ತುಮಕೂರು : ಎಲ್ಲಾ ಜಿಲ್ಲೆಗಳಂತೆ ತುಮಕೂರು ಜಿಲ್ಲೆಯಲ್ಲಿಯೂ ಚುನಾವಣಾ ಹಣಾಹಣಿ ಜೋರಾಗಿಯೇ ಇದೆ. ತುಮಕೂರು ಜಿಲ್ಲೆಯಲ್ಲಿ ಒಟ್ಟು 11 ಮತ ಕ್ಷೇತ್ರಗಳು ಇವೆ. ತುಮಕೂರು ನಗರ, ತುಮಕೂರು ಗ್ರಾಮಾಂತರ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ತಿಟಪಟೂರು, ತುರುವೇಕೆರೆ, ಕುಣಿಗಲ್, ಗುಬ್ಬಿ . ಸದ್ಯ ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್, ಐದು ಮಂದಿ ಬಿಜೆಪಿ, ಮತ್ತು ಮೂವರು ಜೆಡಿಎಸ್ ಶಾಸಕರಿದ್ದಾರೆ. ಈ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಗೆಲುವು-ಸೋಲಿಗೆ ಕಾರಣವಾಗಬಹುದಾದ ಅಂಶಗಳೇನು? ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಹೇಗೆ ನೋಡೋಣ.
ಮತ ಕ್ಷೇತ್ರವಾರು ಚಿತ್ರಣ ಹೀಗಿದೆ :
ಚಿಕ್ಕನಾಯಕನಹಳ್ಳಿ ಕ್ಷೇತ್ರ :
ಕ್ಷೇತ್ರದ ರಾಜಕೀಯ ಇತಿಹಾಸ :
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಜೆ.ಸಿ ಮಾಧುಸ್ವಾಮಿ 10,277 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್ ಪಕ್ಷದ ಸಿ. ಬಿ ಸುರೇಶ್ ಬಾಬು 59,335 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು.
ಮಾಧುಸ್ವಾಮಿ ಗೆಲುವಿನ ಲೆಕ್ಕಚಾರ :
ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ಎರಡು ಬಾರಿ ಗೆಲುವು ಸಾಧಿಸಿದ್ದರು. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಬದಲಾವಣೆ ಬಯಸಿದ್ದು, ಮಾಧುಸ್ವಾಮಿಗೆ ಗೆಲುವಿಗೆ ಕಾರಣವಾಯ್ತು. ಇನ್ನು ಕಾಡುಗೊಲ್ಲ ಸಮುದಾಯದ ನಾಯಕ ಸಾಸಲು ಸತೀಶ್ ಗೆ ಟಿಕೆಟ್ ತಪ್ಪಿಸಿ ಕುಂಚಿಟಿಗ ಸಮುದಾಯದ ಮಾಜಿ ಸಚಿವ ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ನಿಗೆ ಕಾಂಗ್ರೆಸ್ ಟೆಕೆಟ್ ನೀಡಿತ್ತು. ಇದು
ಗೊಲ್ಲರನ್ನು ಕೆರಳಿಸಿತ್ತು. ಹಾಗಾಗಿ ಗೊಲ್ಲಸಮುದಾಯ 20 ಸಾವಿರಕ್ಕೂ ಹೆಚ್ಚು ಮತಗಳು ಸಂಪೂರ್ಣ ಬಿಜೆಪಿ ಪಾಲಾಯ್ತು. ಜೆಡಿಎಸ್ ಪಕ್ಷ ಸಂಪ್ರಾದಾಯಕ ಒಕ್ಕಲಿಗ ಮತಗಳು ಕಾಂಗ್ರೆಸ್ ಅಭ್ಯರ್ಥಿ ಸಂತೋಷಜಯಚಂದ್ರನಿಗೆ ವರ್ಗಾವಣೆಯಾದ ಪರಿಣಾಮವೂ ಜೆಡಿಎಸ್ ಸೋಲಿಗೆ ಕಾರಣ ಆಯ್ತು.
ಜಾತೀವಾರು ವಿವರ :
ಇಲ್ಲಿ ಕುರುಬ, ಲಿಂಗಾಯತ, ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕ.
