್ನಿಸುವುದಿಲ್ಲ.

ಇದನ್ನೂ ಓದಿ: ಕರ್ನಾಟಕದಲ್ಲಿ ಇನ್ಫ್ಲುಯೆಂಜಾ ವೈರಸ್ ದಾಳಿಗೆ ಮೊದಲ ಸಾವು ದೃಢ, ಭಯ ಹುಟ್ಟಿಸುತ್ತಿದೆ ಹೊಸ ವೈರಸ್!

ಇದೀಗ ಅಂತಹದ್ದೇ ಒಂದು ವಿಷಯವೆಂದರೆ ನಾಯಿಗಳು ಟೈರ್ ಅಥವಾ ಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದು. ನಾಯಿಗಳು ರಸ್ತೆ ಬದಿಯಲ್ಲಿ ನಿಂತಿರುವ ವಾಹನಗಳ ಟೈರ್ ಅಥವಾ ಬೀದಿಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದನ್ನು ನೀವು ಅನೇಕ ಬಾರಿ ನೋಡಿರಬೇಕು. ಆದರೆ ನಾಯಿಗಳು ಮೂತ್ರ ವಿಸರ್ಜಿಸಲು ಈ ಎರಡು ವಿಷಯಗಳನ್ನು ಮಾತ್ರ ಏಕೆ ಬಳಸುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ನಾಯಿಗಳ ಈ ವರ್ತನೆಯ ಬಗ್ಗೆ ಶ್ವಾನ ತಜ್ಞರು ಬಹಳ ಕೂಲಂಕಷವಾಗಿ ಅಧ್ಯಯನ ನಡೆಸಿದ್ದಾರೆ. ಇದಾದ ಬಳಿಕ ಅವರು ಇದಕ್ಕೆ ಮೂರು ಕಾರಣಗಳನ್ನು ನೀಡಿದ್ದಾರೆ.

ನಾಯಿಗಳು ಕಂಬ ಅಥವಾ ಟೈರ್ ಮೇಲೆ ಮೂತ್ರ ವಿಸರ್ಜಿಸುವ ಮೂಲಕ ತಮ್ಮ ಪ್ರದೇಶವನ್ನು ಗುರುತಿಸುತ್ತವೆ. ಅಂದರೆ ಮನುಷ್ಯರಂತೆ ಈ ಪ್ರಾಣಿಗಳು ಸಹ ತನ್ನ ಸ್ಥಳವನ್ನು ನಿಗದಿ ಮಾಡುತ್ತವೆ. ಈ ಮೂಲಕ ಬೇರೆ ನಾಯಿಗಳು ಆ ಪ್ರದೇಶಕ್ಕೆ ಬಂದರೆ, ವಾಸನೆಯ ಮೂಲಕ ತಿಳಿದುಕೊಳ್ಳುತ್ತದೆ. ರಬ್ಬರ್ ಟೈರ್‌ನಲ್ಲಿ ನಾಯಿಯ ಮೂತ್ರದ ವಾಸನೆಯು ಹೆಚ್ಚು ಕಾಲ ಉಳಿಯುತ್ತದೆ. ಮತ್ತೊಂದೆಡೆ, ನಾಯಿಗಳು ನೆಲದ ಮೇಲೆ ಮೂತ್ರ ವಿಸರ್ಜಿಸಿದರೆ, ಅದು ಕೆಲ ಸಮಯದಲ್ಲಿಯೇ ವಾಸನೆ ಕಳೆದುಕೊಳ್ಳುತ್ತದೆ.

ಇವಷ್ಟೇ ಅಲ್ಲ, ನಾಯಿಗಳು ಅಡ್ಡಕ್ಕಿಂತ ಹೆಚ್ಚು ಲಂಬವಾಗಿರುವ ವಸ್ತುಗಳ ಮೇಲೆ ಮೂತ್ರ ವಿಸರ್ಜಿಸಲು ಇಷ್ಟಪಡುತ್ತವೆ. ಟೈರ್ ಮತ್ತು ಕಂಬಗಳನ್ನು ಹುಡುಕಿಕೊಂಡು ಹೋಗಿ ಮೂತ್ರ ಮಾಡುವುದು ಇದೇ ಕಾರಣಕ್ಕೆ.

ಇದನ್ನೂ ಓದಿ: ಮಾರುಕಟ್ಟೆಗೆ ಕಾಲಿಡುತ್ತಿದೆ iPhone 14ನಂತೆ ಕಾಣುವ ಈ ಸೂಪರ್ ಫೋನ್

ನಾಯಿಗಳು ರಬ್ಬರ್ ಟೈರ್‌ಗಳ ಮೇಲೆ ಮೂತ್ರ ವಿಸರ್ಜಿಸಲು ಇನ್ನೊಂದು ಕಾರಣವಿದೆ. ಅವುಗಳಿಗೆ ರಬ್ಬರ್ ವಾಸನೆ ತುಂಬಾ ಇಷ್ಟ. ಹೀಗಾಗಿ ಟೈರ್ ವಾಸನೆಗೆ ಆಕರ್ಷಿತರಾಗಿ ಅದರ ಬಳಿ ಹೋಗಿ ಮೂತ್ರ ವಿಸರ್ಜನೆ ಮಾಡುತ್ತವೆ. ನಾಯಿಗಳು ಟೈರ್ ಮೇಲೆ ಮೂತ್ರ ವಿಸರ್ಜಿಸುವುದಕ್ಕೆ ಇದೂ ಒಂದು ಪ್ರಮುಖ ಕಾರಣವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News