LSG vs RBC, Gautham Gambhir Reaction: ಏಪ್ರಿಲ್ 10 ರಂದು IPL 2023ರ 15 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರೋಚಕತೆ ಉತ್ತುಂಗದಲ್ಲಿತ್ತು. ಈ ಪಂದ್ಯದಲ್ಲಿ ಲಖನೌ ತಂಡ ಕೊನೆಯ ಎಸೆತದಲ್ಲಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್’ಗೆ 212 ರನ್ ಗಳಿಸಿತು. ಗೆಲುವಿಗೆ 213 ರನ್’ಗಳ ಗುರಿಯನ್ನು ಸಾಧಿಸಲು ಹೊರಟ ಲಕ್ನೋ ತಂಡ 9 ವಿಕೆಟ್’ಗಳ ನಷ್ಟದಲ್ಲಿ ಗುರಿ ತಲುಪಿತು. ಪಂದ್ಯದ ನಂತರ ಲಕ್ನೋದ ಮೆಂಟರ್ ಗೌತಮ್ ಗಂಭೀರ್ ಅವರ ಪ್ರತಿಕ್ರಿಯೆ ಮಾತ್ರ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: RCB ಸೋಲುತ್ತಿದ್ದಂತೆ ವಿಚಿತ್ರ ರಿಯಾಕ್ಷನ್ ಕೊಟ್ಟ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ! ವಿಡಿಯೋ ನೋಡಿ!
ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ ಕೊನೆಯ ಓವರ್’ನಲ್ಲಿ 5 ರನ್ ಅಗತ್ಯವಿತ್ತು. ಆರ್’ಸಿಬಿಯಿಂದ ಇನಿಂಗ್ಸ್’ನ ಕೊನೆಯ ಓವರ್ ಬೌಲ್ ಮಾಡಲು ಹರ್ಷಲ್ ಪಟೇಲ್ ಬಂದರು. ಕ್ರೀಸ್’ನ ಮತ್ತೊಂದು ತುದಿಯಲ್ಲಿ ಜಯದೇವ್ ಉನದ್ಕತ್ ಇದ್ದರು. ಹರ್ಷಲ್ ಅವರ ಮೊದಲ ಎಸೆತದಲ್ಲಿ ಉನದ್ಕತ್ ಒಂದು ರನ್ ಗಳಿಸಿದರು. ಮುಂದಿನ ಎಸೆತದಲ್ಲಿ ಹರ್ಷಲ್ ಮಾರ್ಕ್ ವುಡ್ ಅವರನ್ನು ಔಟ್ ಮಾಡಿದರು. ಮೂರನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇದಾದ ನಂತರ, ಬಿಷ್ಣೋಯ್ ನಾಲ್ಕನೇ ಎಸೆತದಲ್ಲಿಯೂ ಸಿಂಗಲ್ ಗಳಿಸಿದರು. ಐದನೇ ಎಸೆತದಲ್ಲಿ ಹರ್ಷಲ್ ಉನದ್ಕತ್ ಅವರನ್ನು ಔಟ್ ಮಾಡಿದರು. ನಂತರ ಬಂದ ಅವೇಶ್ ಖಾನ್ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ರನ್ ಗಳಿಸಿದ್ದಾರೆ.
ಈ ಗೆಲುವಿನ ನಂತರ ಗೌತಮ್ ಗಂಭೀರ್ ತಾಳ್ಮೆ ಕಳೆದುಕೊಂಡಿದ್ದರು. ಡಗ್ ಔಟ್ನಲ್ಲಿ ಕುಳಿತಿದ್ದ ಗಂಭೀರ್ ವಿಭಿನ್ನ ಪ್ರತಿಕ್ರಿಯೆ ನೀಡಿದ್ದರು. ಗೆಲುವಿನ ನಂತರ ಎದ್ದು ನಿಂತ ಅವರು, ಉತ್ಸಾಹದಲ್ಲಿ ಮುಷ್ಟಿ ಹಿಡಿದು, ಗಾಳಿಯಲ್ಲಿ ಗುದ್ದಿದಂತೆ ಮಾಡಿದರು. ಅಷ್ಟೇ ಅಲ್ಲದೆ, ಶ್…ಸೈಲೆನ್ಸ್ ಎಂದು ಸೂಚನೆ ಕೊಟ್ಟಂತೆ ಕಂಡಿತು. ಈ ವಿಡಿಯೋ ಕಂಡ ಆರ್ ಸಿ ಬಿ ಫ್ಯಾನ್ಸ್ ಕೋಪಗೊಂಡಿದ್ದಾರೆ.
Gautam Gambhir to RCB Fans !! 🔥
— Tanay Vasu (@tanayvasu) April 10, 2023
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ ಗೆಲುವು ದಾಖಲಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಐಪಿಎಲ್ 2023 ರಲ್ಲಿ, ಲಕ್ನೋ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ, ಅದರಲ್ಲಿ 3 ಗೆದ್ದಿದೆ ಮತ್ತು ಒಂದು ಸೋತಿದೆ. ಲಕ್ನೋ ಏಪ್ರಿಲ್ 1 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನೊಂದಿಗೆ ಪ್ರಾರಂಭಿಸಿತು. ಆದರೆ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
ಇದನ್ನೂ ಓದಿ: Anjeer: ಪ್ರತೀದಿನ ನೆನೆಸಿದ ಅಂಜೂರ ಸೇವಿಸಿದರೆ ಸಿಗುವ ಆರೋಗ್ಯ ಪ್ರಯೋಜನ ಒಂದಲ್ಲ.. ಎರಡಲ್ಲ..!
ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ವಿರುದ್ಧ ಗೆಲುವು ದಾಖಲಿಸಿದ ನಂತರ, ಲಕ್ನೋ ತಂಡವು ಬಲವಾದ ಪುನರಾಗಮನ ಮಾಡಲು ಸಾಧ್ಯವಾಯಿತು. ಇದೀಗ ಕೆಎಲ್ ರಾಹುಲ್ ಪಡೆ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಲುಪಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.