ಮುಂಬೈ, ಮಾರ್ಚ್ 25, 2023: ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್18ನಲ್ಲಿ ಮೋಟೋ ಜಿಪಿಯನ್ನು ಎಕ್ಸ್ಕ್ಲೂಸಿವ್ ಆಗಿ ನೇರಪ್ರಸಾರ ಮಾಡುವ ಹಕ್ಕುಗಳ ಹೊಸ ಒಪ್ಪಂದವನ್ನು ಪಡೆದುಕೊಂಡಿರುವುದಾಗಿ ವಯಾಕಾಮ್18 ಇಂದು ಘೋಷಿಸುತ್ತಿದೆ. ಗ್ರ್ಯಾಂಡ್ ಪ್ರೀಮಿಯೊ ಡಿ ಪೋರ್ಚುಗಲ್ ಮೂಲಕ ಈ ಕವರೇಜ್ ಆರಂಭಗೊಂಡಿದೆ.
ಶುಕ್ರವಾರ ಮತ್ತು ಶನಿವಾರದ ಅಭ್ಯಾಸ ಅವಧಿಗಳು, ಶನಿವಾರದ ಅರ್ಹತಾ ಮತ್ತು ಸ್ಪ್ರಿಂಟ್ ರೇಸ್ಗಳು ಹಾಗೂ ಭಾನುವಾರದ ಪ್ರಧಾನ ರೇಸ್ ಸಹಿತ ಸಮಗ್ರ ನೇರಪ್ರಸಾರದ ಪ್ರಸ್ತುತಿಯನ್ನು ನೆಟ್ವರ್ಕ್ ಮೋಟೋ ಜಿಪಿ ಅಭಿಮಾನಿಗಳಿಗೆ ಒದಗಿಸಿಕೊಡಲಿದೆ.
ಮೋಟೋ ಜಿಪಿ ವಿಶ್ವ ಚಾಂಪಿಯನ್ಷಿಪ್ ಜಗತ್ತಿನಲ್ಲೇ ಅತ್ಯಂತ ಉನ್ನತ ಮಟ್ಟದ ಮೋಟಾರ್ಸೈಕಲ್ ರೇಸಿಂಗ್ ಆಗಿರುತ್ತದೆ. ಅದರಲ್ಲಿ ವಿಶ್ವದರ್ಜೆಯ, ಉನ್ನತ ನಿರ್ವಹಣೆಯ, ಪ್ರಪಂಚದ ಅತ್ಯುತ್ತಮ ತಯಾರಕರು ನಿರ್ಮಿಸಿದ ಅತಿವೇಗದ ಪ್ರೋಟೋಟೈಪ್ ಮೋಟಾರ್ಸೈಕಲ್ಗಳೊಂದಿಗೆ ಅತ್ಯಂತ ಕೌಶಲದ ರೈಡರ್ಗಳು ಸ್ಪರ್ಧಿಸಲಿದ್ದಾರೆ. 2023ರ ಮೋಟೋ ಜಿಪಿ ಋತು ಅತ್ಯಧಿಕ ಸಿರೀಸ್ಗಳ ದಿನಾಂಕವನ್ನು ಒಳಗೊಂಡಿರುತ್ತದೆ. 18 ದೇಶಗಳಲ್ಲಿ ಒಟ್ಟು 21 ರೇಸ್ಗಳು ನಡೆಯಲಿವೆ. ಇದರಲ್ಲಿ ಭಾರತದಲ್ಲಿ ನಡೆಯುವ 14ನೇ ಸುತ್ತಿನ ರೇಸ್ ಕೂಡ ಒಳಗೊಂಡಿರುತ್ತದೆ. ಈ ಮೂಲಕ ಮೋಟೋ ಜಿಪಿ ಭಾರತದಲ್ಲಿ ಪದಾರ್ಪಣೆಯನ್ನೂ ಮಾಡಲಿದೆ.
ಇದನ್ನೂ ಓದಿ: 40 ದಿನದ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದ ಬುರ್ಖಾ ಲೇಡಿ ಅಂದರ್..!
