Vira Video: ಚಿರತೆಯಿಂದ ಸೂರ್ಯ ನಮಸ್ಕಾರ : ವಿಡಿಯೋ ಸಖತ್ ವೈರಲ್‌ 

Viral Animal Video: ಮನುಷ್ಯನಿಗೆ ಮಾನಸಿಕವಾಗಿ ಕಿರಿಕಿರಿ ಆದಾಗ ಅಥವಾ  ಒತ್ತಡಗಳಿಗೆ ಸಿಲುಕಿದಾಗ  ಹೆಚ್ಚಿನವರು ಯೋಗ ಮಾಡುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಎಂದಾದರೂ ಪ್ರಾಣಿಗಳು ಯೋಗ ಮಾಡುವುದನ್ನು ನೋಡಿದ್ದಿರಾ.. ಇಲ್ಲಿದೆ ನೋಡಿ.

Written by - Zee Kannada News Desk | Last Updated : Mar 28, 2023, 12:12 PM IST
  • ಚಿರತೆಯಿಂದ ಸೂರ್ಯ ನಮಸ್ಕಾರ
  • ನಿಶ್ಚಿಂತೆಯಿಂದ ಮೈಮುರಿದ ಚಿಂತೆ ಇಲ್ಲದೇ ಚಿರತೆ
  • ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌
Vira Video: ಚಿರತೆಯಿಂದ ಸೂರ್ಯ ನಮಸ್ಕಾರ : ವಿಡಿಯೋ ಸಖತ್ ವೈರಲ್‌  title=

Leopard Performs Surya Namaskar: ಕೆಲವೊಂದು ಬಾರಿ ಮನುಷ್ಯ ತನ್ನೆಲ್ಲಾ ಚಿಂತೆ ಮರೆತು ಒಂದು ಬಾರಿ ನಿರಳವಾಗಿ ನಿಟ್ಟುಸಿರು ಬಿಟ್ಟು ಮೈಮರೆತು ಜಡ ತೆಗೆದರೆ ದೇಹಕ್ಕೂ ಮನಸ್ಸಿಗೂ ಎರಡಕ್ಕೂ ಸಮಾಧಾನ .. ಹಾಗೆಯೇ ಮನುಷ್ಯನಿಗೆ ಮಾನಸಿಕವಾಗಿ ಕಿರಿಕಿರಿ ಆದಾಗ ಅಥವಾ  ಒತ್ತಡಗಳಿಗೆ ಸಿಲುಕಿದಾಗ ಹೆಚ್ಚಿನವರು ಯೋಗಾಸಾನ ಮಾಡುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಎಂದಾದರೂ ಪ್ರಾಣಿಗಳು ಯೋಗಾಸನ ಮಾಡುವುದನ್ನು ನೋಡಿದ್ದಿರಾ ಇಲ್ಲಿದೆ ನೋಡಿ...

ವೈರಲ್‌ ಆಗಿರುವ ವಿಡೀಯೊದಲ್ಲಿ ಚಿರತೆ ನಿದ್ರೆಯಿಂದ ಎಚ್ಚರವಾಗಿ ನಿಶ್ಚಿಂತೆಯಿಂದ ಮೈಮುರಿಯುತ್ತಿದೆ. ಮಕ್ಳನ್ನು ಸಾಕಬೇಕೆಂಬ ಚಿಂತೆ ಇಲ್ಲ , ಸಾಲದ ಬಾಧೆ ಇಲ್ಲ. ಎದ್ದು ಹೊಟ್ಟೆ ತುಂಬುವಷ್ಟು ಮಟ್ಟಿಗೆ ಯಾವುದಾರೂ ಪ್ರಾಣಿಯನ್ನು ಭೇಟೆಯಾಡಿ ತಿಂದರಾಯಿತು ಎಂದು ಯೋಚಿಸುತ್ತಿರುವಂತಿದೆ.

ಇದನ್ನೂ ಓದಿ: ಆಗಸದಲ್ಲಿ ಶುಕ್ರ - ಚಂದ್ರ ಮಿಲನ.. ಪ್ರಕೃತಿ ವಿಸ್ಮಯ ಕಂಡು ಆಶ್ಚರ್ಯಚಕಿತರಾದ ಜನರು

ಆದರೆ ಚಿರತೆ ಮೈ ಮುರಿದಿರುವ ದೃಶ್ಯ ಯೋಗಾ ಬಲ್ಲವರಿಗೆ ಚಿರತೆ ಸಹ ಬೆಳ್ಳಗೆ ಎದ್ದು ಸೂರ್ಯ ನಮಸ್ಕರಿಸುತ್ತಿದೆ ಎಂಬ ಭಾವನೆ ಬರುತ್ತದೆ, ಸೂರ್ಯ ನಮಸ್ಕರಾವೋ ಸೋಮಾರಿತನವೋ ಒಟ್ಟಿನಲ್ಲಿ ಈ ವೀಡಿಯೊ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.  ಈ ವಿಡೀಯೊವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತ ನಂದಾರವೆರವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:   ಹೀಗೂ ಉಂಟೆ : 14 ತಿಂಗಳಿಂದ ಮೂತ್ರ ವಿಸರ್ಜನೆ ಮಾಡದ ಮಹಿಳೆ

ಈ ವೀಡಿಯೊವನ್ನು ರಷ್ಯಾದ  ಚಿರತೆ ರಾಷ್ಟ್ರೀಯ ಉದ್ಯಾನವನವೊಂದರಲ್ಲಿ  ರೆಕಾರ್ಡ್ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ನೆಟ್ಟಿಗರು ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯ ತಿಳಿಸಿದ್ದಾರೆ. ಒಬ್ಬರು "ಫಿಟ್ನೆಸ್ ಫ್ರೀಕ್ ಚಿರತೆ",  "ತಾಯಿ ಸ್ವಭಾವದಿಂದ ಅನುಕರಿಸಲು ಉತ್ತಮ ಉದಾಹರಣೆ,"ಇದು ಪ್ರಾಣಿಗಳಿಗೆ ಸ್ವಾಭಾವಿಕವಾಗಿ ಬರುತ್ತದೆ ಎಂದು ಭಾವಿಸುತ್ತೇವೆ, "ಯೋಗ ಸೇ ಹಿ ಹೋಗಾ" ಎಂದು ಚಿರತೆಗೆ ಡೀಫರೆಂಟ್‌ ಅಭಿಪ್ರಾಯಗಳ ಸುರಿಮಳೆ ಸುರಿಸಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News