'ಮೇರಾ ಪರಿವಾರ್ ಭಾಜಪ ಪರಿವಾರ್' ಅಭಿಯಾನಕ್ಕೆ ಚಾಲನೆ

ಇಂದಿನಿಂದ ಬಿಜೆಪಿ ಮೆಗಾ ಕ್ಯಾಂಪೇನ್. 5 ಕೋಟಿಗೂ ಹೆಚ್ಚು ಕಾರ್ಯಕರ್ತರ ಮನೆ ಮೇಲೆ ಹಾರಾಡಲಿದೆ ಬಿಜೆಪಿ ಧ್ವಜ.  

Last Updated : Feb 12, 2019, 11:04 AM IST
'ಮೇರಾ ಪರಿವಾರ್ ಭಾಜಪ ಪರಿವಾರ್' ಅಭಿಯಾನಕ್ಕೆ ಚಾಲನೆ  title=

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಪ್ರಾರಂಭಿಸಿದ್ದು, ಇಂದಿನಿಂದ 'ಮೇರಾ ಪರಿವಾರ್ ಭಾಜಪ ಪರಿವಾರ್' ಎಂಬ ಮೆಗಾ ಕ್ಯಾಂಪೇನ್ ಪ್ರಾರಂಭಿಸಿದೆ. ಸುಮಾರು ಒಂದು ತಿಂಗಳು ಈ ಅಭಿಯಾನ ನಡೆಯಲಿದ್ದು ದೇಶಾದ್ಯಂತ  5 ಕೋಟಿ ಮನೆಗಳಲ್ಲಿ ಪಕ್ಷ ಧ್ವಜಗಳನ್ನು ಹಾಕುವ ಉದ್ದೇಶವನ್ನು ಬಿಜೆಪಿ ಹೊಂದಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಕ್ಯಾಂಪೇನ್ ಗೆ ಅಹಮದಾಬಾದ್ ನಲ್ಲಿ ಪಕ್ಷದ ಧ್ವಜವನ್ನು ಹಾರಿಸಿ ಅವರ ಮನೆ ಮೇಲೆ ಪಕ್ಷದ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು. ಪಂಡಿತ್ ದೀನ್ ದಯಾಳ್ ಉಪಾಧ್ಯ ಆಡಿಟೋರಿಯಂನಲ್ಲಿ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಈ ಸಂದರ್ಭದಲ್ಲಿ ಭಾ.ಜ.ಪ ಅಧ್ಯಕ್ಷ ಅಮಿತ್ ಶಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ಇದೇ ಸಂದರ್ಭದಲ್ಲಿ ಆಡಿಯೋ ಸಂದೇಶವನ್ನು ಪಕ್ಷ ಬಿಡುಗಡೆಗೊಳಿಸಿದ್ದು, ನರೇಂದ್ರ ಮೋದಿಯವರನ್ನು ಮತ್ತೆ ಈ ದೇಶದ ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಪಕ್ಷದ ಬಾವುಟಗಳನ್ನು ಹಾರಿಸಿ ಬಳಿಕ ಅವುಗಳ ಫೊಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಅಮಿತ್ ಶಾ ಅವರು ಮನವಿ ಮಾಡಿಕೊಂಡಿದ್ದಾರೆ.

ಸದ್ಯ #MeraPariwarBhajapaPariwar ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ.

ಕರ್ನಾಟಕದಲ್ಲಿ ವಿಧಾನ ಸಭೆ ವಿರೋಧ ಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್‌.ಯಡಿಯೂರಪ್ಪನವರು ತಮ್ಮ ಮನೆಗೆ ಬಿಜೆಪಿ ಧ್ವಜ ಕಟ್ಟುವ ಮೂಲಕ "ನಮ್ಮ ಮನೆ ಬಿಜೆಪಿ ಮನೆ" ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
 

Trending News