ಮತ-ಜಾತಿ ಲೆಕ್ಕಾಚಾರ
ಒಟ್ಟು ಮತಗಳು-218923
ಮಹಿಳೆಯರು-110277
ಪುರುಷರು-108645
ಒಕ್ಕಲಿಗರು-40,000
ಲಿಂಗಾಯತ-55,000
ಕುರುಬರು-35,000
SC-ST-30,000
ಮುಸ್ಲಿಂ-15000
ಗೊಲ್ಲರು-18,000
ಇತರೆ-20973
ಕುರುಬ, ಲಿಂಗಾಯತ ಮತದಾರ ನಿರ್ಣಾಯಕ
ಅಖಾಡದಲ್ಲಿ ಇರುವವರು :
ಕಾಂಗ್ರೆಸ್ – ಕೆಎಸ್.ಕಿರಣ್ ಕುಮಾರ್
ಬಿಜೆಪಿ – ಜೆಸಿ.ಮಾಧುಸ್ವಾಮಿ
ಜೆಡಿಎಸ್ – ಸಿಬಿ. ಸುರೇಶ್ ಬಾಬು
ತಿಪಟೂರು ವಿಧಾನಸಭಾ ಕ್ಷೇತ್ರ :
2018ರ ಚುನಾವಣೆಯಲ್ಲಿ ಬಿಜೆಪಿಯ ಬಿ. ಸಿ ನಾಗೇಶ್ 61,383 ಮತಗಳನ್ನು ಪಡೆದು, 25,563 ಮತಗಳ ಅಂತರಿಂದ ಗೆಲುವು ಸಾಧಿಸಿದ್ದರು. ಇವರು ಕಾಂಗ್ರೆಸ್ ಪಕ್ಷದ ಕೆ. ಷಡಾಕ್ಷರಿ ವಿರುದ್ದ ಗೆಲುವು ಸಾಧಿಸಿದ್ದರು. ಇಲ್ಲಿ ಕೆ. ಷಡಾಕ್ಷರಿ ಪಡೆದ ಮತಗಳು 35,820.
ಬಿ. ಸಿ ನಾಗೇಶ್ ಗೆಲುವಿನ ಅಂಶಗಳು :
ಕಾಂಗ್ರೆಸ್ ಶಾಸಕ ಕೆ.ಷಡಾಕ್ಷರಿ ಕಾರ್ಯವೈಖರಿ ಬಗ್ಗೆ ಮತದಾರರಿಗೆ ಅಸಮಧಾನವಿತ್ತು. ಟಿಕೆಟ್ ತಡವಾಗಿ ನೀಡಿದ್ದು ಟಿಕೆಟ್ ಹಂಚಿಕೆಯಲ್ಲಿನ ಗೊಂದಲ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿತ್ತು. ಯಡಿಯೂರಪ್ಪ ಪರವಾಗಿದ್ದ ಲಿಂಗಾಯತ ಸಮುದಾಯ ಜೊತೆಗೆ ಅಹಿಂದಾ ಸಮುದಾಯ ಬಿಜೆಪಿ ಅಭ್ಯರ್ಥಿಗೆ ಮತ ನೀಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಈ ಪೈಕಿ ನಾಲ್ವರು ಪಕ್ಷೇತ್ರರ ಅಭ್ಯರ್ಥಿಗಳು ತಲಾ 10ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದು, ಬಿಜೆಪಿ ಅಭ್ಯರ್ಥಿಗೆ ಗೆಲುವಿಗೆ ಕಾರಣವಾಯ್ತು.
ತಿಪಟೂರು ವಿಧಾನಸಭಾ ಕ್ಷೇತ್ರ
ಮತ-ಜಾತಿ ಲೆಕ್ಕಾಚಾರ
ಒಟ್ಟು ಮತಗಳು-184278
ಮಹಿಳೆಯರು-94775
ಪುರುಷರು-89502
ಒಕ್ಕಲಿಗರು-20,000
ಲಿಂಗಾಯತ-68,000
ಕುರುಬರು-24000
ಮುಸ್ಲಿಂ-10000
ಗೊಲ್ಲರು-18000
ಇತರೆ-41387
ತಿಪಟೂರು ವಿಧಾನಸಭಾ ಕ್ಷೇತ್ರ :
ಪ್ರಬಲ ಲಿಂಗಾಯತ ಮತಗಳು, ಪ್ರತ್ಯೇಕ ಜಿಲ್ಲೆ ಹೋರಾಟ ಅಜೆಂಡಾ , ಹೊನ್ನವಳಿ ಏತನೀರಾವರಿ ಯೋಜನೆ , ತೆಂಗು ಬೆಳೆಗಾರರ ಸಮಸ್ಯೆಗಳು ಇವು ತಿಪಟೂರು ಕ್ಷೇತ್ರದ ನಿರ್ಣಾಯಕ ವಿಚಾರಗಳಾಗಿವೆ.
