China Claim On Moon: ಚಂದ್ರನ ಮೇಲೆ ಚೀನಾ 'ಕಬ್ಜಾ', ಶೀಘ್ರದಲ್ಲೇ ವಸಾಹತ್ತು ನಿರ್ಮಾಣ ಕಾರ್ಯ ಆರಂಭ!

Chinese Moon Mission: ಚಂದ್ರನ ಮೇಲೆ ಭೂಮಿ ಜನ ಖರೀದಿಸುವ ಸುದ್ದಿ ಇದೀಗ ಹಳೆಯದಾಗಿದೆ, ಆದರೆ ಚೀನಾದ ಮನಸ್ಸಿನಲ್ಲಿ ಇದಕ್ಕೂ ಮುಂದಿನ ಆಲೋಚನೆಗಳು ನಡೆಯುತ್ತಿರುವುದು ಇದೀಗ ಭಾರಿ ಆಶ್ಚರ್ಯಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಚಂದ್ರನ ಮೇಲೆ ಮನೆ ನಿರ್ಮಿಸಲು ಚೀನಾ ಸಿದ್ಧತೆ ನಡೆಸಿದೆ. ಬನ್ನಿ ಚೀನಾದ ಮುಂದಿನ ಮಾಸ್ಟರ್ ಪ್ಲಾನ್ ಏನಾಗಿದೆ ಎಂಬುದನ್ನೂ ತಿಳಿದುಕೊಳ್ಳೋಣ,   

Written by - Nitin Tabib | Last Updated : Apr 13, 2023, 09:52 PM IST
  • ಚೈನೀಸ್ ಸೂಪರ್ ಮ್ಯಾಸನ್ಸ್’ ಎಂದು ಹೆಸರಿಸಲಾಗಿರುವ ರೋಬೋಟ್ ಗಳ ಮೂಲಕ
  • ಚೀನಾ ಚಂದ್ರನ ಮೇಲೆ ಇಟ್ಟಿಗೆಗಳನ್ನು ತಯಾರಿಸಲು ಸಿದ್ಧತೆ ನಡೆಸಿದೆ ಎಂದು ಹೇಳಿದರೆ ನೀವು ಆಶ್ಚರ್ಯಚಕಿತರಾಗುವಿರಿ.
  • ಈ ಇಟ್ಟಿಗೆಗಳನ್ನು ತಯಾರಿಸಲು ಚಂದ್ರನ ಮಣ್ಣನ್ನು ಬಳಸಲಾಗುವುದು.
China Claim On Moon: ಚಂದ್ರನ ಮೇಲೆ ಚೀನಾ 'ಕಬ್ಜಾ', ಶೀಘ್ರದಲ್ಲೇ ವಸಾಹತ್ತು ನಿರ್ಮಾಣ ಕಾರ್ಯ ಆರಂಭ! title=
ಚಂದ್ರನ ಮೇಲೆ ಚೀನಾದ ಲೂನರ್ ಬೇಸ್! (ಸಾಂಧರ್ಭಿಕ ಚಿತ್ರ)

China Claim Moon As Territory: ಚೀನಾದ ವಿಸ್ತಾರವಾಗಿ  ನೀತಿಯು ಈ ಮೊದಲು ಮೊದಲು ಕೇವಲ ಭೂಮಿಗೆ ಮಾತ್ರ ಸೀಮಿತವಾಗಿತ್ತು.  ಆದರೆ ಇದೀಗ ಅದು ಬಾಹ್ಯಾಕಾಶವನ್ನು ತಲುಪಿದೆ. ಮೂಲಗಳನ್ನು ನಂಬುವುದಾದರೆ, ಚೀನಾ ಚಂದ್ರನ ಮೇಲೆ ಮನೆ ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ. ಡ್ರ್ಯಾಗನ್ ಆದಷ್ಟು ಬೇಗ ಚಂದ್ರನ ಮೇಲೆ ನೆಲೆಸಲು ವಸಾಹತ್ತುಗಳನ್ನು ಸ್ಥಾಪಿಸಲಿದೆ ಎನ್ನಲಾಗಿದೆ. ತನ್ನ ಯೋಜನೆಯನ್ನು ಯಶಸ್ವಿಗೊಳಿಸಲು ಚೀನಾ ಈಗಾಗಲೇ ಸಿದ್ಧತೆ ಕೂಡ ಆರಂಭಿಸಿದೆ ಎನ್ನಲಾಗುತ್ತಿದೆ. ಚಂದ್ರನ ಮಣ್ಣನ್ನು ಬಳಸಿಕೊಂಡು ಚಂದ್ರನ ಮೇಲೆ ಚೀನಾ ತನ್ನ ಲೂನಾರ್ ಮಿಷನ್ ನಿರ್ಮಿಸಲಿದೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಚೀನಾದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಇತ್ತೀಚೆಗೆ 100 ಕ್ಕೂ ಹೆಚ್ಚು ವಿಜ್ಞಾನಿಗಳು, ಬಾಹ್ಯಾಕಾಶ ಗುತ್ತಿಗೆದಾರರು ಮತ್ತು ಸಂಶೋಧಕರ ಸಭೆಯನ್ನು ಚೀನಾದ ವುಹಾನ್ ನಗರದಲ್ಲಿ ನಡೆಸಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಚೀನಾದ ಮುಂದಿನ ಯೋಜನೆಗಳ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ.