'ಮೋಟೋ ಜಿಪಿ ವಿಶ್ವದಲ್ಲೇ ಅತ್ಯಂತ ನಾಟಕೀಯ ಘಟನೆಗಳ ರೇಸಿಂಗ್ ಸ್ಪರ್ಧೆಯಾಗಿರುತ್ತದೆ. ಸೆಪ್ಟೆಂಬರ್ನಲ್ಲಿ ಇದರ ಸರಣಿಯು ಭಾರತದಲ್ಲೂ ಐತಿಹಾಸಿಕ ಪದಾರ್ಪಣೆ ಮಾಡುತ್ತಿರುವುದರಿಂದ ಭಾರತದ ಕ್ರೀಡಾಭಿಮಾನಿಗಳು ವಿಶೇಷ ಮನರಂಜನೆ ಪಡೆಯಲಿದ್ದಾರೆ. ವಿಶ್ವದ ಅತ್ಯುತ್ತಮ ಮೋಟಾರ್ಸೈಕಲ್ ರೇಸಿಂಗ್ ಶೋವನ್ನು ಭಾರತದಲ್ಲಿ ಕ್ರೀಡಾಭಿಮಾನಿಗಳಿಗೆ ಒದಗಿಸಿಕೊಡಲು ನಾವು ಕಾತರಗೊಂಡಿದ್ದೇವೆ. ಈ ವೈವಿಧ್ಯಮಯ ಕೊಡುಗೆಗಳಿಂದ ನಾವು ನಮ್ಮ ಅಭಿಮಾನಿ ಬಳಗವನ್ನು ವಿಸ್ತರಿಸಿಕೊಳ್ಳುತ್ತಿದ್ದೇವೆ' ಎಂದು ವಯಾಕಾಮ್18 ಸ್ಪೋರ್ಟ್ಸ್ನ ಸ್ಟ್ರಾಟಜಿ ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಹರ್ಷ್ ಶ್ರೀವಾಸ್ತವ ಹೇಳಿದ್ದಾರೆ.
'ನಾವು ಭಾರತದಲ್ಲಿ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ನಾವು ಈ ಬಾರಿ ಅವರಿಗೆ ಕ್ರೀಡೆಯನ್ನು ಅವರ ಬಳಿ ತರಲು ಉತ್ಸುಕರಾಗಿದ್ದೇವೆ. ಭಾರತವು ಮೋಟಾರ್ಸೈಕಲ್ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. ದ್ವಿಚಕ್ರ ಪ್ರಪಂಚದ ಪರಾಕಾಷ್ಠೆಯಾಗಿರುವ ಮೋಟೋ ಜಿಪಿಯನ್ನು ಭಾರತಕ್ಕೆ ವಿಸ್ತರಿಸುತ್ತಿದ್ದೇವೆ. ಭಾರತದಾದ್ಯಂತ ವ್ಯಾಪ್ತಿಯನ್ನು ಹೊಂದಿರುವ ವಯಾಕಾಮ್ ಮೂಲಕ ಮೋಟೋ ಜಿಪಿಯನ್ನು ದೇಶದ ಎಲ್ಲ ಮೂಲೆಗಳಿಗೆ ತಲುಪಿಸಲು ಮತ್ತು ಈ ಅದ್ಭುತವಾದ ಕ್ರೀಡೆಯನ್ನು ಹೆಚ್ಚಿನ ಅಭಿಮಾನಿಗಳು ವೀಕ್ಷಿಸುವಂತೆ ಮಾಡಲು ನಾವು ತುಂಬಾ ಉತ್ಸುಕರಾಗಿದ್ದೇವೆ' ಎಂದು ಡೋರ್ನಾ ಸಿಇಒ ಕ್ಯಾರ್ಮೆಲೊ ಎಜ್ಪೆಲೆಟಾ ಹೇಳಿದ್ದಾರೆ.
