OSCA’RRR’… ದೇಶಕ್ಕೆ ಆಸ್ಕರ್ ಬಂದಿದೆ ನಿಜ… ಆದ್ರೆ ಕರ್ನಾಟಕಕ್ಕೆ ಡಬಲ್-ಸ್ಪೆಷಲ್ ಧಮಾಖ ಯಾಕೆ ಗೊತ್ತಾ?

RRR Lahari Music Right: ಆದರೆ ಇದೀಗ ಭಾರತಕ್ಕೆ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಒಂದಲ್ಲ,,, ಎರಡು ಪ್ರಶಸ್ತಿಗಳು ಭಾರತದ ಪಾಲಾಗಿದೆ. ಇನ್ನು ಎಸ್ ಎಸ್ ರಾಜಮೌಳಿಯವರ "RRR" ನ ನಾಟು ನಾಟು ಹಾಡು ಕೇಳಿದ್ರೆ ಸಾಕು ಕಾಲು ಖಂಡಿತವಾಗಿಯೂ ನೆಲದ ಮೇಲೆ ನಿಲ್ಲಲ್ಲ. ಇದಕ್ಕೆ ಸರಿಯಾಗಿ ‘ನಾಟು ನಾಟು’ ಆಸ್ಕರ್ ಅಂಗಳದಲ್ಲಿ ಮೋಡಿ ಮಾಡಿದ್ದು, ಪ್ರಶಸ್ತಿಯನ್ನೂ ಬಾಚಿದೆ.

Written by - Bhavishya Shetty | Last Updated : Mar 13, 2023, 03:14 PM IST
    • ಎರಡು ಆಸ್ಕರ್ ಪ್ರಶಸ್ತಿಗಳು ಇದೇ ಎರಡನೇ ಬಾರಿಗೆ ಭಾರತೀಯ ನಿರ್ಮಿತ ಚಿತ್ರಗಳಿಗೆ ಬಂದಿದೆ ಎನ್ನಬಹುದು.
    • ಎಸ್ ಎಸ್ ರಾಜಮೌಳಿಯವರ "RRR" ನ ನಾಟು ನಾಟು ಹಾಡಿನ ಹಕ್ಕುಗಳನ್ನು ಪಡೆದವರು ಲಹರಿ ಮ್ಯೂಸಿಕ್
    • ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿನ ಸಂಗೀತ ಹಕ್ಕುಗಳನ್ನು ಪಡೆದುಕೊಂಡಿದೆ.
OSCA’RRR’… ದೇಶಕ್ಕೆ ಆಸ್ಕರ್ ಬಂದಿದೆ ನಿಜ… ಆದ್ರೆ ಕರ್ನಾಟಕಕ್ಕೆ ಡಬಲ್-ಸ್ಪೆಷಲ್ ಧಮಾಖ ಯಾಕೆ ಗೊತ್ತಾ?  title=
Oscar

RRR Lahari Music Right: ಈ ದಿನವನ್ನು ಇಡೀ ದೇಶವೇ ಸುದಿನ ಎಂದು ಆಚರಣೆ ಮಾಡುತ್ತಿದೆ. ಸಿನಿಲೋಕದ ಪ್ರತಿಷ್ಠಿತ ಪ್ರಶಸ್ತಿ ಭಾರತದ ಮಡಿಲು ಸೇರಿದೆ. ಎರಡು ಆಸ್ಕರ್ ಪ್ರಶಸ್ತಿಗಳು ಇದೇ ಎರಡನೇ ಬಾರಿಗೆ ಭಾರತೀಯ ನಿರ್ಮಿತ ಚಿತ್ರಗಳಿಗೆ ಬಂದಿದೆ ಎನ್ನಬಹುದು. ಏಕೆಂದರೆ 1992 ರಲ್ಲಿ, ಪ್ರಸಿದ್ಧ ಬಂಗಾಳಿ ಚಲನಚಿತ್ರ ನಿರ್ಮಾಪಕ ಸತ್ಯಜಿತ್ ರೇ ಅವರಿಗೆ ಗೌರವ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ಈ ಗೌರವವನ್ನು ಪಡೆದ ಏಕೈಕ ಭಾರತೀಯರಾದರು. ಆ ಬಳಿಕ 2008 ರ ಬ್ರಿಟಿಷ್ ಚಲನಚಿತ್ರ ಸ್ಲಮ್‌’ಡಾಗ್ ಮಿಲಿಯನೇರ್‌’ಗಾಗಿ ರೆಸುಲ್ ಪೂಕುಟ್ಟಿ ಮತ್ತು ಎ.ಆರ್. ರೆಹಮಾನ್ ಕ್ರಮವಾಗಿ ಅತ್ಯುತ್ತಮ ಧ್ವನಿ ಮಿಶ್ರಣ ಮತ್ತು ಅತ್ಯುತ್ತಮ ಮೂಲ ಸ್ಕೋರ್‌’ಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದರು. ಆದರೆ ಇದು ಭಾರತೀಯ ಮೂಲದ್ದಾಗಿರಲಿಲ್ಲ.