2023ರ ಅಖಾಡ
ಕಾಂಗ್ರೆಸ್ – ಕೆ.ಷಡಾಕ್ಷರಿ
ಬಿಜೆಪಿ – ಬಿ.ಸಿ.ನಾಗೇಶ್
ಜೆಡಿಎಸ್ – ಶಾಂತಕುಮಾರ್
ತುರುವೇಕೆರೆ ಕುರುಕ್ಷೇತ್ರ :
ತುರುವೇಕೆರೆಯಲ್ಲಿ ಹಾಲಿ ಶಾಸಕ ಬಿಜೆಪಿಗೆ ಸೇರಿದವರು. ಬಿಜೆಪಿಯ ಎ. ಎಸ್ ಜಯರಾಮ್ ಕಳೆದ ಚುನಾವಣೆಯಲ್ಲಿ 60,710 ಮತಗಳನ್ನು ಪಡೆದು, 2,049 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮಸಾಲೆ ಜಯರಾಮ್ ಗೆಲುವಿನ ಅಂಶಗಳು :
ಮೊದಲ ಬಾರಿಗೆ ಜಯರಾಮ್ ಸೋಲು ಅನುಭವಿಸಿದ್ದರಿಂದ ಆ ಅನುಕಂಪ ಕೆಲಸ ಮಾಡಿತ್ತು. ಜೆಡಿಎಸ್ ಪಕ್ಷದ ಒಳ ಆಂತರಿಕ ಗಲಾಟೆಯಿಂದ ಗುಬ್ಬಿ ತಾಲೂಕಿನ ಸಿ,ಎಸ್ ಪುರ ಹೋಬಳಿಯಲ್ಲಿ ಹೆಚ್ಚಿನ ಮತಗಳು ಬಿಜೆಪಿ ಬಂದವು. (ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಂದ ೩೫ ಸಾವಿರಕ್ಕೂ ಹೆಚ್ಚು ಸಂಖ್ಯೆಯ ಲಿಂಗಾಯಿತರು ಬಿಜೆಪಿ ಕೈ ಹಿಡಿದರು.
ಮತ-ಜಾತಿವಾರು ಲೆಕ್ಕ
ಒಟ್ಟು ಮತಗಳು- 182652
ಮಹಿಳೆಯರು-91718
ಪುರುಷರು-90932
ಒಕ್ಕಲಿಗರು-60,000
SC-ST-30,000
ಲಿಂಗಾಯತರು-41,000
ಇತರೆ- 49665
ತುರುವೇಕೆರೆ ವಿಧಾನಸಭಾ ಕ್ಷೇತ್ರ
ಒಕ್ಕಲಿಗ ಮತಗಳು ಹಾಗೂ ತುರುವೇಕೆರೆ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ವಿಚಾರ ಗೆಲುವಿಗೆ ನಿರ್ಣಾಯಕವಾಗಲಿದೆ.
2023ರ ಅಖಾಡ
ಕಾಂಗ್ರೆಸ್ – ಬೆಮೆಲ್ ಕಾಂತರಾಜು
ಬಿಜೆಪಿ – ಮಸಾಲೆ ಜಯರಾಂ
ಜೆಡಿಎಸ್ – ಎಂ.ಟಿ.ಕೃಷ್ಣಪ್ಪ
ಕುಣಿಗಲ್ ಕುರುಕ್ಷೇತ್ರ :
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜನ
ಕಾಂಗ್ರೆಸ್ ಪಕ್ಷದ ಡಾ. ಎಚ್. ಡಿ ರಂಗನಾಥ್ ಅವರನ್ನು 6500 ಮತಗಳ ಅಂತರದಿಂದ ಗೆಲ್ಲಿಸಿದ್ದರು.
ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದು :
ಡಿ.ನಾಗರಾಜಯ್ಯ ಕುಟುಂಬ ರಾಜಕೀಯಕದಿಂದ ಬೇಸತ್ತಿದ್ದ ಜನ ಹೊಸ ಮುಖಕ್ಕೆ ಅವಕಾಶ ನೀಡಲು ಮುಂದಾಗಿದ್ದರು. ಬಿ.ಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಕೂಡ ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯನ ಸ್ವಂತ ಸಹೋದರ ಆದ ಕಾರಣ ಜನರು ನಾಗರಾಜಯ್ಯ ಕುಟುಂಬದವರನ್ನು ಹೊರತು ಪಡಿಸಿ ಹೊಸ ಅಭ್ಯರ್ಥಿ ಬಯಸಿದ್ದರು. ಮಾಜಿ ಸಂಸದ ಮುದ್ದಹನುಮೇಗೌಡನ ಪ್ರಭಾವದಿಂದಾಗಿ ಒಕ್ಕಲಿಗ ಮತ ಸೆಳೆಯುವುದು ಸುಲಭವಾಗಿತ್ತು. ಡಿ,ಕೆ ಸಹೋದರರ ಸಂಬಂಧಿ ಡಾ.ರಂಗನಾಥ್ ಸಕಲ ಸಂಪನ್ಮೂಲ ಬಳಕೆ ಮಾಡಿದ್ದರು.
ಕುಣಿಗಲ್ ವಿಧಾನಸಭಾ ಕ್ಷೇತ್ರ :
ಒಕ್ಕಲಿಗ ಸಮುದಾಯದ ಪ್ರಾಬಲ್ಯ, ಅಮೃತೂರು ಹೋಬಳಿಗೆ ಹೇಮಾವತಿ ನೀರು ಹರಿಸುವುದು, ಡಾ.ರಂಗನಾಥ್ ಕುಣಿಗಲ್ ನಲ್ಲಿ ಶಾಸಕರಾದ ಬಳಿಕ ಹೆಚ್ಚಿದ ಕಲ್ಲುಗಣಿಗಾರಿಕೆ ಮಾಫೀಯಾದ ಬಗ್ಗೆ ಸ್ಥಳೀಯರಲ್ಲಿ ಆಕ್ರೋಶವಿದೆ. ಇದು ಕೂಡಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಸೋಲು/ಗೆಲುವಿಗೆ ಕಾರಣವಾಗಲಿದೆ.
