Vastu Tips To Get Rid From Shani-Rahu Dosh: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಡುವುದರಿಂದ ಅಂತಹ ಮನೆಗಳಲ್ಲಿ ಋಣಾತ್ಮಕ ಶಕ್ತಿ ನಶಿಸಿ, ಧನಾತ್ಮಕ ಶಕ್ತಿ ನೆಲೆಯೂರುತ್ತದೆ. ಮಾತ್ರವಲ್ಲ, ಕೆಲವು ಗ್ರಹಗಳಿಗೆ ಸಂಬಂಧಿಸಿದ ಸಸ್ಯಗಳನ್ನು ನೆಡುವುದರಿಂದ ಗ್ರಹ ದೋಷಗಳಿಂದಲೂ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರಜ್ಞರ ಪ್ರಕಾರ, ಮನೆಯಲ್ಲಿರುವ ಕೆಲವು ಸಸ್ಯಗಳಿದ್ದರೆ ಶನಿ-ರಾಹುವಿನ ದುಷ್ಟ ಕಣ್ಣು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ ಎಂದು ನಂಬಲಾಗಿದೆ. ಅಂತಹ ಸಸ್ಯಗಳು ಯಾವುವು ಎಂದು ತಿಳಿಯೋಣ...
ಶನಿ-ರಾಹು ಗ್ರಹಗಳ ದುಷ್ಪರಿಣಾಮಗಳಿಂದ ಮುಕ್ತಿ ಪಡೆಯಲು ಮನೆಯಲ್ಲಿರಲಿ ಈ ನಾಲ್ಕು ಸಸ್ಯಗಳು:-
ತುಳಸಿ ಗಿಡ:
ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ಸಸ್ಯ ಎಂದರೆ ಅದು ತುಳಸಿ. ಈ ಸಸ್ಯದಲ್ಲಿ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮೀದೇವಿ ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ. ವಾಸ್ತು ಶಾಸ್ತ್ರದ, ಪ್ರಕಾರ ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ- Vastu Tips For TV: ಮನೆಯಲ್ಲಿ ಸದಾ ಸಂತೋಷ ನೆಲೆಸಬೇಕಾದರೆ ಟಿವಿಯನ್ನು ಈ ದಿಕ್ಕಿನಲ್ಲಿಡಿ
ಮನಿ ಪ್ಲಾಂಟ್:
ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಅನ್ನು ತುಂಬಾ ಮಂಗಳಕರವಾದ ಸಸ್ಯ ಎಂದು ಪರಿಗಣಿಸಲಾಗಿದೆ. ಮನಿ ಪ್ಲಾಂಟ್ ಅನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಹಾಗಾಗಿ, ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಅಂತಹ ಮನೆಯಲ್ಲಿ ಸಂಪತ್ತಿನ ಸುರಿಮಳೆ ಆಗಲಿದೆ ಎಂದು ಹೇಳಲಾಗುತ್ತದೆ.
ಶಮಿ ಗಿಡ:
ಹಿಂದೂ ಧರ್ಮದಲ್ಲಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನಿಗೂ ಶಮಿ ಸಸ್ಯಕ್ಕೂ ಇರುವ ಸಂಬಂಧವನ್ನು ಉಲ್ಲೇಖಿಸಲಾಗಿದೆ. ಮನೆಯ ಬಳಿ ಶಮಿ ಗಿಡ ನೆಡುವುದರಿಂದ ಅಂತಹ ಮನೆಯಲ್ಲಿ ಶನಿದೇವನ ಆಶೀರ್ವಾದ, ಶನಿಯ ಕೃಪಾಕಟಾಕ್ಷ ಇರಲಿದೆ ಎಂದು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಸಾಡೇಸಾತಿ ಶನಿ, ಶನಿ ಧೈಯಾದಿಂದ ಬಳಲುತ್ತಿರುವವರು ಸಹ ಶನಿವಾರದಂದು ಮನೆ ಹತ್ತಿರ ಶಮಿ ಗಿಡ ನೆಡುವುದರಿಂದ ಪರಿಹಾರ ಪಡೆಯಬಹುದು ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ- Vastu Tips: ಶೀಘ್ರದಲ್ಲೇ ಮದುವೆಯ ಸೀಜನ್ ಆರಂಭಗೊಳ್ಳಲಿದೆ! ಕಂಕಣ ಭಾಗ್ಯ ಕೂಡಿಬರಲು ಇಲ್ಲಿವೆ ವಾಸ್ತು ಟಿಪ್ಸ್
ಬಿದಿರಿನ ಗಿಡ:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಂದೆ ಬಿದಿರಿನ ಗಿಡ ನೆಡುವುದು ಕೂಡ ತುಂಬಾ ಶುಭಕರ. ಮನೆಯ ಮುಂದೆ ಬಿದಿರಿನ ಸಸ್ಯವಿದ್ದರೆ ಅಂತಹ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆ. ಮಾತ್ರವಲ್ಲ, ಮನೆಯಲ್ಲಿ ಎಂದಿಗೂ ಕೂಡ ಆರ್ಥಿಕ ಮುಗ್ಗಟ್ಟು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.