Aloe Vera Hand Cream: ನಯವಾದ ಚರ್ಮಕ್ಕಾಗಿ ಕೇವಲ 20 ರೂ.ಯಲ್ಲಿ ಮನೆಯಲ್ಲಿಯೇ ತಯಾರಿಸಿ ಈ ಹ್ಯಾಂಡ್ ಕ್ರೀಮ್!

How To Make Aloe Vera Hand Cream: ಈ ಹ್ಯಾಂಡ್ ಕ್ರೀಮ್ ಬಳಕೆಯು ನಿಮ್ಮ ಚರ್ಮದ ಮೈಬಣ್ಣವನ್ನು ಸುಧಾರಿಸುತ್ತದೆ. ಇದು ನಿಮ್ಮ ಚರ್ಮಕ್ಕೆ ಆಂತರಿಕ ಪೋಷಣೆಯನ್ನು ಒದಗಿಸುತ್ತದೆ. ಜೊತೆಗೆ ಚರ್ಮವನ್ನು ಆಳವಾಗಿ ಪೋಷಿಸುತ್ತದೆ. ಇದರೊಂದಿಗೆ, ನಿಮ್ಮ ಚರ್ಮವು ನೈಸರ್ಗಿಕವಾಗಿ ಹೊಳೆಯುವ ಮತ್ತು ಯಂಗ್ ಆಗಲು ಪ್ರಾರಂಭಿಸುತ್ತದೆ.

Written by - Bhavishya Shetty | Last Updated : Mar 11, 2023, 06:22 PM IST
    • ಅಲೋವೆರಾ ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿದ್ದು, ಚರ್ಮದಿಂದ ಡೆಡ್ ಸ್ಕಿನ್’ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ
    • ಈ ಹ್ಯಾಂಡ್ ಕ್ರೀಮ್ ಬಳಕೆಯು ನಿಮ್ಮ ಚರ್ಮದ ಮೈಬಣ್ಣವನ್ನು ಸುಧಾರಿಸುತ್ತದೆ.
    • ಅಲೋವೆರಾ ಹ್ಯಾಂಡ್ ಕ್ರೀಮ್ ಅನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ.
Aloe Vera Hand Cream: ನಯವಾದ ಚರ್ಮಕ್ಕಾಗಿ ಕೇವಲ 20 ರೂ.ಯಲ್ಲಿ ಮನೆಯಲ್ಲಿಯೇ ತಯಾರಿಸಿ ಈ ಹ್ಯಾಂಡ್ ಕ್ರೀಮ್! title=
Hand Cream

How To Make Aloe Vera Hand Cream: ನಯವಾದ ಮತ್ತು ಹೊಳೆಯುವ ಕೈಗಳಿಗೆ ಎಕ್ಸ್‌ಫೋಲಿಯೇಶನ್ ಬಹಳ ಮುಖ್ಯ. ಹೀಗಾಗಿ ಅಲೋವೆರಾ ಹ್ಯಾಂಡ್ ಕ್ರೀಮ್ ಮಾಡುವ ವಿಧಾನವನ್ನು ನಾವು ನಿಮಗೆ ತಿಳಿಸಿ ಹೇಳಲಿದ್ದೇವೆ. ಅಲೋವೆರಾ ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿದ್ದು, ಅದು ನಿಮ್ಮ ಚರ್ಮದಿಂದ ಡೆಡ್ ಸ್ಕಿನ್’ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: High BP : ಅಧಿಕ ರಕ್ತದೊತ್ತಡವನ್ನು ತಕ್ಷಣವೇ ನಿಯಂತ್ರಿಸುತ್ತೆ ಈ ತರಕಾರಿ ಜ್ಯೂಸ್‌

ಹ್ಯಾಂಡ್ ಕ್ರೀಮ್ ಬಳಕೆಯು ನಿಮ್ಮ ಚರ್ಮದ ಮೈಬಣ್ಣವನ್ನು ಸುಧಾರಿಸುತ್ತದೆ. ಇದು ನಿಮ್ಮ ಚರ್ಮಕ್ಕೆ ಆಂತರಿಕ ಪೋಷಣೆಯನ್ನು ಒದಗಿಸುತ್ತದೆ. ಜೊತೆಗೆ ಚರ್ಮವನ್ನು ಆಳವಾಗಿ ಪೋಷಿಸುತ್ತದೆ. ಇದರೊಂದಿಗೆ, ನಿಮ್ಮ ಚರ್ಮವು ನೈಸರ್ಗಿಕವಾಗಿ ಹೊಳೆಯುವ ಮತ್ತು ಯಂಗ್ ಆಗಲು ಪ್ರಾರಂಭಿಸುತ್ತದೆ.

ಅಲೋವೆರಾ ಹ್ಯಾಂಡ್ ಕ್ರೀಮ್ ಅನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ.

ಅಲೋವೆರಾ ಕೈ ಕ್ರೀಮ್ ಮಾಡಲು ಬೇಕಾಗುವ ಸಾಮಾಗ್ರಿಗಳು-

  • ಅಲೋವೆರಾ ಜೆಲ್
  • ಗ್ಲಿಸರಿನ್
  • ಗುಲಾಬಿ ನೀರು

ಅಲೋವೆರಾ ಹ್ಯಾಂಡ್ ಕ್ರೀಮ್ ಮಾಡುವುದು ಹೇಗೆ?

  • ಅಲೋವೆರಾ ಹ್ಯಾಂಡ್ ಕ್ರೀಮ್ ತಯಾರಿಸಲು ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
  • ಅದಕ್ಕೆ ತಾಜಾ ಅಲೋವೆರಾ ಜೆಲ್ ನ್ನು ಹಾಕಿ
  • ಇದರ ನಂತರ ಅದಕ್ಕೆ ರೋಸ್ ವಾಟರ್ ಮತ್ತು ಗ್ಲಿಸರಿನ್ ಮಿಶ್ರಣ ಮಾಡಿ.
  • ಈ ಮಿಶ್ರಣವನ್ನು ಗ್ಯಾಸ್ ಮೇಲೆ ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ.
  • ಬೇಕು ಎಂದಾದಲ್ಲಿ ಈ ಮಿಶ್ರಣಕ್ಕೆ ಟೀ ಟ್ರೀ ಆಯಿಲ್ ಕೂಡ ಬರೆಸಬಹುದು
  • ನಂತರ ತಯಾರಿಸಿದ ಮಿಶ್ರಣವನ್ನು ಸಣ್ಣ ಪಾತ್ರೆಯಲ್ಲಿಟ್ಟು ಸಂಗ್ರಹಿಸಿ

ಇದನ್ನೂ ಓದಿ: Cancer ಕಾಯಿಲೆಯಿಂದ ಹಿಡಿದು ಮಧುಮೇಹದವರೆಗೆ ಹಲವು ಕಾಯಿಲೆ ನಿವಾರಣೆಗೆ ವರದಾನ 'ಸಿಹಿ ತುಳಸಿ'!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News