ಮತ-ಜಾತಿವಾರು ಲೆಕ್ಕ :
ಒಟ್ಟು ಮತದಾರರು 198717
ಪುರುಷ ಮತದಾರರು 99876
ಮಹಿಳಾ ಮತದಾರರು 98838
ಒಕ್ಕಲಿಗರು :98000
ಮುಸ್ಲಿಂ :21000
ಕುರುಬರು :9000
SC-ST : 25000
ತಿಗಳ : 8000
ಇತರೆ : 37000
2023ರ ಅಖಾಡ
ಕಾಂಗ್ರೆಸ್ – ಡಾ.ಕೆ.ರಂಗನಾಥ್
ಬಿಜೆಪಿ – ಡಿ.ಕೃಷ್ಣಕುಮಾರ್
ಜೆಡಿಎಸ್ – ಡಾ.ರವಿ
ತುಮಕೂರು ನಗರ ವಿಧಾನಸಭಾ ಕ್ಷೇತ್ರ :
2018ರ ಚುನಾವಣೆಯಲ್ಲಿ ಬಿಜೆಪಿಯ ಜಿ. ಬಿ ಜ್ಯೋತಿಗಣೇಶ್ 60,421 ಮತಗಳನ್ನು ಪಡೆದು, 5,293 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಜಿ.ಬಿ ಜ್ಯೋತಿಗಣೇಶ್ ಗೆಲುವಿನ ಅಂಶಗಳು :
ಕಾಂಗ್ರೆಸ್ ಸಂಪ್ರದಾಯಕ ಮತಗಳಾದ ಮುಸ್ಲಿಂ ವೋಟ್ ಗಳು ಚಲಾವಣೆಯಾಗದೆ ಮತದಾನದಿಂದ ಹೊರಗುಳಿದವು. ಹಿಂದೂಗಳ ಮತ ಒಗ್ಗೂಡಿಕೆಯಿಂದ ಜಾತಿ ಮರೆತು ಬಿಜೆಪಿ ಅಭ್ಯರ್ಥಿಗೆ ಮತ ನೀಡಿದರು. ನಿರೀಕ್ಷೆಗೂ ಮೀರಿ ಜೆಡಿಎಸ್ ಅಭ್ಯರ್ಥಿ ಮತಗಳಿಸಿದ್ದು, ಜಾತ್ಯಾತೀತ ಮತಗಳು ಹಂಚಿಕೆಯಾದವು. ಒಕ್ಕಲಿಗ ಸಮುದಾಯಕ್ಕೆ ಜೆಡಿಎಸ್ ಟಿಕೆಟ್ ನೀಡದ ಪರಿಣಾಮ ಆ ಸಮುದಾಯ ಜೆಡಿಎಸ್ ಗೆ ವಿರುದ್ಧವಾಗಿ ಬಿಜೆಪಿಗೆ ಮತಚಲಾಯಿಸಿತ್ತು.
ಮತ-ಜಾತಿವಾರು ಲೆಕ್ಕ
ಒಟ್ಟು ಮತದಾರರ ಸಂಖ್ಯೆ- 258875
ಮಹಿಳೆಯರು - 131848
ಪುರುಷರು-127001
ಮುಸ್ಲಿಂ-55000
ಲಿಂಗಾಯಿತರು-52000
ಒಕ್ಕಲಿಗರು-35000
ಎಸ್ ಸಿ -38000
ಮಾದಿಗ – 23000
ಕುರುಬರು-18000
ಇತರೆ -33597
ತುಮಕೂರು ನಗರ ವಿಧಾನಸಭಾ ಕ್ಷೇತ್ರ :
ಮುಸ್ಲಿಂ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕ, ಹಿಜಾಬ್-ಜಟಕಾ-ಹಲಾಲ್ ಕಟ್ - ಧರ್ಮಧಂಗಲ್ ವಿಚಾರದಿಂದ ಹಿಂದೂ ಮತಗಳು ಕ್ರೂಢೀಕರಣ ಸಾಧ್ಯತೆ. ಸ್ಮಾರ್ಟ್ ಸಿಟಿ ಕಾಮಗಾರಿಯ ಯಡವಟ್ಟು ಬಗ್ಗೆ ತುಮಕೂರು ಸ್ಥಳೀಯ ವಾಸಿಗಳ ಆಕ್ರೊಶವಿದೆ.
