ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿ ೨೦೨೩ ರ ಆವೃತ್ತಿ ಮೊದಲ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ವಿರುದ್ಧ ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಗುಜರಾತ್ ತಂಡವು ಚೆನ್ನೈ ತಂಡವನ್ನು ಏಳು ವಿಕೆಟ್ ನಷ್ಟಕ್ಕೆ ೨೦ ಓವರ್ಗಳಲ್ಲಿ ೧೭೮ ರನ್ ಗಳಿಗೆ ಕಟ್ಟಿ ಹಾಕಿತು. ಚೆನ್ನೈ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್ ಒಂಬತ್ತು ಸಿಕ್ಸರ್ ಗಳು ಹಾಗೂ ನಾಲ್ಕು ಬೌಂಡರಿಗಳ ನೆರವಿನೊಂದಿಗೆ ಐವತ್ತು ಎಸೆತಗಳಲ್ಲಿ ೯೨ ರನ್ಗಳನ್ನು ಗಳಿಸಿದರು.ಇನ್ನೊಂದೆಡೆಗೆ ಉಳಿದ ಯಾವ ಆಟಗಾರನು ಕೂಡ ಇವರಿಗೆ ಅಷ್ಟಾಗಿ ಸಾಥ್ ನೀಡಲಿಲ್ಲ.
A successful final-over chase at the Narendra Modi Stadium to kick off #TATAIPL 2023 🔥🔥
The @rashidkhan_19-@rahultewatia02 duo at it again as @gujarat_titans secure a win against #CSK💪
Scorecard ▶️ https://t.co/61QLtsnj3J#GTvCSK pic.twitter.com/uKS9xJgIbw
— IndianPremierLeague (@IPL) March 31, 2023
ಚೆನ್ನೈ ತಂಡವು ನೀಡಿದ ೧೭೯ ರನ್ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ತಂಡವು ಶುಬ್ಮನ್ ಗಿಲ್ ೬೩ ಹಾಗೂ ವ್ರುದ್ದಿಮಾನ್ ಸಹಾ ೨೫ ಆಟದಿಂದಾಗಿ ತಂಡವು ಗೆಲುವಿನತ್ತ ಮುನ್ನುಗ್ಗಿತು.ಅಂತಿಮವಾಗಿ ಐದು ವಿಕೆಟ್ ಗಳನ್ನೂ ಕಳೆದುಕೊಂಡು ೧೯.೨ ಓವರ್ ಗಳಲ್ಲಿ ೧೮೨ ರನ್ಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವನ್ನು ಸಾಧಿಸಿತು.ಆ ಮೂಲಕ ಹಾಲಿ ಚಾಂಪಿಯನ್ ತಂಡವು ಈಗ ಮೊದಲ ಪಂದ್ಯದಿಂದಲೇ ಐಪಿಎಲ್ ವಿಜಯಯಾನಕ್ಕೆ ಚಾಲನೆ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.