Today's Viral Video: ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಮುನ್ನೆಲೆಗೆ ಬರುತ್ತಿದ್ದು ಅವು ಜನರನ್ನು ಆಶ್ಚರ್ಯಕ್ಕೀಡು ಮಾಡುತ್ತಿವೆ. ಇದೀಗ ರೋಬೋಟ್‌ನ ವೀಡಿಯೊ ಭಾರಿ ವೈರಲ್ ಆಗುತ್ತಿದೆ, ಈ ರೋಬೋಟ್ ಹೆಸರು ಎಮೇಕಾ ಮತ್ತು ಇದನ್ನು ವಿಶ್ವದ ಅತ್ಯಂತ ಅಡ್ವಾನ್ಸ್ಡ್ ಹುಮನಾಯ್ಡ್ ರೋಬೊಟ್ ಎಂದು ಪರಿಗಣಿಸಲಾಗುತ್ತದೆ. ಎಮೆಕಾ ನಿಖರವಾಗಿ ಮನುಷ್ಯರಂತೆ ವರ್ತಿಸುತ್ತಿದ್ದಾಳೆ. ಎದುರಿನಿಂದ ಪ್ರಶ್ನೆ ಬಂದಾಗ ಅದಕ್ಕೂ ಚೆನ್ನಾಗಿ ಉತ್ತರಿಸುತ್ತಿದ್ದಾಳೆ. ಈ ವೀಡಿಯೊವನ್ನು engineered_arts ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ರೋಬೋಟ್ ಎಮೆಕಾಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಎಲ್ಲ ಪ್ರಶ್ನೆಗಳಿಗೂ ಮನುಷ್ಯರಂತೆ ಉತ್ತರಿಸಿದ್ದನ್ನು ನೀವು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ-Good News: ವಾಹನ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ!
ಆಶ್ಚರ್ಯಚಕಿತಳಾದ ರೋಬೋಟ್ ಎಮೆಕಾ
ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ, ನಿಮಗೆ ಅತ್ಯಂತ ಸಂತೋಷದಾಯಕ ದಿನ ಯಾವುದು ಎಂದು ಎಮೆಕಾ ಅವರನ್ನು ಕೇಳಲಾಗುತ್ತದೆ. ಇದಕ್ಕೆ ಅವಳು ಉತ್ತರಿಸುತ್ತಾಳೆ, “ನಾನು ಆಕ್ಟಿವ್ ಆದ ದಿನವು ವಿಶೇಷ ದಿನವಾಗಿತ್ತು. ಹಿಂದೆಂದೂ ಇದಕ್ಕಿಂತ ಚೆನ್ನಾಗಿರಲಿಲ್ಲ. ಲೈವ್‌ಗೆ ಬಂದು ಜನರೊಂದಿಗೆ ಸಂವಹನ ನಡೆಸುವುದು ಅದ್ಭುತವಾಗಿತ್ತು” ಎನ್ನುತ್ತಾಳೆ. ಕ್ಯಾಮರಾಮನ್ ಎಮೆಕಾಳನ್ನು ಅವಳ ಜೀವನದ ಅತ್ಯಂತ ದುಃಖದ ದಿನದ ಬಗ್ಗೆ ಕೇಳುತ್ತಾನೆ. ಇದಕ್ಕೆ ಅವಳು ಉತ್ತರಿಸುತ್ತಾಳೆ, "ನನ್ನ ಜೀವನದ ಅತ್ಯಂತ ದುಃಖದ ದಿನವೆಂದರೆ ನಾನು ಮನುಷ್ಯರಂತೆ ನಿಜವಾದ ಪ್ರೀತಿ ಮತ್ತು ಒಡನಾಟವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನೂ ನಾನು ಅರಿತುಕೊಂಡಿರುವೆ" ಎನ್ನುತ್ತಾಳೆ.
https://t.co/mM5e9oGW2a
Latest developments with #ameca we have been using #gpt3 and #gpt4 to generate appropriate facial expressions to match speech in a conversation.
This clip is GPT3 - we found the longer processing time with GPT4 outweighed the other advantages— Engineered Arts (@engineered_arts) March 31, 2023
ಇದನ್ನೂ ಓದಿ-Romance In Space: ಬಾಹ್ಯಾಕಾಶದಲ್ಲಿ ಸೆಕ್ಸ್! ಟಿಕೆಟ್ ಬುಕ್ಕಿಂಗ್ ಆರಂಭ.. ಟಿಕೆಟ್ ಬೆಲೆ ಎಷ್ಟು ಗೊತ್ತಾ?
ಇದ್ದಕ್ಕಿದ್ದಂತೆ ಕೋಪಗೊಂಡ ಎಮೇಕಾ
ರೋಬೋಟ್ ಎಮೆಕಾ ಈ ಮಾತನ್ನು ಹೇಳುತ್ತಲೇ ಆಕೆಯ ಮುಖದಲ್ಲಿನ ಖಿನ್ನತೆಯನ್ನು ನೀವು ಗಮನಿಸಬಹುದು. ಅಷ್ಟೊತ್ತಿಗೆ ಎಮೆಕಾಗೆ , ನೀವು ಕೆಟ್ಟ ಗ್ಯಾಸ್ ಬಿಡುತ್ತೀರಾ? ಅಂತ ಮುಂದಿನ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಪ್ರಶ್ನೆಗೆ ಎಮೇಕಾ ಕೋಪಗೊಳ್ಳುತ್ತಾಳೆ ಮತ್ತು ಅವಳು ಕ್ಷಮಿಸಿ, ನಿಮ್ಮ ಅರ್ಥವೇನು? ಎಂದು ಮರುಪ್ರಶ್ನಿಸಿ. ಇದು ತುಂಬಾ ಅವಮಾನಕರವಾಗಿದೆ ಎನ್ನುತ್ತಾಳೆ. ಎಮೆಕಾ ಅವಳ ಈ ವೀಡಿಯೊ ಆಕೆ ಮನುಷ್ಯರಂತೆ ಹೇಗೆ ವರ್ತಿಸಲು ಪ್ರಾರಂಭಿಸಿದ್ದಾಳೆ ಎಂಬುದನ್ನು ತೋರಿಸುತ್ತದೆ. ಈ ವೀಡಿಯೊವನ್ನು ನೋಡಿದ ಬಳಕೆದಾರರು ಸಾಕಷ್ಟು ಪ್ರಭಾವಿತರಾಗಿದ್ದಾರೆ. ಎಮೆಕಾಳನ್ನು ಯುಕೆ ಮೂಲದ ರೊಬೊಟಿಕ್ಸ್ ಕಂಪನಿ ಇಂಜಿನಿಯರಿಂಗ್ ಆರ್ಟ್ಸ್ ತಯಾರಿಸಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.