Physical Relationship: ಮಹಿಳೆಯರೇ ಆಗಲಿ ಅಥವಾ ಪುರುಷರೇ ಆಗಲಿ ದೈಹಿಕ ಸಂಬಂಧ ಎಲ್ಲಾ ಜನರಿಗೆ ಆಹ್ಲಾದಾದಕರ ಮತ್ತು ಒಳ್ಳೆಯ ಅನುಭವ ನೀಡುತ್ತದೆ, ವಿಶೇಷವಾಗಿ ತಮ್ಮ ಮಹಿಳಾ ಸಂಗಾತಿ ಹಾಸಿಗೆಯತ್ತ ಮೊದಲ ಹೆಜ್ಜೆ ಇಟ್ಟಾಗ ಅದನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ದೈಹಿಕ ಸಂಬಂಧದ ಸಮಯದಲ್ಲಿ, ಪುರುಷರು ತಮ್ಮ ಮಹಿಳೆಯ ಬಗ್ಗೆ ಅನೇಕ ವಿಷಯಗಳನ್ನು ಗಮನಿಸುತ್ತಾರೆ ಮತ್ತು ಲೈಂಗಿಕತೆಯ ಬಳಿಕವೂ ಕೂಡ ಅವುಗಳ ಕುರಿತು ಯೋಚಿಸುತ್ತಾರೆ. ಒಳಉಡುಪುಗಳಾಗಿರಲಿ ಅಥವಾ ಉಗುರು ಕಚ್ಚುವುದಿರಲಿ, ಹಾಸಿಗೆಯಲ್ಲಿ ಪುರುಷರನ್ನು ಮಹಿಳೆಯರೆಡೆಗೆ ಆಕರ್ಷಿಸುವ ಇವು ಸಣ್ಣಪುಟ್ಟ ವಿಷಯಗಳಾಗಿವೆ. ಆದರೆ ಇವು ಮಹಿಳೆಯರು ಪುರುಷರ ಬಗ್ಗೆ ಯೋಚಿಸಬಹುದಾದ ನೈರ್ಮಲ್ಯ ಅಥವಾ ದೇಹದ ಸೆಲ್ಯುಲೈಟ್ ಅಲ್ಲ! ಇದು ಸಂಪೂರ್ಣವಾಗಿ ಬೇರೆ ವಿಷಯ. ದೈಹಿಕ ಸಂಬಂಧದ ಸಮಯದಲ್ಲಿ ಪುರುಷರು ಲೈಂಗಿಕ ಸಮಯದಲ್ಲಿ ಮಹಿಳೆಯರ ಬಗ್ಗೆ ಈ 4 ವಿಷಯಗಳನ್ನು ಗಮನಿಸುತ್ತಾರೆ.
ಯಾವ ರೀತಿ ಮಹಿಳೆಯರು ತಮ್ಮ ದೇಹ ಅಲ್ಲಾಡಿಸುತ್ತಾರೆ
ಲೈಂಗಿಕತೆಯ ಸಮಯದಲ್ಲಿ ತಮ್ಮ ಸಂಗಾತಿಯ ತಮ್ಮ ಸಂಗಾತಿಯ ದೇಹ ಹೇಗೆ ಚಲಿಸುತ್ತದೆ ಎಂಬುದನ್ನು ಪುರುಷರು ಗಮನಿಸುತ್ತಾರೆ. ದೇಹದ ಚಲನೆಯು ಕಠಿಣವಾಗಿದೆಯೇ ಅಥವಾ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ಅವರು ಗಮನಿಸುತ್ತಾರೆ. ಲೈಂಗಿಕ ಸಮಯದಲ್ಲಿ ಪುರುಷರು ತಮ್ಮ ಸಂಗಾತಿಯ ದೇಹಕ್ಕೆ ಸಾಧ್ಯವಾದಷ್ಟು ಹತ್ತಿರ ಇರಲು ಬಯಸುತ್ತಾರೆ. ಲೈಂಗಿಕ ಪ್ರಕ್ರಿಯೆ ತಮಗೆ ತುಂಬಾ ಒರಟಾಗಿ ಮತ್ತು ವಿಚಿತ್ರವಾಗಿ ಭಾವಿಸಿದಾಗ ಮಹಿಳೆಯರು ಅದನ್ನು ದ್ವೇಷಿಸುತ್ತಾರೆ, ಏಕೆಂದರೆ ನಂತರ ನಡೆಯುವುದು ತಮ್ಮ ಪಾಲಿಗೆ ಆಹ್ಲಾದಕರವಲ್ಲ ಎಂಬುದನ್ನೂ ಅವರು ಮೊದಲೇ ಕಂಡುಕೊಳ್ಳುತ್ತಾರೆ.
