Crime News: ಚುನಾವಣೆ ಬೆನ್ನಲೇ ಹೆಚ್ಚಾಯಿತ್ತು ನಗರದಲ್ಲಿ ಗಡಿಪಾರಾದ ರೌಡಿಗಳ ಅಟ್ಟಹಾಸ !

Crime: ಚುನಾವಣೆ ಹಿನ್ನೆಲೆ ನಗರದ ಕೆಲವು ರೌಡಿಗಳನ್ನು ಗಡಿಪಾರು ಮಾಡಲಾಗಿತ್ತು. ಆದರೆ ಇದೀಗ ಗಡಿಪಾರು ಆದ ರೌಡಿಗಳು ನಗರಕ್ಕೆ ಬಂದು ರೌಡಿಸಂ ಮಾಡ್ತಿರೊ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

Written by - Zee Kannada News Desk | Last Updated : Apr 17, 2023, 12:27 PM IST
  • ಚುನಾವಣೆ ಹಿನ್ನೆಲೆ ನಗರದ ಎಲ್ಲಾ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿರೋ ಪೊಲೀಸರು
  • ಗಡಿಪಾರಾಗಿ ಆಗಿರೋ ರೌಡಿಶೀಟರ್ ನಗರದಲ್ಲಿ ಪ್ರತ್ಯಕ್ಷ
  • ಗಡಿಪಾರು ಆದ ರೌಡಿ ನಗರದಲ್ಲೇ ರಾಜಾರೋಷವಾಗಿ ರೌಡಿಸಂ
Crime News: ಚುನಾವಣೆ ಬೆನ್ನಲೇ ಹೆಚ್ಚಾಯಿತ್ತು ನಗರದಲ್ಲಿ ಗಡಿಪಾರಾದ ರೌಡಿಗಳ ಅಟ್ಟಹಾಸ ! title=

ಬೆಂಗಳೂರು: ಚುನಾವಣೆ ಹಿನ್ನೆಲೆ ನಗರದ ಕೆಲವು ರೌಡಿಗಳನ್ನು ಗಡಿಪಾರು ಮಾಡಲಾಗಿತ್ತು. ಆದರೆ ಇದೀಗ ಗಡಿಪಾರು ಆದ ರೌಡಿಗಳು ನಗರಕ್ಕೆ ಬಂದು ರೌಡಿಸಂ ಮಾಡ್ತಿರೊ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಈ ನಿಟ್ಟಿನಲ್ಲಿ ನಗರದ ಎಲ್ಲಾ ರೌಡಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.

ಮಂಜ ಅಲಿಯಾಸ್  ಮೋಲಾ ಎಂಬ ರೌಡಿಶೀಟರ್ ನ್ನು 2022 ರಲ್ಲಿ ಈಶಾನ್ಯ ವಿಭಾಗದ ಪೊಲೀಸರು ಗಡಿಪಾರು ಮಾಡಿದ್ದರು. ಇದೀಗ ಮತ್ತೆ ದಾದಗಿರಿ ಮಾಡ್ತಿರೊ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಎದೆ ಮೇಲೆ ಲವ್ವರ್ ಫೋಟೋ, ಹೆಸರು ಟ್ಯಾಟೋ : ಪ್ರಿಯತಮೆ ಕೊಂದು ಪೀಸ್ ಪೀಸ್ ಮಾಡ್ಬೇಕು ಎಂದುಕೊಂಡಿದ್ದ..! 

ಮಂಜ‌ ಅಲಿಯಾಸ್ ಮೋಲಾ ಯಾರು..? 

ರೌಡಿ ಮಂಜ ಎಂಬುವನು ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗ್ತಿದ್ದ ಎಂದು 2022 ರಲ್ಲಿ ಈಶಾನ್ಯ ವಿಭಾಗದ ಪೊಲೀಸರು ಮೋಲಾನನ್ನ ಗಡಿಪಾರು ಮಾಡಿದ್ದರು.   2019 ರಲ್ಲಿ  ಗಣೇಶ ವಿಸರ್ಜನೆ ವೇಳೆ ಶೋಭ ಪತಿಯ ಆಟೋವನ್ನು ದ್ವಂಸ ಮಾಡಿದ್ದನು. ಇದಾದ ಬಳಿಕ ಜೈಲಿಗೂ‌ ಕಳುಹಿಸಿದ್ದು ಜಾಮೀನಿನ ಮೇಲೆ ಹೊರಗಡೆ ಬಂದಿದ್ದೇ ಗಡಿಪಾರು ಮಾಡಲಾಗಿತ್ತು.

ಇದನ್ನೂ ಓದಿ: ಈಜಲು ಹೋದ ನಾಲ್ವರು ಯುವಕರು ನೀರುಪಾಲು

ಅಷ್ಟೆ ಅಲ್ಲದೇ ನಗರದ ಸುಮಾರು 10 ಕ್ಕೂ ಅಧಿಕ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ರಾಬರಿ, ಡಕಾಯತಿ ಸೇರಿದಂತೆ ಹಲವು ಕೇಸ್ ಗಳು ಇವನ ವಿರುದ್ಧ  ಕೇಸ್  ದಾಖಲಾಗಿದ್ದವು. ಈ ಹಿನ್ನಲೆ  ಪ್ರತಿ  ಚುನಾವಣೆ ವೇಳೆಯೂ ಆತನನ್ನು  ಗಡಿಪಾರು  ಮಾಡುತ್ತಿದ್ದರು.

ಅಷ್ಟಾಗಿಯೂ  ಗಡಿಪಾರಿಗೆ ಡೋಂಟ್‌ ಕೇರ್‌ ಎನ್ನದೇ ಮತ್ತೆ  ಹಳೆ ದ್ವೇಷಕ್ಕೆ ಕಳೆದ ವಾರ ಅಮೃತಹಳ್ಳಿಯಲ್ಲಿ ತೇಜಸ್ ಹಾಗೂ ಅವರ ತಾಯಿ ಶೋಭ ಇಬ್ಬರ ಮೇಲೆ‌ ಹಲ್ಲೆ ನಡಿಸಿದ್ದಾನೆ. ಗರಕ್ಕೆ ಬಂದು ರೌಡಿಸಂ ಮಾಡ್ತಿರೊ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News