2023ರ ಅಖಾಡ
ಜೆಪಿಪಿ -ಜಿ.ಬಿ ಜ್ಯೋತಿಗಣೇಶ್
ಜೆಡಿಎಸ್ -ಎನ್.ಗೋವಿಂದರಾಜು
ಕಾಂಗ್ರೆಸ್-ಇಕ್ಬಾಲ್ ಅಹಮದ್
ಪಕ್ಷೇತರ-ಸೊಗಡು ಶಿವಣ್ಣ (BJP ಬಂಡಾಯ)
ತುಮಕೂರು ಗ್ರಾಮೀಣ ಕುರುಕ್ಷೇತ್ರ :
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ
ಜೆಡಿಎಸ್ ನ ಡಿ. ಸಿ ಗೌರಿಶಂಕರ್ 5,640 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.
ಬಿ. ಗೌರಿಶಂಕರ್ ಗೆಲುವಿನ ಅಂಶಗಳು :
1. ಸತತ ಎರಡು ಬಾರಿ ಗೆಲುವು ಸಾಧಿಸಿದ ಸುರೇಶ್ ಗೌಡರ ಬಗ್ಗೆ ಕ್ಷೇತ್ರದಲ್ಲಿ ಅಸಮಧಾನವಿತ್ತು, ಇದು ಜೆಡಿಎಸ್ ಅಭ್ಯರ್ಥಿ ಗಲುವಿಗೆ ಪ್ಲಸ್ ಪಾಯಿಂಟ್ ಆಯ್ತು.
2. ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ- (ಮಾಜಿ ಸಚಿವ ಚನ್ನಿಗಪ್ಪ-ಜಿ.ಪರಮೇಶ್ವರ್ ಒಳಒಪ್ಪಂದ) ಕಾಂಗ್ರೆಸ್ ಅಭ್ಯರ್ಥಿ ರಾಯಸಂದ್ರ ರವಿಕುಮಾರ್ ಠೇವಣಿ ಕಳೆದುಕೊಂಡರು.
ಮತ-ಜಾತಿ ಲೆಕ್ಕಾಚಾರ
ಒಟ್ಟು ಮತದಾರರ ಸಂಖ್ಯೆ- 208725
ಮಹಿಳಾ ಮತದಾರರು-105454
ಪುರುಷ ಮತದಾರರು-103252
ಒಕ್ಕಲಿಗರು-6೦೦೦೦
ಲಿಂಗಾಯತ-45೦೦೦
SC-ST-75೦೦೦
ಮುಸ್ಲಿಂ-4೦೦೦೦
ಇತರೆ-9083
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ :
ಒಕ್ಕಲಿಗ, ಲಿಂಗಾಯತ, ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ. ವೃಷಭಾವತಿ ನದಿ ನೀರನ್ನು ತುಮಕೂರು ಗ್ರಾಮಾಂತರದ ಗೂಳೂರು ಹೋಬಳಿ ಕೆರೆಗೆ ತುಂಬಿ ಯೋಜನೆಗೆ ಜಾರಿಗೆ ಬದ್ಧತೆ ತೋರುವವರಿಗೆ ಮತದಾರ ಕೈ ಹಿಡಿಯುವ ಸಾಧ್ಯತೆ. ಕೊರೋನಾ ಸಂಕಷ್ಟದಲ್ಲಿ ಜನರೊಂದಿಗೆ ನಡೆದು ಕೊಂಡ ರೀತಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮುಖ್ಯ ಪಾತ್ರ ವಹಿಸಲಿವೆ.
2023ರ ಅಖಾಡ
ಜೆಡಿಎಸ್-ಡಿಸಿ ಗೌರಿಶಂಕರ್
ಕಾಂಗ್ರೆಸ್-ಷಣ್ಮುಖಪ್ಪ
ಬಿಜೆಪಿ-ಬಿ.ಸುರೇಶ್ಗೌಡ
ಕೊರಟಗೆರೆ ಕುರುಕ್ಷೇತ್ರ :
ಕಾಂಗ್ರೆಸ್ ನ ಡಾ. ಜಿ. ಪರಮೇಶ್ವರ್ 81598 ಮತಗಳನ್ನು ಪಡೆಯುವ ಮೂಲಕ 7619 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಡಾ. ಜಿ ಪರಮೇಶ್ವರ್ ಗೆಲುವಿನ ಅಂಶಗಳು :
1. ಪರಮೇಶ್ವರ್ ಸಿಎಂ ಆಗ್ತಾರೆ ಅನ್ನುವ ಆಸೆಯಿಂದ ಮತದಾರರು ಪರಮೇಶ್ವರ್ ಗೆ ಒಲುವು ತೋರಿಸಿದ್ದರು.
2.2013ರ ಸೋಲಿನ ಅನುಕಂಪ ಜಿ.ಪರಮೇಶ್ವರ್ ಗೆಲುವಿಗೆ ಕಾರಣವಾಯ್ತು.
3.ಕಾಂಗ್ರೆಸ್ ಮುಖಂಡ-ಸಂಸದ ಮುದ್ದಹನುಮೇಗೌಡರ ಗೆಲುವಿನ ಲೆಕ್ಕಚಾರ- ಕ್ಷೇತ್ರದ ಒಕ್ಕಲಿಗ ಮತಗಳನ್ನು ಕ್ರೋಢೀಕರಿಸಿದ್ದರು.
