ಕೆಎಸ್​ಆರ್​ಟಿಸಿ ಬಸ್​ನಲ್ಲಿ 15ಲಕ್ಷ ರೂ. ಬೆಳ್ಳಿ ಸಾಮಗ್ರಿ ಪತ್ತೆ!

ಹೊಸಕೋಟೆ ಟೋಲ್ ಬಳಿ ಶುಕ್ರವಾರ ರಾತ್ರಿ 8.20ರ ಸಮಯದಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆಯಲ್ಲಿ ಬೆಂಗಳೂರು-ವಿಜಯವಾಡ ಮಾರ್ಗದ ಕೆಎ 57 ಎಫ್​ 2844 ಬಸ್​ನಲ್ಲಿ ಬೆಳ್ಳಿ ಸಾಮಗ್ರಿ ಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ. 

Last Updated : Jan 12, 2019, 08:03 AM IST
ಕೆಎಸ್​ಆರ್​ಟಿಸಿ ಬಸ್​ನಲ್ಲಿ 15ಲಕ್ಷ ರೂ. ಬೆಳ್ಳಿ ಸಾಮಗ್ರಿ ಪತ್ತೆ! title=

ಬೆಂಗಳೂರು: ಕರ್ನಾಟಕ ರಸ್ತೆಸಾರಿಗೆ ಸಂಸ್ಥೆ ಬಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15 ಲಕ್ಷ ರೂ ಮೌಲ್ಯದ ಬೆಳ್ಳಿ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬಸ್ ಚಾಲಕ ಮತ್ತು ನಿರ್ವಾಹಕನನ್ನು ಅಮಾನತು ಮಾಡಲಾಗಿದೆ. 

ನಗರದ ಹೊಸಕೋಟೆ ಟೋಲ್ ಬಳಿ ಶುಕ್ರವಾರ ರಾತ್ರಿ 8.20ರ ಸಮಯದಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆಯಲ್ಲಿ ಬೆಂಗಳೂರು-ವಿಜಯವಾಡ ಮಾರ್ಗದ ಕೆಎ 57 ಎಫ್​ 2844 ಬಸ್​ನಲ್ಲಿ ಬೆಳ್ಳಿ ಸಾಮಗ್ರಿ ಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ. ಕೂಡಲೇ ಬೆಳ್ಳಿ ಸಾಮಗ್ರಿಗಳನ್ನು ವಶಕ್ಕೆ ಪಡೆದ ಬೆಂಗಳೂರು ಕೇಂದ್ರ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ್ ರೆಡ್ಡಿ ಅವರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 

ಬಸ್ ಚಾಲಕ ನಾರಾಯಣಪ್ಪ ಮತ್ತು ನಿರ್ವಾಹಕ ಕೃಷ್ಣಮೂರ್ತಿ ಅವರಿದ್ದ ಬಸ್ಸಿನಲ್ಲಿ ಪ್ರಯಾಣಿಕರ ಟಿಕೆಟ್ ಪರಿಶೀಲನೆ ಬಳಿಕ ಅಧಿಕಾರಿಗಳು ಬಸ್ಸಿನ ಡಿಕ್ಕಿ ಪರಿಶೀಲನೆ ಮಾಡಿದ್ದಾರೆ. ಆಗ, 4 ಬ್ಯಾಗುಗಳಿರುವುದು ಕಂಡುಬಂದಿದ್ದು, ಇದಕ್ಕೆ ನಿಗಮದಿಂದ ನೀಡಿರುವ ಟ್ಯಾಗುಗಳನ್ನು ಹಾಕದೆ ಇರುವುದರಿಂದ ಅನುಮಾನಗೊಂಡು ವಿಚಾರಣೆ ನಡೆಸಿದಾಗ, ಆ ಬ್ಯಾಗುಗಳಿಗೆ ವಾರಸುದಾರು ಯಾರೂ ಇಲ್ಲ ಎಂದು ಕಂಡಕ್ಟರ್ ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳು ಆ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಆ ಬ್ಯಾಗುಗಳಲ್ಲಿ 699 ದೀಪಗಳಿದ್ದು, ಇವುಗಳ ತೂಕ 40.950 ಕೆ.ಜಿ ಇದ್ದು, ಇದರ ಮೌಲ್ಯ 15 ಲಕ್ಷ ರೂ.ಗಳು ಎಂದು ಸಾರಿಗೆ ಸಂಸ್ಥೆ ತಿಳಿಸಿದೆ. ಸದ್ಯ ಜಪ್ತಿಯಾಗಿರುವ ಬೆಳ್ಳಿ ಸಾಮಗ್ರಿಗಳನ್ನ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

Trending News