ಇದನ್ನೂ ಓದಿ: "ಯಾರ್ಯಾರೋ ನಾನೇ ಸಿಎಂ ನಾನೇ ಸಿಎಂ ಎಂಬ ಭ್ರಮೆಯಲ್ಲಿದ್ದಾರೆ"
'ಅತ್ಯಂತ ರೋಮಾಂಚನಕಾರಿ ಕ್ರೀಡೆಯಾದ ಮೋಟೋ ಜಿಪಿಯನ್ನು ಭಾರತದಲ್ಲಿ ಪ್ರಸಾರ ಮಾಡಲು ವಯಾಕಾಮ್18 ಅತ್ಯಂತ ಸಮರ್ಥ ಪಾಲುದಾರ ಎಂಬ ವಿಶ್ವಾಸ ನಮಗಿದೆ. ಟಿವಿ ಮತ್ತು ಒಟಿಟಿ ಫ್ಲ್ಯಾಟ್ಫಾರ್ಮ್ಗಳ ಮೂಲಕ ಅವರು ಅತ್ಯಂತ ವ್ಯಾಪಕವಾದ ವ್ಯಾಪ್ತಿಯನ್ನು ಹೊಂದಿದ್ದಾರೆ. ದೇಶದ ಹೆಚ್ಚಿನ ಜನರಿಗೆ ಮೋಟೋ ಜಿಪಿ ಕ್ರೀಡೆಯು ತಲುಪುವುದರಿಂದ ಅದು ನಮ್ಮ ರಾಷ್ಟ್ರದ ಹೊಸ ತಲೆಮಾರಿನ ಪ್ರತಿಭಾವಂತ ಸವಾರರಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ' ಎಂದು ಭಾರತದ ರೇಸ್ನ ಪ್ರವರ್ತಕರಾಗಿರುವ ಫೇರ್ಸ್ಟ್ರೀಟ್ ಸ್ಪೋರ್ಟ್ಸ್ ಸಿಒಒ ಪುಷ್ಕರ್ ನಾಥ್ ಶ್ರೀವಾಸ್ತವ ಅವರು ಸಹಯೋಗದ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಅವರು ಬ್ರಾಡ್ಕಾಸ್ಟಿಂಗ್ ಹಕ್ಕುಗಳ ಪರವಾನಗಿದಾರರೂ ಆಗಿದ್ದಾರೆ.
ಮೋಟೋ ಜಿಪಿ ಕ್ರೀಡೆಯ ಸೇರ್ಪಡೆಯಿಂದ ವಯಾಕಾಮ್18 ಸ್ಪೋರ್ಟ್ಸ್ ತನ್ನ ವಿಶ್ವದರ್ಜೆಯ ಕ್ರೀಡಾಕೂಟಗಳ ವೈವಿಧ್ಯತೆಯನ್ನು ಹೆಚ್ಚಿಸಿಕೊಂಡಿದೆ. ವಯಾಕಾಮ್18 ಸ್ಪೋರ್ಟ್ಸ್ ಈಗಾಗಲೆ ಟಾಟಾ ಐಪಿಎಲ್, ಟಾಟಾ ಡಬ್ಲ್ಯುಪಿಎಲ್, ಡೈಮಂಡ್ ಲೀಗ್, ಫಿಫಾ ವಿಶ್ವಕಪ್ ಕತಾರ್-2022, ಎನ್ಬಿಎ, ಲಾ ಲೀಗಾ, ಸೆರೀ ಎ, ಲೀಗ್1 ಮತ್ತು ಆಯ್ದ ಬಿಡಬ್ಲ್ಯುಎಫ್ ಟೂರ್ನಿಗಳ ಪ್ರಸಾರ ಹಕ್ಕು ಹೊಂದಿರುತ್ತದೆ.
ಇದನ್ನೂ ಓದಿ: ಬಿಜೆಪಿಗರು ಕೌರವರು.. ಮದವೇರಿ ಮೆರೆಯುತ್ತಿದ್ದಾರೆ..!
ವೀಕ್ಷಕರು ಜಿಯೋ ಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.ಭಾರತದ ಸುತ್ತಿನ ಹೆಚ್ಚಿನ ಅಪ್ಡೇಟ್ಗಳಿಗಾಗಿ 'ಮೋಟೋ ಜಿಪಿ ಭಾರತ್'ಅನ್ನು ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಿರಿ.