4. ಕ್ಷೇತ್ರದ ಹೊರಗಿನ ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ಲಿಂಗಾಯತರು ಪರಮೇಶ್ವರ್ ಗೆ ಬೆಂಬಲ ನೀಡಿದರು.
ಮತ-ಜಾತಿ ಲೆಕ್ಕಚಾರ :
ಕ್ಷೇತ್ರದ ಒಟ್ಟು ಮತಗಳು-204598
ಮಹಿಳಾ ಮತದಾರರು-102495
ಪುರುಷ ಮತದಾರರು-102086
SC-ST- 80,000
ಒಕ್ಕಲಿಗರು-36000
ಲಿಂಗಾಯತ-35,000
ಗೊಲ್ಲರು-15೦೦೦
ಮುಸ್ಲಿಂ-18000
ಕುರುಬರು-12,000
ಇತರೆ-8466
ಕೊರಟಗೆರೆ ವಿಧಾನಸಭಾ ಕ್ಷೇತ್ರ :
ಎಸ್ಪಿ ಮೀಸಲು ಕ್ಷೇತ್ರ -ದಲಿತ ಸಮುದಾಯದ ಮತಗಳು ನಿರ್ಣಾಯಕ - ಎತ್ತಿನಹೊಳೆ ನೀರು ಹರಿಸುವ ಯೋಜನೆ ಜಾರಿಯಲಿದ್ದು, ಕಾಮಗಾರಿ ತ್ವರಿತವಾಗಿ ಮುಗಿಸಿ ನೀರು ಹರಿಸಬೇಕಿದೆ. ಹೀಗಾಗಿ ಯಾವ ಪಕ್ಷ-ಸರ್ಕಾರ- ಅಭ್ಯರ್ಥಿ ಈ ವಿಚಾರವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆಯೋ ಆ ಅಭ್ಯರ್ಥಿ ಗೆಲುವಿಗೆ ಇದು ಕಾರಣವಾಗಲಿದೆ.
2023ರ ಅಖಾಡ :
ಕಾಂಗ್ರೆಸ್-ಡಾ.ಜಿ.ಪರಮೇಶ್ವರ್
ಬಿಜೆಪಿ-ಅನಿಲ್ ಕುಮಾರ್
ಜೆಡಿಎಸ್-ಸುಧಾಕರ್ ಲಾಲ್
ಗುಬ್ಬಿ ಕುರುಕ್ಷೇತ್ರ :
ಜೆಡಿಎಸ್ ಪಕ್ಷದ ಎಸ್. ಆರ್ ಶ್ರೀನಿವಾಸ್ 9081 ಮತಗಳ ಅಂತರದಿಂದ ಗೆದ್ದಿದ್ದರು.
ಎಸ್. ಆರ್ ಶ್ರೀನಿವಾಸ್ ಗೆಲುವಿನ ಅಂಶಗಳು
1.ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ಲಿಂಗಾಯತ ಸಮುದಾಯದ ದಿಲೀಪ್ ಕುಮಾರ್ 40ಸಾವಿರಕ್ಕೂ ಹೆಚ್ಚು ಮತಗಳಿಸಿದ್ದು, ಬಿಜೆಪಿ ಸೋಲಿಗೆ ಕಾರಣವಾಯಿತು.
2.ಚುನಾವನೆ ಕೊನೆದಿನ ಕ್ಷೇತ್ರದಿಂದ ಪರಾರಿಯಾದ ಕಾಂಗ್ರೆಸ್ ಅಭ್ಯರ್ಥಿ ಬಾಲಾಜಿ ಕುಮಾರ್. ಎರಡು ಪಕ್ಷಗಳ ದೌರ್ಬಲ್ಯಗಳು ಜನಪ್ರಿಯವಾಗಿದ್ದ ಎಸ್. ಆರ್ ಶ್ರೀನಿವಾಸ್ ಗೆಲುವಿಗೆ ಕಾರಣವಾಯ್ತು.
ಮತ-ಜಾತಿವಾರು ಲೆಕ್ಕ
ಕ್ಷೇತ್ರದ ಒಟ್ಟು ಮತಗಳು - 181086
ಮಹಿಳಾ ಮತದಾರರು- 90592
ಪುರುಷ ಮತದಾರರು-90483
ಲಿಂಗಾಯತ - 47000
SC-ST - 40000
ಒಕ್ಕಲಿಗರು 32000
ಗೊಲ್ಲರು - 23000
ತಿಗಳ -18000
ಮುಸ್ಲಿಂ - 13000
ಕುರುಬರು -8500
ಬ್ರಾಹ್ಮಣ -600
ಇತರೆ -15000
2023ರ ಅಖಾಡ
ಕಾಂಗ್ರೆಸ್ – ಎಸ್.ಆರ್.ಶ್ರೀನಿವಾಸ್
ಬಿಜೆಪಿ – ದಿಲೀಪ್ ಕುಮಾರ್
ಜೆಡಿಎಸ್ – ಬಿ.ಎಸ್.ನಾಗರಾಜು
ಶಿರಾ ಕುರುಕ್ಷೇತ್ರ (ಬೈ ಎಲೆಕ್ಷನ್) :
ಶಿರಾವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಿ. ಎಂ ರಾಜೇಶ್ ಗೌಡ- 13,414 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರಾಜೇಶ್ ಗೌಡ ಗೆಲುವಿನ ಅಂಶಗಳು.
