ಸೂರ್ಯನಾರಾಯಣರೆಡ್ಡಿ ಬೆಂಬಲಿಗರಿಂದ ಪ್ರಾಣ ಬೆದರಿಕೆ-ರಕ್ಷಣಾ ಮನವಿ-ಅರುಣಾ ರೆಡ್ಡಿ ಕುಟುಂಬ

ಬೆಂಗಳೂರು: ಮಾಜಿ ಶಾಸಕ ಎನ್‌ ಸೂರ್ಯನಾರಾಯಣ ರೆಡ್ಡಿ, ಎನ್‌. ಭರತ್‌ ರೆಡ್ಡಿ, ಎನ್‌ ಶರತ್‌ ರೆಡ್ಡಿ ಮತ್ತು ಅವರ ಕಟುಂಬದವರು ಫೋರ್ಜರಿ ಮತ್ತು ಮೋಸದ ಮೂಲಕ ನಮ್ಮ ಆಸ್ತಿಯನ್ನು ಕಳಬಳಿಸಿದ್ದಾರೆ. ಇದರ ಬಗ್ಗೆ ನಮ್ಮ ಕುಟುಂಬದವರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದೇವೆ.   

Written by - Zee Kannada News Desk | Last Updated : Mar 13, 2023, 06:32 PM IST
  • ನಮ್ಮ ಕುಟುಂಬಕ್ಕೆ ಇವರಿಂದ ಪ್ರಾಣ ಬೆದರಿಕೆಯಿದ್ದು ನಮಗೆ ಸೂಕ್ತ ರಕ್ಷಣೆ ನೀಡಬೇಕು
  • ಪಾಲುದಾರಿಕೆಯ ಈ ಹಗರಣ ಬಯಲಿಗೆ ಬರಲು ಕಾರಣವಾಯಿತು.
  • ನ್ಯಾಯ ಹೇಳಲು ಹೋದರೆ ನಮ್ಮ ಮೇಲೆ ಪ್ರಾಣದ ಬೆದರಿಕೆ ಹಾಕುತ್ತಿದ್ದಾರೆ
ಸೂರ್ಯನಾರಾಯಣರೆಡ್ಡಿ ಬೆಂಬಲಿಗರಿಂದ ಪ್ರಾಣ ಬೆದರಿಕೆ-ರಕ್ಷಣಾ ಮನವಿ-ಅರುಣಾ ರೆಡ್ಡಿ ಕುಟುಂಬ  title=

ನಮ್ಮ ಕುಟುಂಬಕ್ಕೆ ಇವರಿಂದ ಪ್ರಾಣ ಬೆದರಿಕೆಯಿದ್ದು ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ಮನವಿಯನ್ನು ಸಲ್ಲಿಸಿದ್ದೇವೆ ಎಂದು ದಿವಂಗತ ಎನ್‌ ದೇವ ರೆಡ್ಡಿ ಅವರ ಪುತ್ರಿಯರಾದ  ಎನ್‌ ಪೂರ್ಣಿಮಾ, ಅರುಣಾ ರೆಡ್ಡಿ, ಸಿ ಸುನೀಲ್‌ ಕುಮಾರ್‌, ಎನ್‌ ಕವಿತಾ ಮತ್ತು ಎನ್‌. ಶಾರದಾ ಅವರು ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆಗೊಳಿಸಿದರು. 

ತಮ್ಮ ಪರ ವಕೀಲರಾದ ಆರ್‌. ಪಾಂಡು, ಟಿ ಹನುಮರೆಡ್ಡಿ ಮತ್ತು ನೀರಜ್‌ ರಾಜೀವ್‌ ಶಿವಮ್‌ ಅವರೊಂದಿಗೆ ದಾಖಲೆಗಳನ್ನು ಬಿಡುಗಡೆಗೊಳಿಸಿದ ಅವರು, 2019ರಲ್ಲಿ ಸರ‍್ಯನಾರಾಯಣ ರೆಡ್ಡಿ ಕಚೇರಿಯ ಮೇಲೆ ಐಟಿ ದಾಳಿ ಮಾಡಿದಾಗ, ದಾಳಿಯ ಸಂಧರ್ಭದಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ಸರ‍್ಯನಾರಾಯಣರೆಡ್ಡಿ ಅವರು ಸಂಬಂಧಿ ಹಾಗು ಎನ್‌. ದೇವಿರೆಡ್ಡಿ ಅವರ ಕೊನೆಯ ಅಳಿಯ ಸಿ. ಸುನೀಲ್‌ಗೆ ನೋಟೀಸ್ ಜಾರಿ ಮಾಡಿದಾಗ, ಪಾಲುದಾರಿಕೆಯ ಈ ಹಗರಣ ಬಯಲಿಗೆ ಬರಲು ಕಾರಣವಾಯಿತು. ದಾಖಲೆಗಳ ಹುಡುಕಾಟದಿಂದ ಮೋಸದ ವಿಚಾರ ಸಂಪೂರ್ಣವಾಗಿ ಬೆಳಕಿಗೆ ಬಂತು.

