ಸೋಮಣ್ಣಗೆ ಡಬಲ್ ಹೊಣೆ: ಸಿದ್ದು ಮಣಿಸುವ ಜೊತೆಗೆ ಚಾಮರಾಜನಗರದಲ್ಲಿ ಅರಳಬೇಕಿದೆ ಕಮಲ

ತೀವ್ರ ಕುತೂಹಲ, ಜಿದ್ದಾಜಿದ್ದಿನಿಂದ ಕೂಡಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಯಾಗಿದ್ದು ಚಾಮರಾಜನಗರ ಮತ್ತು ವರುಣದಲ್ಲಿ ವಿ.ಸೋಮಣ್ಣ ಬಿಜೆಪಿ ಕಲಿಯಾಗಿದ್ದಾರೆ.

Written by - Zee Kannada News Desk | Last Updated : Apr 11, 2023, 10:46 PM IST
  • ಮಗ ಹಾಗೂ ತಮಗೆ ಸೇರಿ ಎರಡು ಟಿಕೆಟ್ ಗಳನ್ನು ವಿ. ಸೋಮಣ್ಣ ಕೇಳಿದ್ದರು.
  • ಆದರೆ, ಹೈ ಕಮಾಂಡ್ ಏನೋ‌ 2 ಟಿಕೆಟ್ ಕೊಟ್ಟಿದೇ ಆದರೆ ಸೋಮಣ್ಣ ಅವರೇ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ
ಸೋಮಣ್ಣಗೆ ಡಬಲ್ ಹೊಣೆ: ಸಿದ್ದು ಮಣಿಸುವ ಜೊತೆಗೆ ಚಾಮರಾಜನಗರದಲ್ಲಿ ಅರಳಬೇಕಿದೆ ಕಮಲ title=

ಚಾಮರಾಜನಗರ: ತೀವ್ರ ಕುತೂಹಲ, ಜಿದ್ದಾಜಿದ್ದಿನಿಂದ ಕೂಡಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಯಾಗಿದ್ದು ಚಾಮರಾಜನಗರ ಮತ್ತು ವರುಣದಲ್ಲಿ ವಿ.ಸೋಮಣ್ಣ ಬಿಜೆಪಿ ಕಲಿಯಾಗಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಈ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದರೂ ಕಾಂಗ್ರೆಸ್  ಭದ್ರ ನೆಲೆಯೂರಿದೆ. ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲೇ ಬೇಕೆಂದು ಪಣ ತೊಟ್ಟಿರುವ ಕೇಸರಿಪಡೆಗೆ ವಿ.ಸೋಮಣ್ಣ ಸಾರಥಿಯಾಗಿದ್ದು ಎರಡು ಟಿಕೆಟ್ ಗಳನ್ನು ಕೊಡುವ ಮೂಲಕ ವಸತಿ ಸಚಿವಗೆ ಸೋಮಣ್ಣಗೇ ಡಬಲ್ ಹೊಣೆ ಕೊಟ್ಟಿದೆ.

ಇದನ್ನೂ ಓದಿ: Karnataka Assembly Election 2023: ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಕೇಳಿದ್ದು 2 ಬಂದಿದ್ದೂ 2 ಆದರೂ....!

ಮಗ ಹಾಗೂ ತಮಗೆ ಸೇರಿ ಎರಡು ಟಿಕೆಟ್ ಗಳನ್ನು ವಿ. ಸೋಮಣ್ಣ ಕೇಳಿದ್ದರು. ಆದರೆ, ಹೈ ಕಮಾಂಡ್ ಏನೋ‌ 2 ಟಿಕೆಟ್ ಕೊಟ್ಟಿದೇ ಆದರೆ ಸೋಮಣ್ಣ ಅವರೇ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕಾದ ಅನಿವಾರ್ಯ ಮತ್ತು ತಮ್ಮ ವರ್ಚಸ್ಸನ್ನು ತೋರಬೇಕಾದ ಕಾಲ ಎದುರಾಗಿದೆ.ಲಿಂಗಾಯತ ಸಮುದಾಯದ ನಾಯಕನಾಗಿರುವ ವಿ.ಸೋಮಣ್ಣ ಕಾಂಗ್ರೆಸ್ ನ ಮಾಸ್ ಲೀಡರ್ ಸಿದ್ದರಾಮಯ್ಯ ಅವರನ್ನು ಮಣಿಸುವ ಜೊತೆಗೆ  ಕಳೆದ ಮೂರು ಸಾಲಿನಿಂದ ಕೈ ವಶದಲ್ಲಿರುವ ಚಾಮರಾಜನಗರದಲ್ಲಿ ಕಮಲ‌ ಅರಳಿಸುವ ಡಬಲ್ ಟಾರ್ಗೆಟ್ ಕೊಟ್ಟಿದೆ ಮೋದಿ ಪಡೆ.

ಸಾಂಪ್ರದಾಯಿಕ ಎದುರಾಳಿಗೆ ಟಿಕೆಟ್: 

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಲ್ಲಿ ಆರಂಭದಿಂದಕೂ ಎರಡು ಕುಟುಂಬಗಳ‌ ನಡುವೆಯೇ ಫೈಟ್ ನಡೆಯಲಿದ್ದು ಇದು ಈ ಬಾರಿಯೂ ಮುಂದುವರೆಯಲಿಸೆ. ಕಾಂಗ್ರೆಸ್ ನಿಂದ ಆರ್.ನರೇಂದ್ರ ಕಣ್ಣಕ್ಕಿಳಿಯಲಿದ್ದು  ಬಿಜೆಪಿಯಿಂದ ಸಾಂಪ್ರದಾಯಿಕ ಎದುರಾಳಿ ಡಾ.ಪ್ರೀತಂ ನಾಗಪ್ಪ ಕಣಕ್ಕಿಳಿಸಲು ಬಿಜೆಪಿ ಗ್ರೀನ್ ಸಿಗ್ನಲ್ ಕೊಟ್ಟಿದೆ.ಇನ್ನು, ನಿರೀಕ್ಷೆಯಂತೆ ಕೊಳ್ಳೇಗಾಲದಲ್ಲಿ ಹಾಲಿ ಶಾಸಕ ಎನ್. ಮಹೇಶ್ ಮತ್ತು‌ ಗುಂಡ್ಲುಪೇಟೆಯಲ್ಲಿ ಹಾಲಿ ಶಾಸಕ‌ ನಿರಂಜನಕುಮಾರ್ ಕಮಲ ಕಲಿಗಳಾಗಿ ರಣರಂಗಕ್ಕೆ ಇಳಿಯಲಿದ್ದಾರೆ.

ಇದನ್ನೂ ಓದಿ: "ಯಾವುದೇ ಕಾರಣಕ್ಕೂ ಅಮುಲ್ ನಲ್ಲಿ ನಂದಿನಿ ವಿಲೀನ ಆಗುವುದಿಲ್ಲ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News