ನವದೆಹಲಿ: ರಾತ್ರಿ ಮಲಗುವಾಗ ಕನಸು ಕಾಣುವುದು ಸಾಮಾನ್ಯ ಸಂಗತಿ. ಕನಸಿನ ಶಾಸ್ತ್ರದ ಪ್ರಕಾರ ನಿದ್ರಿಸುವ ವ್ಯಕ್ತಿ ತನ್ನ ದಿನಚರಿಯನ್ನು ಕನಸಿನಲ್ಲಿ ಕಾಣುತ್ತಿರುತ್ತಾನೆ. ನಾವು ಹಲವು ಬಾರಿ ವಾಸ್ತವಕ್ಕೆ ಸಂಬಂಧವೇ ಇಲ್ಲದ ವಿಚಿತ್ರವಾದ ಕನಸುಗಳನ್ನು ಕಾಣುತ್ತೇವೆ. ಅನೇಕ ಬಾರಿ ನಾವು ಕೆಲವು ಒಳ್ಳೆಯ ಕನಸುಗಳನ್ನು ಮತ್ತು ಕೆಲವು ಕೆಟ್ಟ ಕನಸುಗಳನ್ನು ಸಹ ನೋಡುತ್ತೇವೆ. ದಿನವಿಡೀ ನಾವು ಹೆಚ್ಚು ಯೋಚಿಸುವ ವಿಷಯವನ್ನು ಕನಸಿನ ರೂಪದಲ್ಲಿ ನೋಡುತ್ತೇವೆಂದು ಹೇಳಲಾಗುತ್ತದೆ.
ನಮ್ಮ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆಯೂ ಅನೇಕ ಕನಸುಗಳಿವೆ. ಈ ಕನಸುಗಳು ಮುಂದಿನ ದಿನಗಳಲ್ಲಿ ಒಳ್ಳೆಯ ಮತ್ತು ಕೆಟ್ಟದ್ದರ ಸೂಚನೆಯನ್ನೂ ನೀಡುತ್ತವೆಂದು ಹೇಳಲಾಗಿದೆ. ಇಂದು ನಾವು ನಿಮಗೆ ಶುಭ ಮತ್ತು ಅಶುಭ ಕನಸುಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ಅಶುಭ ಕನಸುಗಳು ಸೂಚನೆ
ಪೊರಕೆ: ಪೊರಕೆಯನ್ನು ತಾಯಿ ಲಕ್ಷ್ಮಿದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಕನಸಿನ ವಿಜ್ಞಾನದ ಪ್ರಕಾರ ಕನಸಿನಲ್ಲಿ ಪೊರಕೆಯನ್ನು ನೋಡುವುದು ಹಣದ ನಷ್ಟದ ಸಂಕೇತವಾಗಿದೆ.
ಕಪ್ಪು ಬೆಕ್ಕು: ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಕಪ್ಪು ಬೆಕ್ಕನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕನಸಿನಲ್ಲಿ ಕಪ್ಪು ಬೆಕ್ಕು ಕಂಡರೆ, ಅದು ನಿಮಗೆ ಅಶುಭಕರ ಕನಸು. ಕನಸಿನ ವಿಜ್ಞಾನದ ಪ್ರಕಾರ ಇದು ಮುಂಬರುವ ದಿನಗಳಲ್ಲಿ ನಿಮಗೆ ಕೆಲವು ರೀತಿಯ ಅಹಿತಕರ ಘಟನೆಗಳು ಸಂಭವಿಸಬಹುದು ಎನ್ನುವುದನ್ನು ಸೂಚಿಸುತ್ತದೆಂದು ಹೇಳಲಾಗಿದೆ.
ಇದನ್ನೂ ಓದಿ: Chanakya Niti : ಈ 5 ವಿಷಯಗಳನ್ನು ಯಾವಾಗಲು ನೆನಪಿನಲ್ಲಿಡಿ, ಯಶಸ್ಸು - ಪ್ರಗತಿ ನಿಮ್ಮದಾಗಿರುತ್ತೆ!
ಮರ ಕಡಿಯುವುದು: ಕನಸಿನಲ್ಲಿ ಮರಗಳನ್ನು ಕತ್ತರಿಸುವುದನ್ನು ನೀವು ನೋಡಿದರೆ, ನೀವು ಹಣವನ್ನು ಕಳೆದುಕೊಳ್ಳಲಿದ್ದೀರಿ ಅಥವಾ ಆರೋಗ್ಯದ ನಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಎತ್ತರದಿಂದ ಬೀಳುವುದು: ಕನಸಿನ ವಿಜ್ಞಾನದ ಪ್ರಕಾರ ಕನಸಿನಲ್ಲಿ ನೀವು ಎತ್ತರದ ಸ್ಥಳದಿಂದ ಬೀಳುವುದನ್ನು ಕಂಡರೆ, ಅದು ನಿಮಗೆ ಅಹಿತಕರ ಕನಸೆಂದು ಪರಿಗಣಿಸಲಾಗುತ್ತದೆ. ಈ ಕನಸು ಭವಿಷ್ಯದಲ್ಲಿ ನಿಮಗೆ ಕೆಲವು ದೊಡ್ಡ ಅಹಿತಕರ ಘಟನೆಗಳು ಸಂಭವಿಸಬಹುದು ಅಥವಾ ನೀವು ಕೆಲವು ರೀತಿಯ ದೊಡ್ಡ ಆರ್ಥಿಕ ನಷ್ಟ ಎದುರಿಸಬೇಕಾಗಬಹುದು ಎಂಬುದನ್ನು ಸೂಚಿಸುತ್ತದೆ.
ನೈಸರ್ಗಿಕ ಹಾನಿ: ಕನಸಿನಲ್ಲಿ ನೈಸರ್ಗಿಕ ಘಟನೆಗಳಿಂದ ಜೀವ ಮತ್ತು ಆಸ್ತಿ ನಷ್ಟವನ್ನು ನೋಡುವುದು ಅಶುಭವಾದ ಕನಸು ಎಂದು ಪರಿಗಣಿಸಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯು ಇಂತಹ ಕನಸನ್ನು ನೋಡಿದರೆ, ಆರ್ಥಿಕ ನಷ್ಟ, ಪ್ರತಿಷ್ಠೆ ಮತ್ತು ಸ್ಥಾನದ ನಷ್ಟದ ಸಾಧ್ಯತೆಯಿದೆ.
ಮುಚ್ಚಿದ ಕೋಣೆ ಮತ್ತು ಬೀಗ: ನಿಮ್ಮ ಕನಸಿನಲ್ಲಿ ಮುಚ್ಚಿದ ಬೀಗ ಅಥವಾ ಮುಚ್ಚಿದ ಕೋಣೆಯನ್ನು ನೋಡಿದರೆ, ಅದು ನಿಮಗೆ ಅಶುಭಕರ ಸಂಕೇತ. ಕನಸಿನ ವಿಜ್ಞಾನದ ಪ್ರಕಾರ ಇಂತಹ ಕನಸು ಮುಂಬರುವ ಸಮಯದಲ್ಲಿ ನಿಮ್ಮ ಮೇಲೆ ಕೆಲವು ರೀತಿಯ ಅಡಚಣೆ ಬರಲಿದೆ ಎಂದು ಸೂಚಿಸುತ್ತದೆ.
ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಹೆಚ್ಚಾಗುತ್ತಿರುವ ತೂಕಕ್ಕೆ ಕಡಿವಾಣ ಹಾಕಬೇಕೇ? ಈ ಉಪಾಯ ಟ್ರೈ ಮಾಡಿ ನೋಡಿ!
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.