ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್ ಗೆಲ್ಲುವ ಹೆಚ್ಚಿನ ನಿರೀಕ್ಷೆಯಿಲ್ಲ -ಪಾಫ್ ಡುಪ್ಲೇಸ್ಸಿಸ್

ದಕ್ಷಿಣ ಆಫ್ರಿಕಾದ ಆಟಗಾರ ಪಾಫ್ ಡುಪ್ಲೇಸ್ಸಿಸ್ ತಮ್ಮ ತಂಡಕ್ಕೆ ವಿಶ್ವಕಪ್ ಗೆಲ್ಲುವ ಅಂತಹ ಹೆಚ್ಚಿನ ನಿರೀಕ್ಷೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Last Updated : Jan 30, 2019, 03:35 PM IST
ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್ ಗೆಲ್ಲುವ ಹೆಚ್ಚಿನ ನಿರೀಕ್ಷೆಯಿಲ್ಲ -ಪಾಫ್ ಡುಪ್ಲೇಸ್ಸಿಸ್  title=

ನವದೆಹಲಿ: ದಕ್ಷಿಣ ಆಫ್ರಿಕಾದ ಆಟಗಾರ ಪಾಫ್ ಡುಪ್ಲೇಸ್ಸಿಸ್ ತಮ್ಮ ತಂಡಕ್ಕೆ ವಿಶ್ವಕಪ್ ಗೆಲ್ಲುವ ಅಂತಹ ಹೆಚ್ಚಿನ ನಿರೀಕ್ಷೆಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಈ ಬಾರಿಯ ವಿಶ್ವಕಪ್ ಗೆಲ್ಲುವ ತಂಡಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ಫೆವರಿಟ್ ತಂಡಗಳು ಎಂದು ಅವರು ತಿಳಿಸಿದರು.ಇದುವರೆಗೆ ದಕ್ಷಿಣ ಆಫ್ರಿಕಾ ತಂಡವು ಒಮ್ಮೆಯೂ ಕೂಡ ವಿಶ್ವಕಪ್ ನ್ನು ಗೆದ್ದಿಲ್ಲ. ಹಲವು ಸಂದರ್ಭದಲ್ಲಿ ವಿಶ್ವಕಪ್ ಸೆಮಿಫೈನಲ್ ಗೆ ತಲುಪಿ ಅಲ್ಲಿ ಸೋಲನ್ನು ಅನುಭವಿಸಿದೆ.

ಬಹುಶ ಇದೆ ಹಿನ್ನಲೆಯಲ್ಲಿ ದುಪ್ಲೆಸಿಸ್ ಹೇಳಿಕೆ ನೀಡಿರಬಹುದೆಂದು ಕಾಣಿಸುತ್ತದೆ.ನಾವು ಗೆಲ್ಲುವು ಹೆಚ್ಚಿನ ನಿರೀಕ್ಷೆಯೊಂದಿಗೆ ಹೋಗುವುದಿಲ್ಲ ಇದರಿಂದ ತಂಡದ ಮೇಲೆ ಒತ್ತಡ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಾವು ಈ ಹಿಂದೆ ಟೂರ್ನಿಯಲ್ಲಿ ಕಾಗದ ಮೇಲೆ ಅತಿ ಬಲಿಷ್ಠ ತಂಡವೆಂದು ಬಿಂಬಿಸಿ ಆಟಕ್ಕೆ ಹೋಗಿದ್ದೆವು ಆದರೆ ಕ್ರಿಕೆಟ್ ಕಾಗದ ಮೇಲೆ ಆಡುವುದಲ್ಲ.ಎದುರಾಳಿಗಳು ಈಗ ನಮ್ಮನ್ನು ನೋಡಿದಾಗ ಅವರಿಗೆ ಬಲಿಷ್ಠ ಎಂದೆನಿಸುವುದಿಲ್ಲ,ಆದರೆ ನಾವು ವಿಶ್ವಕಪ್ ಟೂರ್ನಿಗೆ ಹೋದಾಗ ಮಾಧ್ಯಮಗಳಲ್ಲಿ ಮತ್ತು ಎದುರಾಲಿಗಳಲ್ಲಿ ಈ ಕುರಿತಾಗಿ ಮಾತುಕತೆ ಸುರುವಾಗುತ್ತದೆ ಎಂದು ಅವರು ತಿಳಿಸಿದರು. 

 

Trending News