ದುಬೈ ಜಾಗತಿಕ ಶೃಂಗಸಭೆ: ಮುಷರಫ್, ಫವಾದ್ ಚೌಧರಿ ಆಹ್ವಾನ ಹಿಂತೆಗೆದುಕೊಂಡ ವಿಯಾನ್

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಈಗ WION ಸಂಸ್ಥೆ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸುವ ಪಾಕಿಸ್ತಾನದ ಅತಿಥಿಗಳ ಆಹ್ವಾನವನ್ನು ಹಿಂತೆಗೆದುಕೊಂಡಿದೆ. ಈ ದಕ್ಷಿಣ ಏಷ್ಯಾ ಆವೃತ್ತಿಯ ಶೃಂಗಸಭೆ ಫೆಬ್ರವರಿ 20 ರಂದು ದುಬೈನಲ್ಲಿ ನಡೆಯಲಿದೆ.

Last Updated : Feb 17, 2019, 11:38 AM IST
ದುಬೈ ಜಾಗತಿಕ ಶೃಂಗಸಭೆ: ಮುಷರಫ್, ಫವಾದ್ ಚೌಧರಿ ಆಹ್ವಾನ ಹಿಂತೆಗೆದುಕೊಂಡ ವಿಯಾನ್   title=

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಈಗ WION ಸಂಸ್ಥೆ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸುವ ಪಾಕಿಸ್ತಾನದ ಅತಿಥಿಗಳ ಆಹ್ವಾನವನ್ನು ಹಿಂತೆಗೆದುಕೊಂಡಿದೆ. ಈ ದಕ್ಷಿಣ ಏಷ್ಯಾ ಆವೃತ್ತಿಯ ಶೃಂಗಸಭೆ ಫೆಬ್ರವರಿ 20 ರಂದು ದುಬೈನಲ್ಲಿ ನಡೆಯಲಿದೆ.

"ಈ ಘೋರ ದಾಳಿ ನಿಜಕ್ಕೂ ಉಭಯ ದೇಶಗಳ ನಡುವಿನ ಭಾಂಧ್ಯವ್ಯವನ್ನು ದುರ್ಬಲಗೊಳಿಸಿದೆ.ಅಲ್ಲದೆ ಪಾಕಿಸ್ತಾನದೊಂದಿಗೆ ಸಾಮೂಹಿಕ ಸಮೃದ್ಧಿಯ ಕುರಿತ ಯಾವುದೇ ಚರ್ಚೆಯು ಅಸಮರ್ಥನೀಯವಾಗಿದೆ ಎಂದು ನಾವು ತಿಳಿದಿದ್ದೇವೆ" ಎಂದು ವಿಯಾನ್ ಪುಲ್ವಾಮಾ ಉಗ್ರ ದಾಳಿಯ ನಂತರ ಹೇಳಿಕೆ ನೀಡಿದೆ.ಈ ಶೃಂಗಸಭೆಗೆ ಆಹ್ವಾನಿತರಲ್ಲಿ ಒಬ್ಬರಾದ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಫವಾದ್ ಚೌಧರಿ ಅವರ ಆಹ್ವಾನವನ್ನು ಹಿಂತೆಗೆದುಕೊಳ್ಳಲಾಗಿದೆ.ಪುಲ್ವಾಮಾ ದಾಳಿಯ ವಿಚಾರವಾಗಿ ಅವರು ನೀಡಿರುವ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ವಿಯಾನ್ ಹೇಳಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್, ಭಾರತಕ್ಕೆ ಪಾಕಿಸ್ತಾನದ ಮಾಜಿ ಹೈ ಕಮಿಷನರ್ ರಾದ ಶ್ರೀ ಅಬ್ದುಲ್ ಬಾಸಿತ್ ಮತ್ತು ಪಾಕಿಸ್ತಾನದ ಮಾಜಿ ವಿದೇಶಾಂಗ ಕಾರ್ಯದರ್ಶಿ ಶ್ರೀ ಸಲ್ಮಾನ್ ಬಶೀರ್ ಸಹ ಈಗ ಶೃಂಗಸಭೆಯ ಭಾಗವಾಗಿಲ್ಲ.ಇದರ ನಡುವೆ ದಕ್ಷಿಣ ಏಷ್ಯಾದ ಸಾಮೂಹಿಕ ಸಾಮರ್ಥ್ಯ, ಆಯಕಟ್ಟಿನ ಸಮತೋಲನಗಳು ಮತ್ತು ಪ್ರದೇಶದ ಮೈತ್ರಿಗಳು, ಭಾರತ-ಮಾಲ್ಡೀವ್ಸ್ ಸಹಭಾಗಿತ್ವ, ಸುಸ್ಥಿರ ಬೆಳವಣಿಗೆ, ರಾಷ್ಟ್ರದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮತ್ತು ಮಾಧ್ಯಮದ ಬದಲಾಗುತ್ತಿರುವ ಪಾತ್ರ ಇವೆಲ್ಲ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ.

ವಿಯಾನ್ ಸದಾ ಭಾರತದ ದೃಷ್ಟಿಕೋನವನ್ನು ಜಗತ್ತಿಗೆ ಪ್ರಸ್ತುತ ಪಡಿಸಲು ಬದ್ಧವಾಗಿದೆ, ಮತ್ತು ಅದು ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಮತ್ತು ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಹಿಂಜರಿಯುವುದಿಲ್ಲ ಎಂದು ಹೇಳಿಕೆ ನೀಡಿದೆ. ಇದೇ ವೇಳೆ ಅದು ಪುಲ್ವಾಮಾದ ದಾಳಿಯಲ್ಲಿ ಬಳಿಯಾದ ಹುತಾತ್ಮ ಸೈನಿಕರಿಗೆ ವಿಯಾನ್ ನಮನ ಸಲ್ಲಿಸಿದೆ.

Trending News