ಕಣ್ಣುಗಳು
ಲೈಂಗಿಕ ಸಮಯದಲ್ಲಿ ಪುರುಷರು ತಮ್ಮ ಸಂಗಾತಿಯ ಕಣ್ಣುಗಳನ್ನು ನೋಡಲು ಇಷ್ಟಪಡುತ್ತಾರೆ. ಎಲ್ಲಾ ರೀತಿಯ ಆಲೋಚನೆಗಳು ಅವರ ಮನಸ್ಸಿನಲ್ಲಿ ಓಡುತ್ತವೆ - ಅವಳು ನನ್ನ ದೇಹವನ್ನು ಇಷ್ಟಪಡುತ್ತಾಳೆಯೇ ಅಥವಾ ಅವಳು ನನ್ನನ್ನು ಪರೀಕ್ಷಿಸುತ್ತಿದ್ದಾಳಾ? ಪುರುಷರು ಅವರ ಕಣ್ಣುಗಳನ್ನು ನೋಡುವ ಮೂಲಕ ಮಹಿಳೆಯರ ದೇಹ ಭಾಷೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಆದ್ದರಿಂದ ಅವರು ತಮ್ಮ ಸಂಗಾತಿಯ ಭಾವನೆಗಳೊಂದಿಗೆ ಕಣ್ಣಿನ ಸಂಪರ್ಕವನ್ನು ಸ್ಥಾಪಿಸುತಾರೆ.
ಇದನ್ನೂ ಓದಿ-Men Health Tips: ಪುರುಷರ ವೈವಾಹಿಕ ಜೀವನದ ಹಲವಾರು ಸಮಸ್ಯೆಗಳಿಗೆ ಇದು ರಾಮಬಾಣ!
ಸಂಗಾತಿಯ ಧ್ವನಿ
ಇದು ಪುರುಷರು ನಿಜವಾಗಿಯೂ ಗಮನಿಸುವ ಮತ್ತೊಂದು ವಿಷಯ. ತಮ್ಮ ಮಹಿಳೆಯ ಧ್ವನಿಯು ಸಾಮಾನ್ಯಕ್ಕಿಂತ ಹೆಚ್ಚು ಆಳವಾಗಿದ್ದರೆ, ಅವರು ಅತಿಯಾಗಿ ಉತ್ಸುಕರಾಗಿದ್ದಾರೆಂದು ಅವರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಸಂಗಾತಿಯು ಉಸಿರುಗಟ್ಟುತ್ತಿದ್ದರೆ, ಸಾಮಾನ್ಯವಾಗಿ ಆಕೆ ದಣಿದಿರಬಹುದು ಎಂದು ಅವರು ಅರ್ಥೈಸಿಕೊಳ್ಳುತ್ತಾರೆ, ಆದರೆ ಧ್ವನಿ ಆಳವಾಗಿದ್ದಾರೆ ಅವರು ಹೆಚ್ಚು ಹುಮ್ಮಸ್ಸಿನಿಂದ ಮುಂದುವರೆಯುತ್ತಾರೆ ಮತ್ತು ಇದರರ್ಥ ಮುಂದಿನ ಲೈಂಗಿಕ ಪ್ರಕ್ರಿಯೆ ನಿಜವಾಗಿಯೂ ಉತ್ತಮವಾಗಿರುತ್ತದೆ.
ಇದನ್ನೂ ಓದಿ-Diabetes: ಸಕ್ಕರೆ ಕಾಯಿಲೆ ಇರುವವರಿಗೆ ಈ ನೀರು ಒಂದು ಸೂಪರ್ ಡ್ರಿಂಕ್, ಟ್ರೈ ಮಾಡಿ ನೋಡಿ!
ಒಳ ಉಡುಪು
ಲೈಂಗಿಕ ಕ್ರಿಯೆಯ ಸಮಯದಲ್ಲಿ ತಮ್ಮ ಮಹಿಳೆ ಯಾವ ರೀತಿಯ ಒಳಉಡುಪನ್ನು ಧರಿಸುತ್ತಾರೆ ಎಂಬುದನ್ನು ಪುರುಷರು ಗಮನಿಸುತ್ತಾರೆ. ಅವು ಹಳೆಯದಾಗಿದ್ದಾರೆ ಮತ್ತು ಸವೆದಿದ್ದಲ್ಲಿ, ಮಹಿಳೆ ನಿಜವಾಗಿಯೂ ಪ್ರಯತ್ನವನ್ನು ಮಾಡಿಲ್ಲ ಎಂಬುದನ್ನೂ ಅದು ಸೂಚಿಸುತ್ತದೆ. ಎಲ್ಲಾ ಪುರುಷರು ಈ ಕುರಿತು ದೂರುವುದಿಲ್ಲ, ಆದರೆ ಹಾಸಿಗೆಯಲ್ಲಿ ತಮ್ಮನ್ನು ಮೆಚ್ಚಿಸಲು ತಮ್ಮ ಪಾಲುದಾರರು ಲೈಂಗಿಕತೆಗೆ ಉತ್ತೇಜನ ನೀಡುವ ಒಳ ಉಡುಪುಗಳನ್ನು ಧರಿಸಿದಾಗ ಅವರು ಖಂಡಿತವಾಗಿಯೂ ಅದನ್ನು ಇಷ್ಟಪಡುತ್ತಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.