2023ರ ಮೋಟೋ ಜಿಪಿ ಕ್ಯಾಲೆಂಡರ್
ದಿನಾಂಕ ಸ್ಪರ್ಧೆ
ಮಾರ್ಚ್ 24-26 ಗ್ರ್ಯಾಂಡ್ ಪ್ರೀಮಿಯೊ ಡಿ ಪೋರ್ಚುಗಲ್
ಮಾರ್ಚ್ 31-ಏಪ್ರಿಲ್ 2 ಗ್ರ್ಯಾನ್ ಪ್ರೀಮಿಯೊ ಡಿ ಲಾ ರಿಪಬ್ಲಿಕಾ ಅರ್ಜೆಂಟೀನಾ
ಏಪ್ರಿಲ್ 14-16 ಗ್ರ್ಯಾಂಡ್ ಪ್ರಿಕ್ಸ್ ಆಫ್ ದಿ ಅಮೆರಿಕಾಸ್
ಏಪ್ರಿಲ್ 28-30 ಗ್ರ್ಯಾನ್ ಪ್ರೀಮಿಯೊ ಡಿ ಇಸ್ಪಾನಾ
ಮೇ 12-14 ಗ್ರ್ಯಾಂಡ್ ಪ್ರಿಕ್ಸ್ ಡಿ ಫ್ರಾನ್ಸ್
ಜೂನ್ 09-11 ಗ್ರ್ಯಾನ್ ಪ್ರಿಮಿಯೊ ಡಿ ಇಟಲಿಯಾ
ಜೂನ್ 16-18 ಗ್ರ್ಯಾಂಡ್ ಪ್ರಿಕ್ಸ್ ಡಾಯಾಚ್ಲೆಂಡ್
ಜೂನ್ 23-25 ಟಿಟಿ ಅಸೆನ್, ನೆದರ್ಲೆಂಡ್
ಜುಲೈ 7-9 ಗ್ರ್ಯಾಂಡ್ ಪ್ರಿಕ್ಸ್ ಆಫ್ ಕಜಾಕ್ಸ್ತಾನ
ಆಗಸ್ಟ್ 4-6 ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್
ಆಗಸ್ಟ್ 18-20 ಗ್ರ್ಯಾಂಡ್ ಪ್ರಿಕ್ಸ್ ವೊನ್ ಒಸ್ಟೆರಿಚ್, ಆಸ್ಟ್ರಿಯಾ
ಸೆಪ್ಟೆಂಬರ್ 1-3 ಗ್ರ್ಯಾನ್ ಪ್ರೀಮಿ ಡಿ ಕ್ಯಾಟಲುನ್ಯಾ
ಸೆಪ್ಟೆಂಬರ್ 8-10 ಗ್ರ್ಯಾನ್ ಪ್ರಿಮಿಯೊ ಡಿ ಸ್ಯಾನ್ ಮರಿನೊ, ಇಟಲಿ
ಸೆಪ್ಟೆಂಬರ್ 22-24 ಗ್ರ್ಯಾಂಡ್ ಪ್ರಿಕ್ಸ್ ಆಫ್ ಇಂಡಿಯಾ
ಸೆಪ್ಟೆಂಬರ್ 29-ಅಕ್ಟೋಬರ್ 1 ಗ್ರ್ಯಾಂಡ್ ಪ್ರಿಕ್ಸ್ ಆಫ್ ಜಪಾನ್
ಅಕ್ಟೋಬರ್ 13-15 ಗ್ರ್ಯಾಂಡ್ ಪ್ರಿಕ್ಸ್ ಆಫ್ ಇಂಡೋನೇಷ್ಯಾ
ಅಕ್ಟೋಬರ್ 20-22 ಆಸ್ಟ್ರೇಲಿಯನ್ ಮೋಟಾರ್ಸೈಕಲ್ ಗ್ರ್ಯಾಂಡ್ ಪ್ರಿಕ್ಸ್
ಅಕ್ಟೋಬರ್ 27-29 ಥಾಯ್ಲೆಂಡ್ ಗ್ರ್ಯಾಂಡ್ ಪ್ರಿಕ್ಸ್
ನವೆಂಬರ್ 10-12 ಗ್ರ್ಯಾಂಡ್ ಪ್ರಿಕ್ಸ್ ಆಫ್ ಮಲೇಷ್ಯಾ
ನವೆಂಬರ್ 17-19 ಗ್ರ್ಯಾಂಡ್ ಪ್ರಿಕ್ಸ್ ಆಫ್ ಕತಾರ್
ನವೆಂಬರ್ 24-26 ಗ್ರ್ಯಾನ್ ಪ್ರೀಮಿಯೊ ಡಿ ವಲೆನ್ಸಿಯಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.