1. ಬೈ ಎಲೆಕ್ಷನ್ ನಲ್ಲಿ ಆಢಳಿತ ರೂಡ ಪಕ್ಷಕ್ಕೆ ಗೆಲುವು ಸಹಜವಾಗಿದೆ.
2. ಚುನವಣಾ ಚಾಣಿಕ್ಯ ವಿಜೇಂದ್ರ ಚುನಾವಣೆ ತಂತ್ರಗಾರಿ - ಬಿಜೆಪಿ ನಾಯಕರ ಸಾಮೂಹಿಕ ಹೋರಾಟ
3. ಸತತ ಹತ್ತು ಚುನಾವಣೆಯಲ್ಲಿ ಜಯಚಂದ್ರ ಸ್ಪರ್ಧೆ ಮಾಡಿದ್ದರು. ಹೀಗಾಗಿ ಮತದಾರರು. ಹೊಸ ಮುಖ ಬಯಸಿದ್ದರು .
4. ಪ್ರಬಲ ಜೆಡಿಎಸ್ ಅಭ್ಯರ್ಥಿ ಕೊರತೆ- ವಿದ್ಯಾವಂತರಾಗಿದ್ದ ರಾಜೇಶ್ ಗೌಡ ಗೆಲುವಿಗೆ ಕಾರಣವಾಯ್ತು.
2018 ಚುನಾವಣೆಯ ವಿವರ
ಮತ-ಜಾತಿವಾರು ಲೆಕ್ಕ :
ಒಟ್ಟು ಮತದಾರರ ಸಂಖ್ಯೆ:22,3604
ಮಹಿಳಾ ಮತದಾರರ ಸಂಖ್ಯೆ:110796
ಪುರುಷ ಮತದಾರರ ಸಂಖ್ಯೆ:112795
ಒಕ್ಕಲಿಗ :57,061 (ಕುಂಚಿಟಿಗ)
ದಲಿತ : 46,953 (ಎಡ-ಬಲ)
ಯಾದವ : 24,571 (ಗೊಲ್ಲ, ಕಾಡುಗೊಲ್ಲ)
ಮುಸ್ಲಿಂ : 22,630
ನಾಯಕ : 15,089 (ಎಸ್.ಟಿ)
ಕುರುಬ : 11,407
ಲಿಂಗಾಯತ: 5,349
ಇತರೆ - 38335
ಶಿರಾ ವಿಧಾನಸಭಾ ಕ್ಷೇತ್ರ :
ಕುಂಚಿಟಿಗ ಒಕ್ಕಲಿಗ, ಗೊಲ್ಲ ಸಮುದಾಯದ ಮತಗಳು ಭದ್ರಮೇಲ್ದಂಡೆ ನೀರಾವರಿ ಯೋಜನೆ, ಹೊಸ ಹಾಗೂ ಉತ್ಸಾಹಿ ಅಭ್ಯರ್ಥಿಯ ನಿರೀಕ್ಷೆ ಕ್ಷೇತ್ರದಲ್ಲಿದೆ. ಪ್ರಬಲ ವ್ಯಕ್ತಿಯ ಜೊತೆ ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಅಭ್ಯರ್ಥಿಯ ಕಡೆ ಹೆಚ್ಚು ಒಲವು.
2023ರ ಅಖಾಡ :
ಕಾಂಗ್ರೆಸ್-ಟಿ.ಬಿ.ಜಯಚಂದ್ರ
ಬಿಜೆಪಿ-ಡಾ.ರಾಜೇಶ್ಗೌಡ
ಜೆಡಿಎಸ್-ಆರ್.ಉಗ್ರೇಶ್
ಪಾವಗಡ ಕುರುಕ್ಷೇತ್ರ :
ಕಳೆದ ಚುನಾವಣೆಯಲ್ಲಿ ಪಾವಗಡ ಕುರುಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ವೆಂಕಟರಮಣಪ್ಪ ಕೈ ಹಿಡಿದಿದ್ದರು. ಆದರೆ ಇವರು ಇಲ್ಲಿ ಗೆದ್ದಿದ್ದು 409 ಮತಗಳ ಅಂತರದಿಂದ.