ಇದನ್ನೂ ಓದಿ-Elon Musk In China: ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಗೆ ಬೆಚ್ಚಿ ಬಿದ್ದ ಚೀನಾ ವತಿಯಿಂದ 13000 ಉಪಗ್ರಹಗಳ ಉಡಾವಣೆ!

ರೋಬೋಟ್‌ಗಳು ಇಟ್ಟಿಗೆಗಳನ್ನು ತಯಾರಿಸಲಿವೆ
ಚೈನೀಸ್ ಸೂಪರ್ ಮ್ಯಾಸನ್ಸ್’ ಎಂದು ಹೆಸರಿಸಲಾಗಿರುವ ರೋಬೋಟ್ ಗಳ ಮೂಲಕ ಚೀನಾ ಚಂದ್ರನ ಮೇಲೆ ಇಟ್ಟಿಗೆಗಳನ್ನು ತಯಾರಿಸಲು ಸಿದ್ಧತೆ ನಡೆಸಿದೆ ಎಂದು ಹೇಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಈ ಇಟ್ಟಿಗೆಗಳನ್ನು ತಯಾರಿಸಲು ಚಂದ್ರನ ಮಣ್ಣನ್ನು ಬಳಸಲಾಗುವುದು. ಈ ಯೋಜನೆಯನ್ನು ಪೂರ್ಣಗೊಳಿಸಲು ಅವರಿಗೆ ಬಹಳ ಕಡಿಮೆ ಸಮಯವನ್ನು ನೀಡಲಾಗಿದೆ ಎಂದು ಚೀನಾದ ಸಂಶೋಧಕರು ಹೇಳಿದ್ದಾರೆ, ಇದರಲ್ಲಿ ಅವರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಚಂದ್ರನ ಮೇಲೆ ಆಗಾಗ ಭೂಕಂಪಗಳು ಸಂಭವಿಸುತ್ತವೆ, ಗುರುತ್ವಾಕರ್ಷಣೆ ಕಡಿಮೆ ಇರುತ್ತದೆ ಮತ್ತು ಗಾಳಿ ಹಾಗೂ ನೀರು ಇರುವುದಿಲ್ಲ, ಇದರಿಂದಾಗಿ ಚಂದ್ರನ ಮೇಲೆ ಇಟ್ಟಿಗೆಗಳನ್ನು ತಯಾರಿಸುವುದು ಒಂದು ಸವಾಲಿನ ಸಂಗತಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ-Today's Viral Video: ಪ್ರೀತಿಯ ಕುರಿತು ಪ್ರಶ್ನಿಸಿದಾಗ ಸಪ್ಪೆ ಮುಖ ಮಾಡಿಕೊಂಡು ರೋಬೋಟ್ ಎಮೇಕಾ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ...

ಈ ಕೆಲಸವನ್ನು 2028 ರಲ್ಲಿ ಪೂರ್ಣಗೊಳಿಸಲಾಗುವುದು ಎನ್ನಲಾಗಿದೆ
ಚೀನಾ ತನ್ನ ಚೇಂಜ್-8 ಮಿಷನ್ ಅನ್ನು 2028 ರಲ್ಲಿ ಪ್ರಾರಂಭಿಸುವುದಾಗಿ ಹೇಳಿದೆ ಮತ್ತು ಈ ಮಿಷನ್ ಮೂಲಕ 'ಚೈನೀಸ್ ಸೂಪರ್ ಮ್ಯಾಸನ್ಸ್' ರೋಬೋಟ್‌ಗಳನ್ನು ಚಂದ್ರನ ಮೇಲೆ ಇಳಿಸಲಾಗುವುದು ಎನ್ನಲಾಗಿದೆ. ಇದಲ್ಲದೇ ಮುಂಬರುವ 2025ರಲ್ಲಿ ಚೀನಾ ಮತ್ತೊಂದು ಮಿಷನ್ ನಿರ್ಧರಿಸಿತ್ತು, ಅದರಲ್ಲಿ ಚೀನಾ ಚಂದ್ರನಿಂದ ಭೂಮಿಗೆ ತರಲಾಗುವ ಮಣ್ಣಿನ ಪರೀಕ್ಷೆ ನಡೆಸಲಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News