Yoga For Hair Growth : ಕೂದಲು ಉದುರುವುದು, ಬೆಳವಣಿಗೆ ಕುಂಠಿತವಾಗುವುದು, ತಲೆ ಹೊಟ್ಟು, ಮುಂತಾದ ಸಮಸ್ಯೆಗಳಿಂದ ಸಾಕಷ್ಟು ಜನ ಬೇಸೊತ್ತಿದ್ದಾರೆ. ಈ ಸಮಸ್ಯೆಗಳಿಗೆ ಮಾಲಿನ್ಯ, ಅನಿಯಮಿತ ಆಹಾರ ಸೇವನೆ ಮುಂತಾದವು ಸಾಮಾನ್ಯ ಕಾರಣಗಳಾಗಿವೆ. ಆ ಸಮಸ್ಯೆಗಳಿಂದ ಹೊರಬರಲು ಅನೇಕ ತರಹದ ಚಿಕಿತ್ಸೆಗಳನ್ನು ಪಡೆಯುತ್ತಾರೆ.
ಕಳೆದ ದಶಕದಿಂದ ನಮ್ಮ ಪ್ರಪಂಚವು ಸಮತೋಲಿತ ಮತ್ತು ಆರೋಗ್ಯಕರ ಮನಸ್ಥಿತಿಯ ಪ್ರಯೋಜನಗಳತ್ತ ನಿಧಾನವಾಗಿ ಎಚ್ಚರಗೊಳ್ಳುತ್ತಿದೆ. ಯೋಗದಿಂದ ರೋಗ ಮುಕ್ತಿ ಎಂಬ ಮಾತಿನಂತೆ ಯೋಗದಿಂದ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಬಹುದೆಂದು ನಿಮಗೆ ತಿಳಿದಿದೆಯೇ? ಒಟ್ಟಾರೆಯಾಗಿ ಆರೋಗ್ಯಕರ ಜೀವನವನ್ನು ಹೊಂದಲು ಆರೋಗ್ಯಕರ ಮನಸ್ಸನ್ನು ಹೊಂದಲು ಯೋಗವು ಸಾಕಷ್ಟು ಉಪಯುಕ್ತವಾಗಿದೆ.
ಉತ್ತಮ ಕೂದಲಿನ ಬೆಳವಣಿಗೆಗೆ ಬೇಕಾದ ಯೋಗಾಸನಗಳು :
ಈ ಆಸನವು ನಮ್ಮ ದೇಹದಲ್ಲಿನ ಗಂಥಿಗಳನ್ನು ಉತ್ತೇಜಿಸಲು ಅನುಕೂಲವಾಗಿದೆ, ಮತ್ತು ನಮ್ಮ ದೇಹದಲ್ಲಿನ ಥೈರಾಯ್ಡ್ ಮತ್ತು ಪ್ಯಾರಾಥೈರಾಯ್ಡ್ ಗ್ರಂಥಿಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಅದೇ ಮೂಲಕ ಹಾರ್ಮೋನ್ ಸ್ರವಿಸುವಿಕೆಯನ್ನು ಸಮತೋಲನಗೊಳಿಸುತ್ತದೆ.
ಈ ಯೋಗವು ಕೆಳಮುಖವಾದ ಆಸನವಾಗಿದ್ದು, ಅದು ನಿಮ್ಮ ನೆತ್ತಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ವೇಗವಾಗಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಯೋಗವು ಒತ್ತಡವನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ ಮತ್ತು ಕೂದಲು ಉದುರುವಿಕೆ ನಿಯಂತ್ರಣಕ್ಕಾಗಿ ಯೋಗದಲ್ಲಿ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ.
ಆರೋಗ್ಯಕರ ಕೂದಲಿಗೆ ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ಯೋಗಗಳಲ್ಲಿ ಒಂದಾಗಿದೆ, ಸುಲಭವಾದ ವ್ಯಾಯಾಮವು ನಿಮ್ಮ ಕೂದಲಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಈ ಆಸನವು ನಿಮ್ಮ ಥೈರಾಯ್ಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ ಮತ್ತು ಇದರಿಂದಾಗಿ ಕೂದಲು ತೆಳುವಾಗುವುದು ಮತ್ತು ಅಂತಿಮವಾಗಿ ಉದುರುವಿಕೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ಆದ್ದರಿಂದ ಆರೋಗ್ಯಕರ ಕೂದಲಿಗೆ ಯೋಗವನ್ನು ಅಳವಡಿಸಿಕೊಳ್ಳಬೇಕು.