ಇದನ್ನೂ ಓದಿ-Mandya: ನೆಚ್ಚಿನ ನಾಯಕನಿಗೆ ಹಾರ ಹಾಕುವ ಬರದಲ್ಲಿ ಅಭಿಮಾನಿಗಳಿಂದ ಎಡವಟ್ಟು! 

ಎನ್.ಅರುಣಾರೆಡ್ಡಿರವರು ಮಾತನಾಡಿ ನಾನು ಬಳ್ಳಾರಿ ನಿವಾಸಿಗಳಾಗಿದ್ದು ನನ್ನ ತಂದೆಯವರು ಶ್ರೀ ರಾಘವೇಂದ್ರ ಎಂಟರ್ ಪ್ರೈಸಸ್ ರಾಜಕಾರಣಿ ಮಾಜಿ ಶಾಸಕರಾದ ಸೂರ್ಯನಾರಾಯಣರೆಡ್ಡಿರವರ ಜೊತೆಯಲ್ಲಿ ಪಾಲುದಾರರಾಗಿ ಸಂಸ್ಥೆ ನಡೆಸುತ್ತಿದ್ದರು. ನಮ್ಮ ತಂದೆಯವರು ಅಕಾಲಿಕವಾಗಿ ಮರಣ ಹೊಂದಿದರು ಮತ್ತು ಪಾಲುದಾರರಾಗಿದ್ದ ನಮ್ಮ ತಂದೆಯರವರು ಎಷ್ಟು ಹಣ ಹೊದಿಕೆ ಮತ್ತು ಜಮೀನು ಹೊಂದಿದ್ದರು ಎಂದು ನಮಗೆ ತಿಳಿದಿರಲ್ಲಿ. 

ಆದರೆ ಅದಾಯ ತೆರಿಗೆ ಇಲಾಖೆ ವತಿಯಿಂದ ನಮ್ಮ ಆಸ್ತಿ ವಿವರದ ಬಗ್ಗೆ ತಿಳಿಯುತ್ತದೆ. ನಮ್ಮ ತಂದೆಯವರಿಗೆ ಸೇರಿದ್ದ ದಾಖಲೆಗಳನ್ನು ಪೋರ್ಜರಿ ಮಾಡಿದ್ದಾರೆ. ನ್ಯಾಯ ಹೇಳಲು ಹೋದರೆ ನಮ್ಮ ಮೇಲೆ ಪ್ರಾಣದ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು. 

ಪತ್ರಿಕಾಗೋಷ್ಠಿಯಲ್ಲಿ ದಿವಂಗತ ಎನ್‌ ದೇವ ರೆಡ್ಡಿ ಅವರ ಪುತ್ರಿಯರಾದ  ಎನ್‌ ಪೂರ್ಣಿಮಾ, ಅರುಣಾ ರೆಡ್ಡಿ, ಸಿ ಸುನೀಲ್‌ ಕುಮಾರ್‌, ಎನ್‌ ಕವಿತಾ ಮತ್ತು ಎನ್‌. ಶಾರದಾ, ವಕೀಲರಾದ ಆರ್‌. ಪಾಂಡು, ಟಿ ಹನುಮರೆಡ್ಡಿ ಮತ್ತು ನೀರಜ್‌ ರಾಜೀವ್‌ ಶಿವಮ್‌ ದಾಖಲೆಗಳನ್ನು ಬಿಡುಗಡೆಗೊಳಿಸಿದರು. 

​ಇದನ್ನೂ ಓದಿ-ಮೊಹಮ್ಮದ್ ಶಫಿ ಫೇಸ್​ಬುಕ್​ ಪೇಜ್‌ನಲ್ಲಿದ್ದ ಈ ವಿಡಿಯೋ ಫುಲ್‌ ವೈರಲ್‌ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News