"ಯಾವುದೇ ಕಾರಣಕ್ಕೂ ಅಮುಲ್ ನಲ್ಲಿ ನಂದಿನಿ ವಿಲೀನ ಆಗುವುದಿಲ್ಲ"

 ಯಾವುದೇ ಕಾರಣಕ್ಕೂ ಅಮೂಲ್ ನಲ್ಲಿ ನಂದಿನಿ ವಿಲೀನ ಆಗುವುದಿಲ್ಲ, ಅದಕ್ಕೆ ನಾವು ಅವಕಾಶ ಮಾಡಿ ಕೊಡಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

Written by - Manjunath N | Last Updated : Apr 11, 2023, 06:07 PM IST
  • ನಂದಿನಿಗಾಗಿ ಎಂತದೇ ಹೋರಾಟ ಮಾಡುವ ಪರಿಸ್ಥಿತಿ ಬಂದರೂ ನಾವು ಸಿದ್ಧರಿದ್ದೇವೆ
  • ಅಮೂಲ್ ಮತ್ತು ನಂದಿನಿ ಎರಡೂ ಜೊತೆಯಾಗಿ ಹೋದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲ‌ ಆಗುತ್ತದೆ ಎಂದು ಹೇಳಿದ್ದರು.
  • ಅದಾದ ಬಳಿಕ ಈಗ ಒಂದು ವಾರದಿಂದ ರಾಜ್ಯದಲ್ಲಿ ಅಮೂಲ್-ನಂದಿನಿ‌ ಗಲಾಟೆ ಶುರುವಾಗಿದೆ ಎಂದು ಅವರು ಹೇಳಿದರು
 "ಯಾವುದೇ ಕಾರಣಕ್ಕೂ ಅಮುಲ್ ನಲ್ಲಿ ನಂದಿನಿ ವಿಲೀನ ಆಗುವುದಿಲ್ಲ" title=

ಬೆಳಗಾವಿ: ಯಾವುದೇ ಕಾರಣಕ್ಕೂ ಅಮುಲ್ ನಲ್ಲಿ ನಂದಿನಿ ವಿಲೀನ ಆಗುವುದಿಲ್ಲ, ಅದಕ್ಕೆ ನಾವು ಅವಕಾಶ ಮಾಡಿ ಕೊಡಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ನಂದಿನಿಗಾಗಿ ಎಂತದೇ ಹೋರಾಟ ಮಾಡುವ ಪರಿಸ್ಥಿತಿ ಬಂದರೂ ನಾವು ಸಿದ್ಧರಿದ್ದೇವೆ.ಅಮಿತ್ ಷಾ ಅವರು ಆಗಮಿಸಿದ್ದ ವೇಳೆ ಅಮೂಲ್ ಮತ್ತು ನಂದಿನಿ ಎರಡೂ ಜೊತೆಯಾಗಿ ಹೋದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲ‌ ಆಗುತ್ತದೆ ಎಂದು ಹೇಳಿದ್ದರು. ಅದಾದ ಬಳಿಕ ಈಗ ಒಂದು ವಾರದಿಂದ ರಾಜ್ಯದಲ್ಲಿ ಅಮುಲ್-ನಂದಿನಿ‌ ಗಲಾಟೆ ಶುರುವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

'ಕೆಎಂಎಫ್ ತೀರ್ಮಾನವೇ ಸುಪ್ರೀಂ,ವಿಲೀನಕ್ಕೆ ಅವಕಾಶ ಕೊಡಲ್ಲ'

ಅಮೂಲ್ ಸೇರಿ ಯಾವುದೇ ಕಂಪನಿ ಬಂದರೂ ನಂದಿನಿ ಜೊತೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ನಂದಿನಿ ಹೇಗೆ ಉಳಿಸಬೇಕು, ಬೆಳೆಸಬೇಕು ಎಂಬುದು ಗೊತ್ತಿದೆ. ರಾಜ್ಯದಲ್ಲಿ ಅಮೂಲ್ ಮತ್ತು ನಂದಿನಿ ವಿಚಾರವನ್ನು ಇಲ್ಲಿಗೆ ಕೈ ಬಿಡಬೇಕು.ಅಮಿತ್ ಷಾ, ಕೇಂದ್ರ ಸರ್ಕಾರ ಏನಾದರೂ‌ ಇಂತಹ ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೆ ಮೊದಲು ವಿರೋಧ ಮಾಡುವವರು ನಾವೇ. ಅಮುಲ್ ಜೊತೆ ಯಾವುದೇ ರೀತಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ.ಮತದಾರರ ತಲೆ ಕೆಡಿಸುವ ಉದ್ದೇಶದಿಂದ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ಚುನಾವಣೆ ಮುಗಿದ ಬಳಿಕ‌ ಇದನ್ನು ಎಲ್ಲರೂ ಮರೆಯುತ್ತಾರೆ.ರಾಜಕೀಯ ದುರುದ್ದೇಶದಿಂದ ಮತದಾರರ ತಲೆ ಕೆಡಿಸುವ ಕೆಲಸವನ್ನು ವಿರೋಧಿಗಳು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ‌ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಹೊಗೆನಕಲ್ನಲ್ಲಿ ಹಗಲು ದರೋಡೆ: ₹750 ಬೋಟಿಂಗ್ ಗೆ ₹3500 ಶುಲ್ಕ- ಪ್ರವಾಸಿಗರ ಆಕ್ರೋಶ

ಬೆಂಗಳೂರಿನಲ್ಲಿ ನಂದಿನಿ ಹಾಲು ಪದಾರ್ಥಗಳು ಉತ್ಪಾದನೆಯಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ಉತ್ತರ ಕರ್ನಾಟಕದಲ್ಲಿಯೂ ಒಂದು ಘಟಕ‌ ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದೇವೆ.ಅಮುಲ್ ತನ್ನ ಲಾಭಾಂಶದ ಶೇ.10ರಷ್ಟು ಪ್ರಚಾರಕ್ಕೆ ಬಳಸುತ್ತದೆ.ಬರುವ ದಿನಗಳಲ್ಲಿನಾವು ಕೂಡ ಹೆಚ್ಚಿನ ಪ್ರಚಾರ ಮಾಡುತ್ತೇವೆ.‌ಅದೇ ರೀತಿ ಅಮೂಲ್ ಹಾಲಿನ ದರ ನಂದಿನಿಗಿಂತ ಹೆಚ್ಚಿದ್ದು, ನಂದಿನಿ‌ದರ ಹೆಚ್ಚು ಮಾಡುವ ಬಗ್ಗೆಯೂ ಸಿಎಂ ಜೊತೆಗೆ ಚರ್ಚೆ ಮಾಡಿದ್ದೆ ಎಂದು ಬಾಲಚಂದ್ರ ಜಾರಕಿಹೋಳಿ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News