ಇದನ್ನೂ ಓದಿ: Oscars 2023 : ಇದೇನಿದು ನಾಮಿನೇಟ್‌ ಆಗದೆಯೇ ಆಸ್ಕರ್‌ ಗೆದ್ರಾ ವಿವೇಕ್ ಅಗ್ನಿಹೋತ್ರಿ!

ಆದರೆ ಇದೀಗ ಭಾರತಕ್ಕೆ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಒಂದಲ್ಲ,,, ಎರಡು ಪ್ರಶಸ್ತಿಗಳು ಭಾರತದ ಪಾಲಾಗಿದೆ. ಇನ್ನು ಎಸ್ ಎಸ್ ರಾಜಮೌಳಿಯವರ "RRR" ನ ನಾಟು ನಾಟು ಹಾಡು ಕೇಳಿದ್ರೆ ಸಾಕು ಕಾಲು ಖಂಡಿತವಾಗಿಯೂ ನೆಲದ ಮೇಲೆ ನಿಲ್ಲಲ್ಲ. ಇದಕ್ಕೆ ಸರಿಯಾಗಿ ‘ನಾಟು ನಾಟು’ ಆಸ್ಕರ್ ಅಂಗಳದಲ್ಲಿ ಮೋಡಿ ಮಾಡಿದ್ದು, ಪ್ರಶಸ್ತಿಯನ್ನೂ ಬಾಚಿದೆ.

1920ರ ದಶಕದಲ್ಲಿದ್ದ ಇಬ್ಬರು ನೈಜ-ಜೀವನದ ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಸುತ್ತ ಹೆಣೆದ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯನ್ನು ಅನುಸರಿಸುತ್ತದೆ. ಈ ಚಿತ್ರದಲ್ಲಿ ರಾಮ್ ಚರಣ್, ಜೂನಿಯರ್ ಎನ್ ಟಿ ಆರ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕರ್ನಾಟಕಕ್ಕೆ ಹೆಮ್ಮೆ ಏಕೆ ಗೊತ್ತಾ?

ಎಸ್ ಎಸ್ ರಾಜಮೌಳಿಯವರ "RRR" ನ ನಾಟು ನಾಟು ಹಾಡಿನ ಹಕ್ಕುಗಳನ್ನು ಪಡೆದವರು ಲಹರಿ ಮ್ಯೂಸಿಕ್. ಇಬ್ಬರು ಸಹೋದರರಾದ ಜಿ ಮನೋಹರನ್ ನಾಯ್ಡು ಮತ್ತು ಜಿ ತುಳಸಿರಾಮ್ ಲಹರಿವೇಲು ಈ ಮ್ಯೂಸಿಕ್ ಲೇಬಲ್’ನ್ನು ಮುನ್ನಡೆಸುತ್ತಿದ್ದಾರೆ.  ಸಹೋದರರು ಬೆಂಗಳೂರಿನವರಾಗಿದ್ದು, ಇಂತಹ ಅತ್ಯುನ್ನತ ಪ್ರಶಸ್ತಿ ಪಡೆಯುವಲ್ಲಿ ಇವರ ಪಾತ್ರವೂ ಇದೆ ಎನ್ನಬಹುದು.

ಇದನ್ನೂ ಓದಿ: MM Keeravani: ಆಸ್ಕರ್​ ಗೆದ್ದ ಸಂಗೀತ ನಿರ್ದೇಶಕ ಕೀರವಾಣಿಗೂ ಇದೆ ಕರುನಾಡ ನಂಟು

ಲಹರಿ ಮ್ಯೂಸಿಕ್ ಮತ್ತು ಟಿ-ಸೀರೀಸ್ ಎಸ್‌ ಎಸ್ ರಾಜಮೌಳಿ ಅವರ 'ಆರ್‌ಆರ್‌ಆರ್' ನ ಸಂಗೀತ ಹಕ್ಕುಗಳನ್ನು ದಾಖಲೆಯ ಮೊತ್ತ ರೂ. 25 ಕೋಟಿಗೆ ಖರೀದಿಸಿದೆ ಎಂದು ಮೂಲಗಳು ತಿಳಿಸಿದ್ದವು. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಡಿಯೊ ಹಕ್ಕುಗಳ ಒಪ್ಪಂದವಾಗಿದೆ ಎಂದು ಹೇಳಲಾಗುತ್ತದೆ. ಲಹರಿ ಮತ್ತು ಟಿ-ಸೀರೀಸ್ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿನ ಸಂಗೀತ ಹಕ್ಕುಗಳನ್ನು ಪಡೆದುಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News