ವೆಂಕಟರಮಣಪ್ಪ ಗೆಲುವಿನ ಅಂಶಗಳು :
1. ಈ ಕ್ಷೇತ್ರದಲ್ಲಿ ಒಂದು ಸಾರಿ ಗೆದ್ದ ಪಕ್ಷ ಮತ್ತೊಂದು ಅವಧಿಯಲ್ಲಿ ಸಾರಿ ಗೆಲುವು ಸಾಧಿಸುವುದಿಲ್ಲ. ಒಂದು ಸಾರಿ ಜೆಡಿಎಸ್ ಮತ್ತೊಂದು ಸಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.
ಮತ-ಜಾತಿವಾರು ಲೆಕ್ಕ
ಕ್ಷೇತ್ರದ ಒಟ್ಟು ಮತದಾರರು-193007
ಮಹಿಳೆ- 94034 ಪುರುಷ -98963
ಎಸ್.ಸಿ- 72,000 (ಎಡ-ಬಲ)
ಎಸ್.ಟಿ- 53000
ಯಾದವ- 42,000 (ಗೊಲ್ಲ-ಕಾಡುಗೊಲ್ಲ)
ಒಕ್ಕಲಿಗರು-31000
ಮುಸ್ಲಿಂ :19.000
ಇತರೆ -6397
ಪಾವಗಡ ವಿಧಾನಸಭಾ ಕ್ಷೇತ್ರ :
ಎಸ್.ಸಿ ಮೀಸಲು ಕ್ಷೇತ್ರ, ದಲಿತರು, ಯಾದವರು, ಎಸ್ಟಿ ಸಮುದಾಯದ ಮತಗಳೇ ನಿರ್ಣಾಯಕ. ಪ್ಲೋರೈಡ್ ನೀರು ಸಮಸ್ಯೆ, ಭದ್ರಾಮೇಲ್ದಂಡೆ ನೀರಾವರಿ ಯೋಜನೆ ಈ ವಿಚಾರಗಳು ಕ್ಷೇತ್ರದ ನಿರ್ಣಾಯಕವಾಗಲಿದೆ. ಮೂರು ಪಕ್ಷಗಳಲ್ಲಿಯೂ ಬಂಡಾಯ ಇದೆ. ಬಂಡಾಯ ಶಮನ ಮಾಡಿಕೊಂಡು ಜನರ ವಿಶ್ವಾಸಗಳಿಸುವ ವ್ಯಕ್ತಿಗೆ ಸಿಗಲಿದೆ ಮನ್ನಣೆ.
2023ರ ಅಖಾಡ
ಕಾಂಗ್ರೆಸ್-ವಿ.ವೆಂಕಟೇಶ್
ಬಿಜೆಪಿ-ಕೃಷ್ಣನಾಯ್ಕ್
ಜೆಡಿಎಸ್-ತಿಮ್ಮರಾಯಪ್ಪ
ಮಧುಗಿರಿ ಕುರುಕ್ಷೇತ್ರ
ಜೆಡಿಎಸ್ ನ ಎಂ. ವಿ ವೀರಭದ್ರಯ್ಯ 18,574 ಮತಗಳ ಅಂತರದಿಂದ ಗೆಲುವುದು ಸಾಧಿಸಿದ್ದಾರೆ.
ಮತ-ಜಾತಿವಾರು ಲೆಕ್ಕ
ಕ್ಷೇತ್ರದ ಒಟ್ಟು ಮತಗಳು - 193467
ಮಹಿಳೆ- 96299 ಪುರುಷರು-97163
ಒಕ್ಕಲಿಗ/ಕುಂಚಿಟಿಗ-46500
ಎಸ್ಸಿ- 50500
ಎಸ್ ಟಿ- 23000
ಕುರುಬ- 13000
ಲಿಂಗಾಯತರು- 8500
ಗೊಲ್ಲ-16500
ಮುಸ್ಲಿಂ- 13000
ಇತರೆ: 19214
ಮಧುಗಿರಿ ವಿಧಾನಸಭಾ ಕ್ಷೇತ್ರ:
ಇಲ್ಲಿ ಎದುರಾಳಿ ರಾಜಣ್ಣನನ್ನ ಸೋಲಿಸಲು ಜಿದ್ದಿಗೆ ಬಿದ್ದಿರುವ ದೇವೇಗೌಡ ಕುಟುಂಬ. ಬಿಜೆಪಿಯಿಂದ ನಾಯಕ ಸಮುದಾಯದ ಎಲ್.ಸಿ.ನಾಗರಾಜ್ ಗೆ ಟಿಕೆಟ್ ನೀಡಲಾಗಿದೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ , ಕುರುಬಾ, ದಲಿತ ಮತಗಳೇ ನಿರ್ಣಾಯಕವಾಗಲಿವೆ.
2023ರ ಅಖಾಡ
ಜೆಡಿಎಸ್ -ಎಂ.ವೀರಭದ್ರಯ್ಯ
ಕಾಂಗ್ರೆಸ್-ಕೆ.ಎನ್.ರಾಜಣ್ಣ
ಬಿಜೆಪಿ - ಎಲ್.ಸಿ.ನಾಗರಾಜ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.